5:45 AM Friday19 - September 2025
ಬ್ರೇಕಿಂಗ್ ನ್ಯೂಸ್
ಪಂಚ ಗ್ಯಾರಂಟಿ ಯೋಜನೆಗಳಿಗೆ 98 ಸಾವಿರ ಕೋಟಿ; ಅಭಿವೃದ್ಧಿಗೆ 8 ಸಾವಿರ ಕೋಟಿ:… New Delhi | ಕಾಂಗ್ರೆಸ್ ಸರಕಾರದ ಪಂಚೇಂದ್ರಿಯಗಳು ನಿಷ್ಕ್ರಿಯವಾಗಿವೆ: ಕೇಂದ್ರ ಸಚಿವ ಕುಮಾರಸ್ವಾಮಿ… Bangaluru | ರೈತ ಮುಖಂಡರ ನಿಯೋಗ ಸಿಎಂ ಸಿದ್ದರಾಮಯ್ಯ ಭೇಟಿ: ರೈತರ ಸಮಸ್ಯೆ… ಕೃಷ್ಣಾ ಮೇಲ್ದಂಡೆ ಯೋಜನೆ: ಮುಳುಗಡೆ ರೈತರ ನೀರಾವರಿ ಜಮೀನಿಗೆ 40 ಲಕ್ಷ, ಒಣಭೂಮಿಗೆ… Belagavi | ಶೀಘ್ರವೇ ಅಂಗನವಾಡಿ ಕಾರ್ಯಕರ್ತೆಯರು, ಸಿಬ್ಬಂದಿಗೆ ಬಡ್ತಿ: ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಭೂ ಸ್ವಾಧೀನ ಪ್ರಕ್ರಿಯೆ ಅಕ್ರಮ ಕೂಡಲೇ ಕೈಬಿಡಿ: ಪ್ರತಿಪಕ್ಷ ನಾಯಕ ಆರ್‌.ಅಶೋಕ್ ಆಗ್ರಹ ಪಾಲಿಕೆಯೇ ಪಾಪರ್‌ ಆಗಿರುವಾಗ ಹೊಸದಾಗಿ ಇಂಜಿನಿಯರ್‌ಗಳನ್ನು ಹೇಗೆ ನೇಮಿಸುತ್ತಾರೆ: ಪ್ರತಿಪಕ್ಷದ ನಾಯಕ ಆರ್.… ಮತಗಳ್ಳತನಕ್ಕೆ ಅವಕಾಶ ನೀಡಬೇಡಿ: ರಾಜ್ಯದ ಜನರಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಕರೆ ಪರಿಹಾರದಾಸೆಗೆ ಪತಿಯ ಕೊಲೆಗೈದು ಹುಲಿ ಕೊಂದಿದೆ ಎಂದು ಕಥೆ ಕಟ್ಟಿ ಸಿಕ್ಕಿಬಿದ್ದ ಪತ್ನಿ;… Kodagu | ಮಡಿಕೇರಿ ದಸರಾ: ರಾಜ್ಯ ಸರಕಾರದಿಂದ1.50 ಕೋಟಿ ಅನುದಾನ ಬಿಡುಗಡೆ

ಇತ್ತೀಚಿನ ಸುದ್ದಿ

ಪ್ರತಿಷ್ಠಿತ ಸಂದೇಶ ಪ್ರಶಸ್ತಿ ಫೆ. 22ರಂದು ಪ್ರದಾನ: ಸಾಹಿತಿ ಬರಗೂರು, ಡಾ. ಟಿ.ಸಿ. ಪೂರ್ಣಿಮಾ ಸಹಿತ 14 ಮಂದಿ ಆಯ್ಕೆ; ಪತ್ರಿಕೆ ಹಾಗೂ ಸಂಘಟನೆಗೂ ಪುರಸ್ಕಾರ

11/02/2022, 12:00

ಮಂಗಳೂರು(reporterkarnataka.com);

ಮಂಗಳೂರಿನ ಸಂದೇಶ ಸಂಸ್ಕೃತಿ ಮತ್ತು ಶಿಕ್ಷಣ ಪ್ರತಿಷ್ಠಾನವು ಸಾಹಿತ್ಯ, ಶಿಕ್ಷಣ, ಮಾಧ್ಯಮ, ಕಲೆ ಹಾಗೂ ಸಂಗೀತ ಕ್ಷೇತ್ರಗಳಲ್ಲಿ ಸೇವೆ ಸಲ್ಲಿಸಿದ ವ್ಯಕ್ತಿ ಹಾಗೂ ಸಂಘಟನೆಗಳಿಗೆ ನೀಡುವ ವಾರ್ಷಿಕ 2020-21 ಮತ್ತು 2021-22ನೇ ಸಾಲಿನ ರಾಜ್ಯ ಮಟ್ಟದ ಸಂದೇಶ ಪ್ರಶಸ್ತಿಗೆ ಸಾಧಕರು, ಒಂದು ಸಂಘಟನೆ ಮತ್ತು ಒಂದು ಪತ್ರಿಕೆಯನ್ನು ಆಯ್ಕೆ ಮಾಡಿದೆ.

ಸಂದೇಶ ಪ್ರತಿಷ್ಠಾನದ ವಿಶ್ವಸ್ಥ ರೊಯ್‌ ಕ್ಯಾಸ್ತಲಿನೊ ಪತ್ರಿಕಾಗೊಷ್ಠಿಯಲ್ಲಿ ಈ ವಿಷಯ ತಿಳಿಸಿದರು.

