8:15 PM Saturday22 - November 2025
ಬ್ರೇಕಿಂಗ್ ನ್ಯೂಸ್
ಮೆಕ್ಕೆಜೋಳ ಖರೀದಿ-ಆಮದು ಬಗ್ಗೆ ಹಸಿ ಹಸಿ ಸುಳ್ಳು ಹೇಳುತ್ತಿದ್ದಾರೆ ಸಿಎಂ: ಕೇಂದ್ರ ಸಚಿವ… ರಾಜ್ಯಕ್ಕೆ ಯಾರು ಮುಖ್ಯಮಂತ್ರಿ ಎಂದು ಕಾಂಗ್ರೆಸ್‌ ಹೈಕಮಾಂಡ್‌ ಸ್ಪಷ್ಟವಾಗಿ ತಿಳಿಸಲಿ: ಪ್ರತಿಪಕ್ಷ ನಾಯಕ… ಕೇರಳದಿಂದ ಮಡಿಕೇರಿಗೆ ಅಕ್ರಮ ಕೆಂಪು ಕಲ್ಲು ಸಾಗಾಟ: ಸುಳ್ಯ ಪೊಲೀಸರಿಂದ ಲಾರಿ ವಶ ಡಿಕೆಶಿ ಮುಖ್ಯಮಂತ್ರಿ ಆಗಲಿ ಎಂದು 91 ಕೆಜಿ ಎಳ್ಳಿನ ತುಲಾಭಾರ: ಪಾವಗಡದಲ್ಲಿ ಅಭಿಮಾನಿಗಳ… ಮೀನುಗಾರಿಕಾ ವಿಶ್ವ ವಿದ್ಯಾಲಯ ಸ್ಥಾಪಿಸಲು ಸರಕಾರ ಸಿದ್ಧವಿದೆ: ಸಿಎಂ ಸಿದ್ದರಾಮಯ್ಯ ಘೋಷಣೆ ಮಂಡ್ಯ ಡಿಸಿಸಿ ಬ್ಯಾಂಕ್ ನೂತನ ಅಧ್ಯಕ್ಷರಾಗಿ ಸಚಿನ್ ಚಲುವರಾಯಸ್ವಾಮಿ ಆಯ್ಕೆ ಅರಣ್ಯ ಪ್ರದೇಶದಿಂದ ಅಕ್ರಮವಾಗಿ ಮಣ್ಣು ಸಾಗಾಟ: ಸ್ಥಳೀಯರ ತೀವ್ರ ಆಕ್ಷೇಪ; ಮೌನ ವಹಿಸಿದ… ದ್ವಿಚಕ್ರ ವಾಹನದಲ್ಲಿ ಮಕ್ಕಳಿಗೂ ಹೆಲ್ಮೆಟ್‌ ಕಡ್ಡಾಯ: ರಾಜ್ಯ ಸರಕಾರಕ್ಕೆ ಹೈಕೋರ್ಟ್ ಆದೇಶ ಡಿ. 6ರಂದು ಹಾಸನಕ್ಕೆ ಸಿಎಂ ಭೇಟಿ: ನೂತನ ಕಂದಾಯ ಗ್ರಾಮಗಳ ನಿವಾಸಿಗಳಿಗೆ ಹಕ್ಕುಪತ್ರ… Bangalore | ನಾಯಿ ದಾಳಿಯಿಂದ ಸಾವನ್ನಪ್ಪಿದವರಿಗೆ ರಾಜ್ಯ ಸರ್ಕಾರ 5 ಲಕ್ಷ ರೂ.…

ಇತ್ತೀಚಿನ ಸುದ್ದಿ

ಯಾಜಕರು ಆಧ್ಯಾತ್ಮಿಕ ಪೋಷಣೆಯ ರೂವಾರಿಗಳು: ಕೊಟ್ಟಿಗೆಹಾರ ನೂತನ ಧರ್ಮಕೇಂದ್ರದಲ್ಲಿ ಫಾ. ಅಂತೋಣಿರಾಜ್

