ಇತ್ತೀಚಿನ ಸುದ್ದಿ
Protest | ಯಾದಗಿರಿ: ಕೃಷ್ಣಾ ಅಚ್ಚುಕಟ್ಟು ಪ್ರದೇಶದ ಕಾಲುವೆಗಳಿಗೆ ನೀರು ಆಗ್ರಹಿಸಿ ಬೃಹತ್ ಟ್ರಾಕ್ಟರ್ ಪ್ರತಿಭಟನೆ
26/03/2025, 20:05

ಶಿವು ರಾಠೋಡ ಹುಣಸಗಿ ಯಾದಗಿರಿ
info.reporterkarnataka@gmail.com
ಕೃಷ್ಣಾ ಅಚ್ಚುಕಟ್ಟು ಪ್ರದೇಶದ ಕಾಲುವೆಗಳಿಗೆ ಏ.10 ರವರೆಗೆ ನಿರಂತರವಾಗಿ ನೀರು ಹರಿಸಬೇಕು ಎಂದು ಆಗ್ರಹಿಸಿ ಬಿಜೆಪಿ ರಾಜ್ಯ ಉಪಾಧ್ಯಕ್ಷ ಹಾಗೂ ಮಾಜಿ ಸಚಿವ ನರಸಿಂಹ ನಾಯಕ (ರಾಜುಗೌಡ್ರು) ನೇತೃತ್ವದಲ್ಲಿ ಬೃಹತ್ ಟ್ಯಾಕ್ಟರ್ ಪ್ರತಿಭಟನೆ ನಡೆಸಲಾಯಿತು.
ಹುಣಸಗಿ ಪಟ್ಟಣದಿಂದ ನಾರಾಯಣಪುರ ಮುಖ್ಯ ಇಂಜಿನಿಯರ್ ಆಫೀಸ್ ವರೆಗೆ ಪ್ರತಿಭಟನಾ ಮೆರವಣಿಗೆ ನಡೆಸಲಾಯಿತು.
ರಾಜ್ಯ ಸರಕಾರದ ರೈತ ವಿರೋಧಿ ನೀತಿಗಳ ಬಗ್ಗೆ ಪ್ರತಿಭಟನಾಕಾರರು ಘೋಷಣೆ ಕೂಗಿದರು. ಬೇಕೆ ಬೇಕು ಏ.10 ರವರೆಗೆ ಕಾಲುವೆಗೆ ನೀರು ಬೇಕು ಎಂಬ ಘೋಷಣೆ ಮೊಳಗಿತು. ಬಳಿಕ ಪ್ರತಿಭಟನೆಯಲ್ಲಿ ರೈತ ಮುಖಂಡರು ಮಾತನಾಡಿ, ನಾರಾಯಣಪುರ ಎಡದಂಡೆ ಕಾಲುವೆಯ ಅವಲಂಬನೆಯ ರೈತರಿಗೆ ಅನ್ಯಾಯ ಮಾಡಬೇಡಿ ನಿಮ್ಮನ ನಂಬಿ ರೈತರರು ಶೇಂಗಾ, ಸಜ್ಜೆ, ಸೂರ್ಯಕಾಂತಿ, ಭತ್ತ ಸೇರಿ ಇನ್ನಿತರ ಬೆಳೆಗಳು ಇನ್ನೂ 20ರಿಂದ 25 ದಿನಗಳಲ್ಲಿ ಕೈಗೆ ಬರುತ್ತವೆ. ಆದರೆ ತೆನೆ ಬರುವ ಸಂದರ್ಭದಲ್ಲಿ ಏಕಾಏಕಿ ಕಾಲುವೆ ನೀರು ನಿಂತು ಹೋದರೆ ರೈತರ ಲಕ್ಷಾಂತರ ಮೊತ್ತದ ಬೆಳೆ ನಷ್ಟವಾಗಿ ಅವರ ಬಾಳು ಕೂಡ ಹಾಳಾಗುತ್ತದೆ ಎಂದು ಹೇಳಿದರು.
