ಇತ್ತೀಚಿನ ಸುದ್ದಿ
PSI Suspension | ಚಿಕ್ಕಮಗಳೂರು: ಕರ್ತವ್ಯಲೋಪ; ಶೃಂಗೇರಿ ಪಿಎಸ್ ಐ ಜಕ್ಕಣ್ಣನವರ್ ಅಮಾನತು
13/02/2025, 18:36
![](https://reporterkarnataka.com/wp-content/uploads/2025/02/IMG-20250213-WA0009.jpg)
ಸಂತೋಷ್ ಅತ್ತಿಗೆರೆ ಚಿಕ್ಕಮಗಳೂರು
info.reporterkarnataka@gmail.com
ಕರ್ತವ್ಯಲೋಪ ಹಿನ್ನೆಲೆ ಶೃಂಗೇರಿ ಪಿಎಸ್ ಐ ಜಕ್ಕಣ್ಣನವರ್ ಅವರನ್ನು ಅಮಾನತು ಮಾಡಲಾಗಿದೆ.
ಹಲವು ಪ್ರಕರಣಗಳಲ್ಲಿ ಕರ್ತವ್ಯ ಲೋಪ ಹಿನ್ನೆಲೆಯಲ್ಲಿ
ಜಕ್ಕಣ್ಣನವರ್ ಅವರನ್ನು ಪಶ್ಚಿಮ ವಲಯ ಐಜಿಪಿ ಅಮಾನತುಗೊಳಿಸಿ ಆದೇಶ ಹೊರಡಿಸಿದ್ದರು.
ಅಕ್ರಮ ಮರಳು ದಂಧೆ, ಇಸ್ಪೀಟ್ ಅಡ್ಡೆ ರೈಡ್ ಸೇರಿ ಕರ್ತವ್ಯಲೋಪವೆಸಗಿದ ಆರೋಪ ಜಕ್ಕಣ್ಣನವರ್ ಅವರ ಮೇಲಿದೆ. ಶೃಂಗೇರಿ ಭಾಗದಲ್ಲಿ ಎಗ್ಗಿಲ್ಲದೆ ನಡೆಯುತ್ತಿದ್ದ ಮರಳು ದಂಧೆ,
ಮರಳು ದಂಧೆಗೆ ಬೆಂಬಲ ನೀಡಿದ ಅರೋಪ ಅವರ ಮೇಲಿದೆ.