ಇತ್ತೀಚಿನ ಸುದ್ದಿ
ಪುಷ್ಪ ಸಿನಿಮಾದ ಸ್ಟೈ ಲ್ ನಲ್ಲಿ ಬೆಂಗಳೂರಿಗೆ ಗಾಂಜಾ ಸಪ್ಲೈ: ಮಂಗಳೂರು ಮೂಲದ ಇಬ್ಬರ ಬಂಧನ
24/07/2022, 19:23
ಮಂಗಳೂರು(reporterkarnataka.com): ಪುಷ್ಪ ಸಿನಿಮಾ ಸ್ಟೈಲ್‌ನಲ್ಲಿ ಬೊಲೇರೋ ವಾಹನದಲ್ಲಿ ಸುಮಾರು 1 ಕೋಟಿ ರೂ. ಮೌಲ್ಯದ ಗಾಂಜಾ ಸಾಗಾಟ ಮಾಡುತ್ತಿದ್ದ 7 ಮಂದಿ ಆರೋಪಿಗಳನ್ನು ಬೆಂಗಳೂರಿನ ಬೇಗೂರು ಪೊಲೀಸರು ಬಂಧಿಸಿದ್ದಾರೆ.
ಬೊಲೇರೋ ಗೂಡ್ಸ್ ವಾಹನದ ಲಗೇಜ್ ಇಡುವ ಪ್ಲಾಟ್‌ಫಾರಂ ಕೆಳಭಾಗದಲ್ಲಿ ದೊಡ್ಡ ಬಾಕ್ಸ್ ಮಾಡಿಕೊಂಡು ಅದರಲ್ಲಿ ಗಾಂಜಾ ಅಡಗಿಸಿಟ್ಟು ಆಂಧ್ರಪ್ರದೇಶದಿಂದ ಬೆಂಗಳೂರಿಗೆ ಸಾಗಾಟ ಮಾಡುತ್ತಿದ್ದರು.
ಬಂಧಿತರಲ್ಲಿ ಇಬ್ಬರು ಮಂಗಳೂರು ಮೂಲದವರೆಂದು ತಿಳಿದು ಬಂದಿದೆ. ಬಂಧಿತರಿಂದ 1 ಕೋಟಿ ರೂ ಮೌಲ್ಯದ 175 ಕೆ.ಜಿ. ಗಾಂಜಾ ವಶಕ್ಕೆ ಪಡೆದಿದ್ದಾರೆ.
ಬಂಧಿತರನ್ನು ಅರವಿಂದ್, ಪವನ್, ಪ್ರಭು, ಪ್ರಸಾದ್, ಪತ್ತಿ ಸಾಯಿಚಂದ್ರ ಪ್ರಕಾಶ್, ಅಮ್ಮದ್ ಇತಿಯಾರ್, ನಜೀಮ್ ಎಂದು ಗುರುತಿಸಲಾಗಿದೆ.
ಬಂಧಿತರಲ್ಲಿ ಅಮ್ಮದ್ ಇತಿಯಾರ್, ನಜೀಮ್ ಮಂಗಳೂರು ಮೂಲದವರು, ಆ ಪೈಕಿ ನಜೀಂ ರೌಡಿಶೀಟರ್ ಆಗಿದ್ದು, ಸದ್ಯ ಬಾಡಿ ವಾರಂಟ್ ಮೂಲಕ ಕೊಣಾಜೆ ಪೊಲೀಸರು ಆರೋಪಿಗಳನ್ನು ವಶಕ್ಕೆ ಪಡೆದಿದ್ದಾರೆ.
ಇವರು ಬೆಂಗಳೂರಿಗೆ ತಂದು ಅಲ್ಲಿಂದ ಕಾಲೇಜು, ಪಬ್, ಕಬ್ 3 ಗಳಿಗೆ ಆಟೋ ರಿಕ್ಷಾದಲ್ಲಿ ಗಾಂಜಾ ಮಾರಾಟ ಮಾಡುತ್ತಿದ್ದರು ಎಂದು ತಿಳಿದು ಬಂದಿದೆ.
ಇದೀಗ ಆರೋಪಗಳನ್ನು ಬಂಧಿಸಿ ಹೆಚ್ಚಿನ ವಿಚಾರಣೆಯನ್ನು ಮಾಡುತ್ತಿದ್ದಾರೆ. ಪುಷ್ಪ ಸಿನಿಮಾದಿಂದ ಪ್ರೇರಣೆಗೊಂಡು ಗಾಂಜಾ ಸಾಗಾಟ ಮಾಡುತ್ತಿದ್ದರು ಎಂದು ತಿಳಿದು ಬಂದಿದೆ.