ಕೃಷಿ ಇಲಾಖೆಯು ಬೆಳೆಗಳ ವಾಸ್ತವ ಸ್ಥಿತಿಯನ್ನು ಸರಕಾರಕ್ಕೆ ವರದಿ ಮಾಡಿದೆ. ನೀರಾವರಿ ಇಲಾಖೆಯ ಅಧಿಕಾರಿಗಳ ಬೇಜವಾಬ್ದಾರಿತನದಿಂದ ಆಲಮಟ್ಟಿ ಮತ್ತು ನಾರಾಯಣಪುರ ಜಲಾಶಯಗಳ ಸಂಗ್ರಹವಿದ್ದ ಅದೇಷ್ಟೋ ಟಿಎಂಸಿ ನೀರು ನದಿಗೆ ಹೋಗಿದೆ ಎಂದು ಆಕ್ರೋಶ ಹೊರ ಹಾಕಿದರು. ನೀರಾವರಿ ಸಲಹಾ ಸಮಿತಿಯವರ ಅವೈಜ್ಞಾನಿಕ ತಿರ್ಮಾನ, ತೆಲಂಗಾಣ ರಾಜ್ಯಕ್ಕೆ ರಾತೋರಾತ್ರಿ ನೀರು ಹರಿಸಿರುವುದು ಸರಿಯಾದ ಕ್ರಮವಲ್ಲ ಎಂದು ಬಿಜೆಪಿ ರಾಜ್ಯ ಉಪಾಧ್ಯಕ್ಷರು ಹಾಗೂ ಮಾಜಿ ಸಚಿವರಾದ ನರಸಿಂಹ ನಾಯಕ (ರಾಜುಗೌಡ್ರು) ಹರಿ ಹಾಯ್ದರು.
ಏ.10 ರವರೆಗೆ ಕಾಲುವೆಗೆ ನೀರು ಹರಿಸದಿದ್ದರೆ ರೈತರು ಬೆಳೆ ನಷ್ಟ ಅನುಭವಿಸಿ ಆತ್ಮಹತ್ಯೆ ಮಾಡಿಕೊಂಡರೆ ಅದಕ್ಕೆ ಸರಕಾರವೇ ಜವಾಬ್ದಾರಿಯಾಗುತ್ತದೆ ಮತ್ತು ಸರಕಾರಕ್ಕೆ ಕೆಟ್ಟ ಹೆಸರು ಬರುತ್ತದೆ. ಕಾರಣ ಸರಕಾರ ರೈತರ ಹಿತ ಕಾಪಾಡಬೇಕಾಗಿರುವುದು ಅಗತ್ಯವಾಗಿದೆ.
ಈಗ ರೈತರಿಗೆ ಬಂದಿರುವ ಸಂಕಷ್ಟ ನಿವಾರಿಸಬೇಕು. ಕುಡಿಯಲು ಅವಶ್ಯವಿರುವ 24 ಟಿಎಂಸಿ ನೀರು ಇದೆ. ಹಾಗಾಗಿ ಏ.10 ವರೆಗೆ ಕಾಲುವೆಗೆ ನೀರು ಹರಿಸಿ ರೈತರ ಬೆಳೆ, ಬಾಳು ಉಳಿಸಬೇಕು ಎಂದು ತಿಳಿಸಿದರು.
ಇದೆ ಸಂದರ್ಭದಲ್ಲಿ ಬಿಜೆಪಿ ರಾಜ್ಯ ಉಪಾಧ್ಯಕ್ಷರು ಹಾಗೂ ಮಾಜಿ ಸಚಿವರಾದ ನರಸಿಂಹ ನಾಯಕ (ರಾಜುಗೌಡ್ರು) , ಬಬ್ಲುಗೌಡ , ಅಮಿನ ರೆಡ್ಡಿ ಯಾಳಗಿ, ಬಸನಗೌಡ , ಹನಮಂತ ನಾಯಕ್ ತಾತಾ, ಹೆಚ್ ಸಿ ಪಾಟೀಲ್, ಯಲ್ಲಪ್ಪ ಕುರಕುಂಡಿ, ಶೇಖರ್ ಎಸ್ ನಾಯಕ, ತಿರುಪತಿ ಹೆಚ್ ನಾಯಕ, ಸಂಗಣ್ಣ ವೈಲಿ, ವೆಂಕಟೇಶ ಸಾಹುಕಾರ್, ಶಿವಣ್ಣ ಮಂಗಿಹಾಳ್, ರಮೇಶ ಕೋಲೂರು, ಶಿವು ಬಿರಾದಾರ, ಅನೇಕ ಸಂಘಟನೆಪರ ಹೋರಾಟಗಾರರು , ರೈತರ ಪರ ಹೊರಟಗಾರರು ಇದ್ದರು.