ಇತ್ತೀಚಿನ ಸುದ್ದಿ
PSI Suicide | ಬಂಟ್ವಾಳ ಗ್ರಾಮಾಂತರ ಠಾಣೆ ಸಬ್ ಇನ್ಸ್ ಪೆಕ್ಟರ್ ಆತ್ಮಹತ್ಯೆ: ಬಾಡಿಗೆ ಮನೆಯಲ್ಲಿ ಕೃತ್ಯ
20/07/2025, 23:13

ಬಂಟ್ವಾಳ(reporterkarnataka.com): ಬಂಟ್ವಾಳ ಗ್ರಾಮಾಂತರ ಠಾಣೆಯ ಸಬ್ ಇನ್ಸ್ಪೆಕ್ಟರ್ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ಬಂಟ್ವಾಳದ ಬಾಡಿಗೆ ಮನೆಯಲ್ಲಿ ನಡೆದಿದೆ.
ಉತ್ತರ ಕನ್ನಡದ ನಿವಾಸಿ ಕೀರಪ್ಪ(54) ಎಂಬವರು ಆತ್ಮಹತ್ಯೆ ಮಾಡಿಕೊಂಡ ಸಬ್ ಇನ್ಸ್ ಪೆಕ್ಟರ್. ಆತ್ಮಹತ್ಯೆಯ ಕಾರಣ ತಿಳಿದು ಬಂದಿಲ್ಲ.
ಅವರು ಶಿರಸು ಠಾಣೆಯಿಂದ 5 ತಿಂಗಳ ಹಿಂದೆ ವರ್ಗಾವಣೆಗೊಂಡು ಬಂಟ್ವಾಳಕ್ಕೆ ಬಂದಿದ್ದರು.
ಬಂಟ್ವಾಳ ಪೇಟೆಯಲ್ಲಿರುವ ಬಾಡಿಗೆ ಮನೆಯಲ್ಲಿ ವಾಸವಾಗಿದ್ದರು. ಬೆಳಿಗ್ಗೆಯಿಂದ ಕರ್ತವ್ಯಕ್ಕೆಹಾಜರಾಗದೆ ಇದ್ದು ಫೋನ್ ಕಾಲ್ ಮಾಡಿದಾಗಲೂ ರಿಸೀವ್ ಮಾಡದೇ ಇದ್ದುದರಿಂದ ಸಂಶಯಗೊಂಡು ಪೊಲೀಸರು ಸಂಜೆಯ ವೇಳೆಗೆ ವಾಸಿಸುತ್ತಿರುವ ಬಾಡಿಗೆ ಮನೆಗೆ ಹೋಗಿ ಕಿಟಿಕಿಯಲ್ಲಿ ನೋಡಿದಾಗ ಕೋಣೆಯಲ್ಲಿ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ಸ್ಥಿತಿಯಲ್ಲಿ ಕಂಡು ಬಂದಿದ್ದು
ಸ್ಥಳಕ್ಕೆ ಅಡಿಶನಲ್ ಎಸ್ಪಿ ಬೇಟಿ ನೀಡಿ ತನಿಖೆ ನಡೆಸುತ್ತಿದ್ದಾರೆ.