ಇತ್ತೀಚಿನ ಸುದ್ದಿ
ಪುನೀತ್ ಉಪಗ್ರಹ ಚಿತ್ರಕಲಾ ಸ್ಪರ್ಧೆ: ಗಜೇಂದ್ರಗಡದ ಸುಹಾನ ತೋಟದ ಪ್ರಥಮ ಸ್ಥಾನ
03/12/2022, 19:11

ಗದಗ(reporterlarnataka.com): ಪುನೀತ್ ನ್ಯಾನೋ ಉಪಗ್ರಹ ಉಡಾವಣಾ ಯೋಜನೆಯಡಿ ಆಯೋಜಿಸಲಾಗಿದ್ದ ಆನ್‌ಲೈನ್ ಚಿತ್ರಕಲಾ ಸ್ಪರ್ಧೆಯಲ್ಲಿ ಗಜೇಂದ್ರಗಡದ ಬಾಲಕಿಯರ ಪ್ರೌಢಶಾಲೆಯ 9ನೇ ತರಗತಿ ವಿದ್ಯಾಾರ್ಥಿನಿ ಸುಹಾನ ರಾಜೇಸಾಬ ತೋಟದ ಜಿಲ್ಲೆಗೆ ಪ್ರಥಮ ಸ್ಥಾನ ಪಡೆದು ರಾಜ್ಯ ಮಟ್ಟಕ್ಕೆ ಆಯ್ಕೆಯಾಗಿದ್ದಾರೆ.
ಶ್ರೀ ಮಹಾವೀರ ಜೈನ ಪ್ರಾಥಮಿಕ ಮತ್ತು ಪ್ರೌಢಶಾಲೆಯ 10ನೇ ತರಗತಿಯ ಪೂನಮ್ ಆರ್. ಕಟಿಗಾರ ದ್ವಿತೀಯ ಸ್ಥಾನ, ಗಜೇಂದ್ರಗಡ ಬಾಲಕಿಯರ ಪ್ರೌಢ ಶಾಲೆಯ 10ನೇ ತರಗತಿಯ ಅನು ಕಡಬಲಕಟ್ಟಿ ತೃತೀಯ ಸ್ಥಾನ ಪಡೆದಿದ್ದಾರೆ.
ಆಂಧ್ರಪ್ರದೇಶದ ಶ್ರೀಹರಿಕೋಟಾದಲ್ಲಿ ನಡೆಯಲಿರುವ ಪುನೀತ್ ಉಪಗ್ರಹ ಉಡಾವಣೆಯನ್ನು ವೀಕ್ಷಿಸಲು ರಾಜ್ಯದ ವಿದ್ಯಾರ್ಥಿಗಳಿಗೆ ಅವಕಾಶ ನೀಡಲಾಗಿದೆ. ಆದರೆ ಪುನೀತ್ ಉಪಗ್ರಹ ಉಡಾವಣೆ ವೀಕ್ಷಿಸಲು ಅವಕಾಶ ಪಡೆಯಲು 8,9 ಮತ್ತು 10ನೇ ತರಗತಿಯ ವಿದ್ಯಾರ್ಥಿಗಳಿಗೆ ಚಿತ್ರಕಲೆ, ರಸಪ್ರಶ್ನೆ ಸ್ಪರ್ಧೆಗಳನ್ನು ಏರ್ಪಡಿಸಲಾಗಿತ್ತು.
ಮೊದಲನೇ ಹಂತದಲ್ಲಿ ಜಿಲ್ಲಾ ಮಟ್ಟದಲ್ಲಿ ಆಯ್ಕೆಯಾದ ವಿದ್ಯಾಾರ್ಥಿಗಳನ್ನು ಎರಡನೇ ಹಂತದ ರಾಜ್ಯಮಟ್ಟಕ್ಕೆ ಕಳುಹಿಸಿಕೊಡಲಾಗುತ್ತದೆ. ಇಲ್ಲಿ ವಿಜೇತರಾದ ವಿದ್ಯಾರ್ಥಿಗಳನ್ನು ಉಚಿತವಾಗಿ ಶ್ರೀ ಹರಿಕೋಟಾಕ್ಕೆ ಕರೆದುಕೊಂಡು ಹೋಗಲಾಗುತ್ತದೆ. ಈ ವೇಳೆ ವಿದ್ಯಾರ್ಥಿಗಳು ಪುನೀತ್_ ಉಪಗ್ರಹ (ಕೆಜಿಎಸ್-3 ಸ್ಯಾಟ್) ಉಡಾವಣೆ ಪ್ರಕ್ರಿಯೆ ವೀಕ್ಷಿಸಬಹುದಾಗಿದೆ.