ಇತ್ತೀಚಿನ ಸುದ್ದಿ
ಪಂಪ್ ವೆಲ್ ನಿಂದ ಕಾಂಗ್ರೆಸ್ ಅಭ್ಯರ್ಥಿ ಪದ್ಮರಾಜ್ ಪೂಜಾರಿ ರೋಡ್ ಶೋ: ಉರಿ ಬಿಸಿಲಿನಲ್ಲಿ ಕಾಲ್ನಡಿಗೆಯಲ್ಲೇ ಸಾಗಿ ಪತಿ ಪರ ಮತಯಾಚಿಸಿದ ಸಾಯಿ ರಶ್ಮಿ!
24/04/2024, 13:03
ಚಿತ್ರ:ಅನುಷ್ ಪಂಡಿತ್ ಮಂಗಳೂರು
ಮಂಗಳೂರು(reporterkarnataka.com): ಮಂಗಳೂರಿನ ಉತ್ತರದ ಕಡೆಯ ‘ಗೇಟ್ ವೇ’ ಎಂದೇ ಪರಿಗಣಿಸಲ್ಪಟ್ಟ ನಗರದ ಪಂಪ್ ವೆಲ್ ವೃತ್ತದಿಂದ ಕಣ್ಣೂರು ವರೆಗೆ ಕಾಂಗ್ರೆಸ್ ಅಭ್ಯರ್ಥಿ ಪದ್ಮರಾಜ್ ಆರ್. ಪೂಜಾರಿ ಅವರ ಬೃಹತ್ ರೋಡ್ ಶೋ ನಡೆದಿದ್ದು, ಪದ್ಮರಾಜ್ ಅವರ ಪತ್ನಿ ಸಾಯಿ ರಶ್ಮಿ ಅವರು ಉರಿ ಬಿಸಿಲಿನಲ್ಲಿ ರೋಡ್ ಶೋ ಕಾಲ್ನಡಿಗೆಯಲ್ಲಿ ಪಾಲ್ಗೊಂಡು ಜನರ ಗಮನ ಸೆಳೆದರು.
ಸಾಯಿ ರಶ್ಮಿ ಅವರು ತಂಪು ಕನ್ನಡಕ್ಕ ಧರಿಸಿಕೊಂಡು
ರೋಡ್ ಶೋ ನಲ್ಲಿ ಪಂಪವೆಲ್ ನಿಂದ ಕಣ್ಣೂರು ವರೆಗೆ
ನಡೆದೇ ಸಾಗಿ ಪತಿಯ ಪರವಾಗಿ ಮತಯಾಚಿಸಿದರು. ರೋಡ್ ಶೋನಲ್ಲಿ ಅಭ್ಯರ್ಥಿ ಹಾಗೂ ಇತರ ನಾಯಕರು ನಿಂತಿರುವ ತೆರೆದ ವಾಹನವನ್ನು ಏರುವಂತೆ ಪಕ್ಷದ ನಾಯಕರು, ಮುಖಂಡರು ಹಾಗೂ ಕಾರ್ಯಕರ್ತರು ಒತ್ತಾಯಿಸಿದರೂ ಸಾಯಿ ರಶ್ಮಿ ಅವರು ಉರಿ ಬಿಸಿಲಿನಲ್ಲಿ ನಡೆಯುತ್ತಲೇ ಸಾಗಿದರು. ಮಂಗಳೂರು ಮಹಾನಗರಪಾಲಿಕೆ ಪ್ರತಿಪಕ್ಷದ ನಾಯಕ ಪ್ರವೀಣ್ ಚಂದ್ರ ಆಳ್ವ ಅವರು ರೋಡ್ ಶೋ ನೇತೃತ್ವ ವಹಿಸಿದ್ದರು.