14/07/2025, 20:23

ಸಂತೋಷ್ ಅತ್ತಿಗೆರೆ ಚಿಕ್ಕಮಗಳೂರು

info.reporterkarnataka@gmail.com

ಮೂಡಿಗೆರೆ ತಾಲ್ಲೂಕಿನ ಕೊಟ್ಟಿಗೆಹಾರ ಯೇಸುವಿನ ಪವಿತ್ರ ಹೃದಯದ ಉಪಕೇಂದ್ರವನ್ನು ಮೇಲ್ದರ್ಜೆಗೆ ಏರಿಸಿ ನೂತನ ಧರ್ಮಕೇಂದ್ರದ ಸ್ಥಾಪನೆ ಕಾರ್ಯದ ಸಂಭ್ರಮದ ಪೂಜೆ ಸೋಮವಾರ ಬೆಳಿಗ್ಗೆ ನಡೆಯಿತು.
ಸಂಸೆ ಧರ್ಮ ಕೇಂದ್ರದ ಗುರುಗಳಾದ ರೆ.ಫಾ.ಅಂತೋಣಿರಾಜ್ ಪೂಜೆ ಅರ್ಪಿಸಿ ಪ್ರಬೋಧನೆ ನೀಡಿ ಮಾತನಾಡಿ’ ಯಾಜಕರು ಆಧ್ಯಾತ್ಮಿಕ ಪೋಷಣೆಯ ರೂವಾರಿಯಾಗಿದ್ದಾರೆ. ಯಾವುದೇ ಧರ್ಮಗುರುಗಳಾಗಲಿ ಜನರ ಆಧ್ಯಾತ್ಮಿಕ ಹಸಿವು ನೀಗಿಸಲು ಮತ್ತಿತರ ಧಾರ್ಮಿಕ ಅವಶ್ಯಕತೆಗಳಿಗೆ ಅವರು ಪ್ರಮುಖ ಸ್ಥಾನ ಪಡೆಯುತ್ತಾರೆ. ಜನರ ಸಹಕಾರ, ಅನ್ಯೋನತೆ, ಐಕ್ಯತೆಯೊಂದಿಗೆ ಮಾತ್ರ ಗುರುಗಳು ಕ್ರೈಸ್ತ ದರ್ಮ ಅಭಿವೃದ್ದಿ ಪಥದತ್ತ ಕೊಂಡ್ಯೊಯ್ಯಲು ಸಾಧ್ಯವಾಗುತ್ತದೆ ಎಂದರು.

