ಇತ್ತೀಚಿನ ಸುದ್ದಿ
ಪ್ರವೀಣ್ ನೆಟ್ಟಾರು ಕೊಲೆ ಪ್ರಕರಣ: ಎನ್ ಐಎ ಅಧಿಕಾರಿಗಳಿಂದ ಬಂಧಿತ ಆರೋಪಿ ರೆಹಮಾನ್ ಕಾರು, ಬೈಕ್ ವಶ
16/07/2025, 11:29

ಗಿರಿಧರ್ ಕೊಂಪುಳಿರ ಮಡಿಕೇರಿ0
info.reporterkarnataka@gmail.com
ಬಿಜೆಪಿ ಕಾರ್ಯಕರ್ತ ಪ್ರವೀಣ್ ನೆಟ್ಟಾರು ಹತ್ಯೆ ಪ್ರಕರಣ ಸಂಬಂಧಿಸಿದಂತೆ ಇತ್ತೀಚಿಗೆ ಬಂಧಿಸಲ್ಪಟ್ಟ ಆರೋಪಿ ಸೋಮವಾರಪೇಟೆ ತಾಲ್ಲೂಕಿನ ಕಲಕಂದೂರು ನಿವಾಸಿ ಅಬ್ದುಲ್ ರೆಹಮಾನ್ ಗೆ ಸೇರಿದ ಕಾರು ಮತ್ತು ಬೈಕ್ ಅನ್ನು ಎನ್ ಐ ಎ ಅಧಿಕಾರಿಗಳು ವಶಕ್ಕೆ ಪಡೆದುಕೊಂಡಿದ್ದಾರೆ.
ಅದೇ ಗ್ರಾಮದ ಜಮಾಲುದ್ದಿನ್ ಎಂಬುವವರ ಬಳಿ ಇದ್ದ ಕೃತ್ಯದ ವೇಳೆ ಬೆಳ್ತಂಗಡಿ ಮೂಲಕ ಇತರೆ ಸಹಚರರ ಜೊತೆ ತಪ್ಪಿಸಿಕೊಂಡು ಹೋಗಲು ಬಳಸಿದ್ದ ಮಾರುತಿ 800 ಕಾರು ಹಾಗೂ ಬೈಕ್ ಅನ್ನು ವಶಕ್ಕೆ ಪಡೆಯಲಾಗಿದೆ.