ಇತ್ತೀಚಿನ ಸುದ್ದಿ
ಪ್ರವಾಸಕ್ಕೆ ಬಂದಿದ್ದ ಬೆಂಗಳೂರು ಟೆಕ್ಕಿ ಹೆಬ್ಬೆ ಜಲಪಾತದಲ್ಲಿ ನೀರುಪಾಲು: ಗೆಳೆಯರ ಜತೆ ಬಂದಿದ್ದ ಯುವಕ
04/11/2024, 11:08
ಸಂತೋಷ್ ಅತ್ತಿಗೆರೆ ಚಿಕ್ಕಮಗಳೂರು
info.reporterkarnataka@gmail.com
ಹೆಬ್ಬೆ ಜಲಪಾತದಲ್ಲಿ ಈಜಲು ಹೋಗಿ ನೀರಿನಲ್ಲಿ ಮುಳುಗಿ ಯುವಕನೊಬ್ಬ ಮೃತಪಟ್ಟ ದಾರುಣ ಘಟನೆ ನಡೆದಿದೆ.
ಅಮಿತ್ ಕುಮಾರ್ (30) ಮೃತ ದುರ್ದೈವಿ.
ತರೀಕೆರೆ ತಾಲೂಕಿನ ಕೆಮ್ಮಣ್ಣುಗುಂಡಿ ಸಮೀಪದ ಹೆಬ್ಬೆ ಜಲಪಾತದಲ್ಲಿ ಯುವಕ ನೀರು ಪಾಲಾಗಿದ್ದ. ಮೃತ ಅಮಿತ್ ಮೂಲತಃ ಛತ್ತೀಸ್ ಘಡದ ನಿವಾಸಿ.ಸಲಾಂ ಕರೀಂ ಎಂಬ ಸ್ನೇಹಿತನ ಜೊತೆ ಪ್ರವಾಸಕ್ಕೆ ಅಮಿತ್ ಬಂದಿದ್ದ.
ಸಲಾಂ ಕರೀಂ ಮೂಲತಃ ತಮಿಳುನಾಡಿನ ಸ್ನೇಹಿತ.
ಬೆಂಗಳೂರಿನಲ್ಲಿ ಇಬ್ಬರು ಒಂದೇ ರೂಂನಲ್ಲಿದ್ದು, ಬೇರೆ-ಬೇರೆ ಕಂಪನಿಯಲ್ಲಿ ಕೆಲಸ ಮಾಡ್ತಿದ್ರು. 3 ದಿನಗಳ ಹಿಂದೆ ಚಿಕ್ಕಮಗಳೂರು ಜಿಲ್ಲೆಗೆ ಪ್ರವಾಸಕ್ಕೆ ಬಂದಿದ್ದರು.
ಇಂದು ಹೆಬ್ಬೆ ಜಲಪಾತದಲ್ಲಿ ಈಜಲು ಹೋದಾಗ ನೀರಿನಲ್ಲಿ ಮುಳುಗಿ ಅಮಿತ್ ಸಾವನ್ನಪ್ಪಿದ್ದಾನೆ.
ಫಾರೆಸ್ಟ್ ಗಾರ್ಡ್ ಆಳ ಇದೆ ಬೇಡ ಎಂದರೂ ಈಜಲು ಹೋಗಿದ್ದ ಯುವಕ ನೀರುಪಾಲಾಗಿದ್ದ. ಲಿಂಗದಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.