ಇತ್ತೀಚಿನ ಸುದ್ದಿ
ಸಾಮಾಜಿಕ ಜಾಲತಾಣದಲ್ಲಿ ಪ್ರಚೋದನಕಾರಿ ಪೋಸ್ಟ್: ಬಿಜೆಪಿ ಜಿಲ್ಲಾ ಯುವಮೋರ್ಚಾ ಅಧ್ಯಕ್ಷ ಸಹಿತ 5 ಮಂದಿ ವಿರುದ್ಧ ಕೇಸ್
17/10/2025, 11:06

ಸಂತೋಷ್ ಅತ್ತಿಗೆರೆ ಚಿಕ್ಕಮಗಳೂರು
info.reporterkarnataka@gmail.com
ಸಾಮಾಜಿಕ ಜಾಲತಾಣದಲ್ಲಿ ಪ್ರಚೋದನಕಾರಿ ಪೋಸ್ಟ್ ಹಾಕಿದ ಹಿನ್ನೆಲೆಯಲ್ಲಿ ಬಿಜೆಪಿ ಜಿಲ್ಲಾ ಯುವ ಮೋರ್ಚಾ ಅಧ್ಯಕ್ಷ, ಹಾಸನ ವಿಭಾಗದ ಭಜರಂಗದಳ ಸಹ ಸಂಚಾಲಕನ ಮೇಲೆ ದೂರು ದಾಖಲಿಸಲಾಗಿದೆ.
ಸಂತೋಷ್, ಶಾಮ್ ಸೇರಿ ಒಟ್ಟು ಐವರ ವಿರುದ್ಧ ಚಿಕ್ಕಮಗಳೂರು ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ನಗರ ಪೋಲೀಸರು ಸುಮೋಟೋ ಕೇಸ್ ದಾಖಲಿಸಿಕೊಂಡಿದ್ದಾರೆ. ಗೋ ಹತ್ಯೆ ಖಂಡಿಸಿ ಮೊನ್ನೆ ಚಿಕ್ಕಮಗಳೂರು ನಗರದಲ್ಲಿ ಬೃಹತ್ ಪ್ರತಿಭಟನೆ ನಡೆದಿತ್ತು.
ಖಡ್ಗದ ಚಿತ್ರ ಬಳಸಿ ಬಲಿಗೆ ಹಸಿದಿಹ ಶಸ್ತ್ರ ಹಿಡಿಯುತ ಗೋ ಹಂತಕರೆದೆಯ ಸೀಳಿರಿ ಎಂದು ಬರೆಯಲಾಗಿತ್ತು.
ಗೋಮಾತೆ ರಕ್ಷಣೆಗೆ ಹಿಂದುಗಳೇ ಒಂದಾಗಿ ಬನ್ನಿ ಎಂದು ಪೋಸ್ಟ್ ಹಾಕಲಾಗಿತ್ತು.
ಚಿಕ್ಕಮಗಳೂರು ನಗರ ಠಾಣಾ ಪೊಲೀಸರು ಸುಮೋಟೋ ಕೇಸ್ ದಾಖಲಿಸಿಕೊಂಡಿದ್ದಾರೆ.