ಸಾಹಿತ್ಯ ಪ್ರಶಸ್ತಿ: ಕನ್ನಡ- ಬರಗೂರು ರಾಮಚಂದ್ರಪ್ಪ (ತುಮಕೂರು), ಕೊಂಕಣಿ- ಅಮರ್‌ ಕೊಂಕಣಿ (ಮಂಗಳೂರು ಸಂತ ಅಲೋಶಿಯಸ್‌ ಕಾಲೇಜಿನ ಕೊಂಕಣಿ ಸಂಸ್ಥೆ ವತಿಯಿಂದ ಆರಂಭವಾದ ಪತ್ರಿಕೆ), ತುಳು- ಡಾ. ಸುನಿತಾ ಎಂ. ಶೆಟ್ಟಿ (ದಕ್ಷಿಣ ಕನ್ನಡ), ಮಾಧ್ಯಮ ಪ್ರಶಸ್ತಿ- ನಾಗೇಶ ಹೆಗಡೆ (ಉತ್ತರ ಕನ್ನಡ), ಕೊಂಕಣಿ ಸಂಗೀತ ಪ್ರಶಸ್ತಿ-ಮೀನ ರೆಬಿಂಬಸ್‌ (ದ.ಕ.), ಕಲಾ ಪ್ರಶಸ್ತಿ- ಅವಿತಾಸ್‌ ಎಡೋಲಸ್‌ ಕುಟಿನ್ಹಾ (ದ.ಕ.), ಶಿಕ್ಷಣ ಪ್ರಶಸ್ತಿ- 

ಡಾ. ಲಕ್ಷ್ಮಣ್‌ ಸಾಬ್‌ ಚೌರಿ (ಬಾಗಲಕೋಟೆ) ವಿಶೇಷ ಪ್ರಶಸ್ತಿ- ಸಮರ್ಥನಂ ಟ್ರಸ್ಟ್‌ (ಬೆಂಗಳೂರು) 2021ನೇ ಸಾಲಿನ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ.

ಸಾಹಿತ್ಯ ಪ್ರಶಸ್ತಿ: ಕನ್ನಡ – ರಹ್ಮತ್‌ ತರೀಕೆರೆ (ಚಿಕ್ಕಮಗಳೂರು), ಕೊಂಕಣಿ – ಮೆಲ್ವಿನ್‌ ರಾಡ್ರಿಗಸ್‌ (ದ.ಕ.), ತುಳು- ಬಿ.ಕೆ. ಗಂಗಾಧರ್‌ ಕಿರೋಡಿಯನ್‌ (ದ.ಕ.), ಮಾಧ್ಯಮ ಪ್ರಶಸ್ತಿ- 

ಡಾ. ಟಿ.ಸಿ. ಪೂರ್ಣಿಮಾ ( ಮೈಸೂರು), ಕೊಂಕಣಿ ಸಂಗೀತ ಪ್ರಶಸ್ತಿ- ಆಲ್ವಿನ್‌ ನೊರೊನ್ಹಾ (ದ.ಕ.), ಕಲಾ ಪ್ರಶಸ್ತಿ- ಕಾಸರಗೋಡು ಚಿನ್ನಾ (ಕಾಸರಗೋಡು), ಶಿಕ್ಷಣ ಪ್ರಶಸ್ತಿ- ಡಾ. ಪಿ.ಕೆ. ರಾಜಶೇಖರ್‌ (ಮೈಸೂರು), ವಿಶೇಷ ಪ್ರಶಸ್ತಿ- ಸ. ರಘುನಾಥ್‌ (ಚಿಕ್ಕಬಳ್ಳಾಪುರ) 2022ನೇ ಸಾಲಿನ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ. ಇವರಿಗೆ ಫೆಬ್ರವರಿ 22ರ ಸಂಜೆ 4.30 ಕ್ಕೆ ಸಂದೇಶ ಪ್ರತಿಷ್ಠಾನ ಆವರಣ ತುಮಕೂರು ಮಂಗಳೂರು ಇಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಗುವುದು ಎಂದು ತಿಳಿಸಿದ್ದಾರೆ. 

ವಲೇರಿಯನ್‌ ರಾಡ್ರಿಗಸ್‌ ಅಧ್ಯಕ್ಷತೆಯ ಪ್ರಶಸ್ತಿ ಆಯ್ಕೆ ಸಮಿತಿಯಲ್ಲಿ ಡಾ. ಬಿ.ಎಸ್‌. ತಲ್ವಾಡಿ, 

ಡಾ. ನಾ.ದಾ.ಶೆಟ್ಟಿ, ಕೊನ್‌ಸೆಪಾr ಆಳ್ವ, ಚಂದ್ರಕಲಾ ನಂದಾವರ ಮತ್ತು ಮೊಹಮ್ಮದ್‌ ಬಡೂರು ಸದಸ್ಯರಾಗಿದ್ದಾರೆ. ಪ್ರತಿಷ್ಠಾನದ ನಿರ್ದೇಶಕ ಫಾ| ಫ್ರಾನ್ಸಿಸ್‌ ಅಸ್ಸಿಸಿ ಅಲ್ಮೆಡಾ, ಮ್ಯಾನೇಜರ್‌ ಸೈಮನ್‌ ಡಿ’ಸೋಜಾ ಉಪಸ್ಥಿತರಿದ್ದರು.                    

ಇತ್ತೀಚಿನ ಸುದ್ದಿ

ಜಾಹೀರಾತು