ಇತ್ತೀಚಿನ ಸುದ್ದಿ
ಪುನೀತ್ ರಾಜ್ ಕುಮಾರ್ ಪತ್ನಿ ಅಶ್ವಿನಿ ತಂದೆ ಹೃದಯಾಘಾತಕ್ಕೆ ಬಲಿ: ಅಳಿಯನ ಸಾವಿನಿಂದ ನೊಂದಿದ್ದ ಮಾವ
20/02/2022, 21:37
ಬೆಂಗಳೂರು(reporterkarnataka.com): ಪವರ್ ಸ್ಟಾರ್ ದಿವಂಗತ ಪುನೀತ್ ರಾಜ್ ಕುಮಾರ್ ಅವರ ಪತ್ನಿ ಅಶ್ವಿನಿ ಅವರ ತಂದೆ ರೇವನಾಥ್ ಇಂದು ಹೃದಯಾಘಾತದಿಂದ ಮೃತಪಟ್ಟಿದ್ದಾರೆ.
ಪುನೀತ್ ರಾಜ್ ಕುಮಾರ್ ನಿಧನ ಬಳಿಕ ರೇವನಾಥ್ ಅವರು ಶಾಕ್ ಗೆ ಒಳಗಾಗಿದ್ದರು.ಅವರು ಇಂದು ಎಂ.ಎಸ್. ರಾಮಯ್ಯ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದರು.
ಚಿಕ್ಕಮಗಳೂರು ಜಿಲ್ಲೆಯ ಮೂಡುಗೆರೆ ತಾಲೂಕಿನ ಭಾಗಮನೆಯವರಾದ ರೇವನಾಥ್ ಅವರು ಮೊದಲಿಗೆ ಚಿಕ್ಕಮಗಳೂರಿನ ಕಾಲೇಜ್ ವೊಂದರಲ್ಲಿ ಉಪನ್ಯಾಸಕರಾಗಿದ್ದರು. ನಂತರ ಅವರು ಬಿಬಿಎಂಪಿ ಎಂಜಿನಿಯರ್ ಆಗಿ ಸೇವೆ ಸಲ್ಲಿಸಿದ್ದರು. ರೇವನಾಥ್ ಅವರು ಮೂವರು ಮಕ್ಕಳಲ್ಲಿ ಅಶ್ವಿನಿ ಅವರು ಮೊದಲನೆಯವರು. ರೇವನಾಥ್ ಅವರು ಮಾಜಿ ಸಚಿವ ಡಿ.ಬಿ. ಚಂದ್ರೇಗೌಡ ಅವರ ನಿಕಟ ಸಂಬಂಧಿಯಾಗಿದ್ದಾರೆ.