ಚಿಕ್ಕಮಗಳೂರು ಧರ್ಮಕ್ಷೇತ್ರದ ಕುಲಪತಿ ರೆ.ಫಾ.ಚಾರ್ಲ್ಸ್ ಪಿರೇರಾ ಮಾತನಾಡಿ, ಧರ್ಮಾಧ್ಯಕ್ಷರು ಕೊಟ್ಟಿಗೆಹಾರ ನೂತನ ಧರ್ಮ ಕೇಂದ್ರವನ್ನಾಗಿ ಮಾಡಲು ಆದೇಶಿಸಿರುವುದು ಅಭಿವೃದ್ದಿಯ ದ್ಯೋತಕವಾಗಿದೆ. 57 ವರ್ಷಗಳ ಕಾಲ ಕಪುಚಿನ್ ಗುರುಗಳ ಪಂಗಡ ನಡೆಸಿಕೊಂಡು ಬಂದು ಈಗ ಚಿಕ್ಕಮಗಳೂರಿನ ಧರ್ಮಕೇತ್ರದ ಸಾರಥ್ಯಕ್ಕೆ ನೀಡಿ ನೂತನ ಧರ್ಮ ಕೇಂದ್ರ ಸ್ಥಾಪನೆಯಾಗಿದೆ. ನಮ್ಮ ಹಿರಿಯರು ಧಾರ್ಮಿಕ ಕಾರ್ಯ ಮಾಡುತ್ತಾ ಬಂದಿದ್ದಾರೆ. ಈಗಿನ ಪೀಳಿಗೆ ಅದನ್ನು ಮುಂದುವರಿಸಿಕೊಂಡು ಬರುತ್ತಿದೆ. ಪ್ರಥಮ ಧರ್ಮ ಕೇಂದ್ರಕ್ಕೆ ನೂತನ ಅನನುಭವಿ ಗುರುಗಳು ಎಷ್ಟು ಮುಖ್ಯವೊ ಅಷ್ಟೇ ಮುಖ್ಯ ಅನುಭವಿ ಕ್ರೈಸ್ತ ಭಕ್ತಾದಿಗಳ ಪಾತ್ರವೂ ಅತಿ ಮುಖ್ಯವಾಗುತ್ತದೆ. ಇವರಿಂದ ಧರ್ಮ ಕೇಂದ್ರದ ಪ್ರಗತಿ ಸಾಧ್ಯವಾಗುತ್ತದೆ’ಎಂದರು. ಬಣಕಲ್ ಚರ್ಚ್ ದರ್ಮಗುರು ರೆ.ಫಾ.ಪ್ರೇಮ್ ಲಾರೆನ್ಸ್ ಡಿಸೋಜ ಮಾತನಾಡಿ’ 57 ವರ್ಷ ಬಾಳೂರು, ಜಾವಳಿ, ಕೊಟ್ಟಿಗೆಹಾರ ಉಪಕೇಂದ್ರ ನಡೆಸಿಕೊಂಡು ಬಂದಿದ್ದೇವೆ. ನಮ್ಮ ಕಪುಚಿನ್ ಪಂಗಡದ ಹಿರಿಯ ಗುರುಗಳ ಸಾಧನೆ ಶ್ರಮದಾಯಕವಾದುದು ಎಂದು ಸ್ಮರಿಸಿದರು. ಇನ್ನು ನೂತನ ಗುರುಗಳಿಗೆ ಅದೇ ಐಕ್ಯತೆಯ ಸಹಕಾರ ನೀಡಿ ಸಹಕರಿಸಿ’ಎಂದರು. ಸಂಭ್ರಮಿಕ ಬಲಿಪೂಜೆಯಲ್ಲಿ ನೂತನ ಗುರು ರೆ.ಫಾ.ವಿಲಿಯಂ ಬರ್ನಾರ್ಡ್ ಅವರಿಗೆ ಫಾ.ಪ್ರೇಮ್ ಲಾರೆನ್ಸ್ ಡಿಸೋಜ ಅಧಿಕಾರ ಹಸ್ತಾಂತರಿಸಿದರು. ಬಣಕಲ್ ಚರ್ಚಿನ ಗುರುಗಳಾದ ಪಾ.ಪ್ರೇಮ್ ಡಿಸೋಜ, ಸಹಾಯಕ ಗುರುಗಳಾದ ಫಾ.ಥೋಮಸ್ ಕಲಘಟಗಿ ಅವರಿಗೆ ಧರ್ಮಕ್ಷೇತ್ರ ಹಾಗೂ ಕೊಟ್ಟಿಗೆಹಾರ,ಬಾಳೂರು,ಜಾವಳಿ ಭಕ್ತಾಧಿಗಳಿಂದ ಸನ್ಮಾನ ಕಾರ್ಯಕ್ರಮ ನಡೆಯಿತು.ವೇದಿಕೆ ಕಾರ್ಯಕ್ರಮವನ್ನು ಆಲ್ವಿನ್ ವಿನೋದ್ ನಿರ್ವಹಿಸಿದರು. ಚರ್ಚ್ ಚರಿತ್ರೆಯನ್ನು ಸಿಂತಿಯಾ ಪಾಯ್ಸ್ ವಾಚಿಸಿದರು.ಕುಮಾರಿ ಅಲೀಶಾ ನೊರೋನ್ನಾ ಸ್ವಾಗತಿಸಿದರು. ರೇಷ್ಮಾ ಪಿರೇರಾ ವಂದಿಸಿದರು. ಪೂಜೆಯಲ್ಲಿ ಚಿಕ್ಕಮಗಳೂರು ದರ್ಮಕ್ಷೇತ್ರದ ವಿವಿಧ ಗುರುಗಳು ಭಾಗವಹಿಸಿದ್ದರು.

ಧರ್ಮ ಕೇಂದ್ರ ನಡೆಸಲು ಸರ್ವ ಭಕ್ತಾಧಿಗಳ ಸಹಕಾರ ಅಗತ್ಯವಾಗಿದೆ. ಆಧ್ಯಾತ್ಮಿಕ ಒಲವಿನೊಂದಿಗೆ ಕುಟುಂಬದ ಐಕ್ಯತೆಗಾಗಿ ಶ್ರಮಿಸುತ್ತೇನೆ.

-ರೆ.ಫಾ.ವಿಲಿಯಂ ಬರ್ನಾರ್ಡ್, ನೂತನ ದರ್ಮಗುರುಗಳು.

ಇತ್ತೀಚಿನ ಸುದ್ದಿ

ಜಾಹೀರಾತು