ಇತ್ತೀಚಿನ ಸುದ್ದಿ
ಪುದುಚೇರಿ: ಖ್ಯಾತ ಸಂಗೀತಗಾರ ಡಾ. ಎನ್. ಸೋಮಶೇಖರ ಮಯ್ಯರಿಗೆ ಪ್ರತಿಷ್ಠಿತ ಗಾನ ಗಂಧರ್ವ ಪ್ರಶಸ್ತಿ ಪ್ರದಾನ
25/01/2026, 20:22
ಪುದುಚೇರಿ(reporterkarnataka.com): ಸಂಗೀತ ಕ್ಷೇತ್ರದಲ್ಲಿ ಅದ್ವಿತೀಯ ಸಾಧನೆ ಮಾಡಿದ ಹಿನ್ನೆಲೆಯಲ್ಲಿ ಅಮೆರಿಕನ್ ವಿಸ್ಡಂ ಪೀಸ್ ಎಜುಕೇಶನ್ ಯುನಿವರ್ಸಿಟಿ ನೀಡುವ ಪ್ರತಿಷ್ಠಿತ ಗಾನ ಗಂಧರ್ವ ಪ್ರಶಸ್ತಿಯನ್ನು ಖ್ಯಾತ ಸಂಗೀತಗಾರ ಡಾ. ಎನ್. ಸೋಮಶೇಖರ ಮಯ್ಯ ಅವರಿಗೆ ಪುದುಚೇರಿಯಲ್ಲಿ ನಡೆದ ಸಮಾರಂಭದಲ್ಲಿ ಪ್ರದಾನ ಮಾಡಲಾಯಿತು.
ದಕ್ಷಿಣ ಕನ್ನಡ ಜಿಲ್ಲೆಯ ಮೂಲತಃ ಬಂಟ್ವಾಳ ತಾಲೂಕಿನವರಾದ ಡಾ. ಮಯ್ಯ ಅವರು ವೃತ್ತಿಯಲ್ಲಿ ಸರಕಾರಿ ಅಧಿಕಾರಿ. ಹಾಗೆ ಪ್ರವೃತ್ತಿಯಲ್ಲಿ ಒಬ್ಬ ಮಹಾನ್ ಸಂಗೀತಕಾರ. ಶಾಸ್ತ್ರೀಯ ಸಂಗೀತ ಕ್ಷೇತ್ರದಲ್ಲಿ ಅವರು ಅನುಪಮ ಸೇವೆ ನೀಡಿದ್ದಾರೆ. ತನ್ನಲ್ಲಿ ಸುಪ್ತವಾಗಿದ್ದ ಸ್ವರ ಮಾಧುರ್ಯವನ್ನು ನೂರಾರು ಶಿಷ್ಯಂದಿರಿಗೆ ಧಾರೆ ಎರೆದ ಕೀರ್ತಿ ಅವರದ್ದಾಗಿದೆ.


ಡಾ ಮಯ್ಯ ಅವರು ಹಿಂದೂಸ್ತಾನಿ ಶಾಸ್ತ್ರೀಯ ಸಂಗೀತ ಗಾಯನದಲ್ಲಿ ಈಗಾಗಲೇ ವಿದ್ವತ್, ವಿಶಾರದ, ಅಲಂಕಾರ್ ಸ್ನಾತಕೋತ್ತರ ಪದವಿಗಳನ್ನು ಪಡೆದವರಿದ್ದಾರೆ. ವಿವೇಕ ಜಾಗೃತಿ ಸಂಸ್ಥೆ, ಬಂಟ್ವಾಳ ನಾಗರಿಕರಿಂದ ಗಾನಕೇಸರಿ, ಇಂಡಿಯನ್ ಎಂಪಯರ್ ಯುನಿವರ್ಸಿಟಿಯಿಂದ ಗೌರವ ಡಾಕ್ಟರೇಟ್ ಪ್ರಶಸ್ತಿ, ಏಷಿಯಾ ಅಂತಾರಾಷ್ಟ್ರೀಯ ಕಲ್ಚರಲ್ ಅಕಾಡೆಮಿಯಿಂದ ಸಂಗೀತ ಸಾಮ್ರಾಟ್ ಪ್ರಶಸ್ತಿಯನ್ನು ಪಡೆದಿದ್ದಾರೆ.












