ಇತ್ತೀಚಿನ ಸುದ್ದಿ
ಪುದುವೆಟ್ಟು: ಮನೆಯಂಗಳದಲ್ಲಿ ಅಪ್ಪ- ಮಗನ ಶವ ಪತ್ತೆ; ವಿಷಪೂರಿತ ಅಣಬೆ ಸೇವನೆಯಿಂದ ಸಾವು?
23/11/2022, 19:52

ಬೆಳ್ತಂಗಡಿ(reporterkarnataka.com): ವಿಷಪೂರಿತ ಅಣಬೆ ಪದಾರ್ಥ ಸೇವಿಸಿ ಕುಟುಂಬದ ಇಬ್ಬರು ಸಾವನ್ನಪ್ಪಿದ ಘಟನೆ ಪುದುವೆಟ್ಟು ಸಮೀಪದ ಪಲ್ಲದಪಲ್ಕೆ ಎಂಬಲ್ಲಿ ನಡೆದಿದೆ.
ಮನೆಯ ಅಂಗಳದಲ್ಲಿ ಇಬ್ಬರ ಮೃತದೇಹ ಪತ್ತೆಯಾಗಿತ್ತು.
ಮೃತರನ್ನು ಮೀಯಾರುಪಾದೆ ಕೇರಿಮಾರು ನಿವಾಸಿಗಳಾದ ಗುರುವ(70) ಹಾಗೂ ಅವರ ಪುತ್ರ ಓಡಿ(45) ಎಂದು ಗುರುತಿಸಲಾಗಿದೆ.
ಮನೆಯಲ್ಲಿ ಗುರುವ ಮತ್ತು ಇಬ್ಬರು ಪುತ್ರರು ವಾಸವಾಗಿದ್ದರು.
ಮಂಗಳವಾರ ಇವರ ಇಬ್ಬರ ಮೃತದೇಹ ಮನೆ ಮುಂಭಾಗ ಬಿದ್ದಿರುವುದನ್ನು ಸ್ಥಳೀಯರು ಕಂಡು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.
ರಾತ್ರಿ ಕಾಡಿನ ವಿಷಪೂರಿತ ಅಣಬೆಯನ್ನು ಅಡುಗೆ ಮಾಡಿ ಸೇವಿಸಿರುವುದು ಮೇಲ್ನೋಟಕ್ಕೆ ಕಂಡುಬಂದಿದೆ.ಅಣಬೆ ಪದಾರ್ಥ ಸೇವನೆಯೇ ಸಾವಿಗೆ ಕಾರಣ ಎಂದು ಶಂಕಿಸಲಾಗಿದೆ.