2:01 PM Tuesday31 - March 2026
ಬ್ರೇಕಿಂಗ್ ನ್ಯೂಸ್
ಉಪ ಚುನಾವಣೆ | ಸಿಎಂ ಸಭೆಯಲ್ಲಿ ಭಾಗಿಯಾಗಿದ್ದ ಸರಕಾರಿ ಶಿಕ್ಷಕ ಕಬ್ಬಿನ ಗದ್ದೆಯೊಳಗೆ… ಬಾಗಲಕೋಟೆ ಉಪ ಚುನಾವಣೆ: ಆಲಮಟ್ಟಿ ಬಳಿ ರಾತೋರಾತ್ರಿ ಸಿಎಂ ಭೇಟಿಯಾದ ಮುಸ್ಲಿಂ​ ಮುಖಂಡರು;… ಉಪ ಚುನಾವಣೆ | ಸಿಎಂ ಸಭೆಯಲ್ಲಿ ಭಾಗಿಯಾಗಿದ್ದ ಸರಕಾರಿ ಶಿಕ್ಷಕ ಕಬ್ಬಿನ ಗದ್ದೆಯೊಳಗೆ… ರಂಗೇರಿದ ಉಪ ಚುನಾವಣಾ ಕಣ: ಅಖಾಡಕ್ಕಿಳಿದ ಸಿಎಂ ಸಿದ್ದರಾಮಯ್ಯ, ವಿಜಯೇಂದ್ರ; ಕೈ, ಕಮಲ… ಕೌಟುಂಬಿಕ ಕಲಹ: ಭದ್ರಾ ಬಲದಂಡೆ ನಾಲೆ ಬ್ರಿಡ್ಜ್ ನಿಂದ ಹಾರಿ ಸೂಪರ್ ವೈಸರ್… ಗ್ಯಾಸ್ ಸಿಲಿಂಡರ್ ಗೆ ರೆಗ್ಯುಲೇಟರಿ ಅಳವಡಿಸುವಾಗ ಏಕಾಏಕಿ ಸ್ಫೋಟ: ಮನೆ ಛಿದ್ರಛಿದ್ರ; 4… ಭಕ್ತ ಸಾಗರದ ಹರ್ಷೋದ್ಗಾರದೊಂದಿಗೆ ನಡೆದ ನಂಜನಗೂಡಿನ ದೊಡ್ಡ ಜಾತ್ರೆ: ಶ್ರೀ ಗೌತಮ ಪಂಚ… ನಿಯಂತ್ರಣ ತಪ್ಪಿದ ಸರಕಾರಿ ಬಸ್: ಮಡಿಕೇರಿ ಬಸ್ ನಿಲ್ದಾಣದಲ್ಲಿ ತಪ್ಪಿದ ಭಾರಿ ದುರಂತ Madikeri | ಕೊಡಗು ಜಿಲ್ಲೆಗೆ ರಾಜ್ಯ ಪೊಲೀಸ್ ಮಹಾ ನಿರ್ದೇಶಕ ಡಾ. ಎಂ.… Kodagu | ಶನಿವಾರಸಂತೆ: ಟ್ರ್ಯಾಕ್ಟರ್ -ಕಾರು ಅಪಘಾತ; ಟ್ರ್ಯಾಕ್ಟರ್ ಚಾಲಕ ಸಾವು

ಇತ್ತೀಚಿನ ಸುದ್ದಿ

ಪ್ರತಿಪಕ್ಷ ನಾಯಕರ ಆಯ್ಕೆ ವಿಳಂಬ: ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ನಡ್ಡಾಗೆ ಲೀಗಲ್ ನೋಟಿಸ್; ಪ್ರತಿ ನಳಿನ್ ಕುಮಾರ್ ಕಟೀಲಿಗೆ

10/09/2023, 22:54

ಬೆಂಗಳೂರು(reporterkarnataka.com): ರಾಜ್ಯ ವಿಧಾನಸಭೆಯ ಪ್ರತಿಪಕ್ಷ ನಾಯಕನ ಆಯ್ಕೆಯಲ್ಲಿ ವಿಳಂಬ ನೀತಿ ಅನುಸರಿಸಿರುವುದಕ್ಕೆ
ಬಿಜೆಪಿ ರಾಷ್ಟ್ರಾಧ್ಯಕ್ಷ ಜೆ.ಪಿ.ನಡ್ಡಾರಿಗೆ ವಕೀಲ ಎನ್.ಪಿ. ಅಮೃತೇಶ್ ಲೀಗಲ್ ನೋಟಿಸ್ ನೀಡಿದ್ದಾರೆ.
ರಾಜ್ಯದಲ್ಲಿ ಪ್ರತಿಪಕ್ಷದ ನಾಯಕನ ಆಯ್ಕೆಯಾಗದಿರುವುದರಿಂದ ಹಲವು ನೇಮಕ ವಿಳಂಬವಾಗಿವೆ. ಮಾನವ ಹಕ್ಕುಗಳ ಆಯೋಗ, ಉಪಲೋಕಾಯುಕ್ತ, ಕೆಪಿಎಸ್ ಸಿ ಸೇರಿದಂತೆ ಹಲವು ನೇಮಕಗಳಾಗುತ್ತಿಲ್ಲ. ಕಾನೂನಿನಂತೆ ಕೆಲ ಮಹತ್ವದ ಹುದ್ದೆಗಳಿಗೆ ನೇಮಕ ಮಾಡಲು ಮುಖ್ಯಮಂತ್ರಿ, ಪ್ರತಿಪಕ್ಷದ ನಾಯಕ, ಮುಖ್ಯ ನ್ಯಾಯಮೂರ್ತಿಗಳ ಸಮಾಲೋಚನೆಯ ಅಗತ್ಯವಿದೆ ಎಂದಿದ್ದಾರೆ.
ಸರಕಾರ ಎಡವಿದಾಗ ಎಚ್ಚರಿಸಲು, ಜನರ ಪರವಾಗಿ ಸಮರ್ಥವಾಗಿ ಧ್ವನಿ ಎತ್ತಲು ಪ್ರತಿ ಪಕ್ಷದ ನಾಯಕನ ಅಗತ್ಯವಿದೆ. ಭಾರತದ ಪ್ರಜೆಯಾಗಿ, ಮತದಾರನಾಗಿ, ಪ್ರತಿಪಕ್ಷದ ನಾಯಕನನ್ನು ನೇಮಿಸುವಂತೆ ಕೋರಿಕೊಳ್ಳುವ ಹಕ್ಕು ನನಗಿದೆ. ಹೀಗಾಗಿ ಶೀಘ್ರ ಕ್ರಮ ಕೈಗೊಳ್ಳದಿದ್ದರೆ ಕೋರ್ಟ್ ಮೆಟ್ಟಿಲೇರುವುದಾಗಿ ನೋಟಿಸ್​ನಲ್ಲಿ ಉಲ್ಲೇಖಿಸಿದ್ದಾರೆ. ನೋಟಿಸ್ ಪ್ರತಿಯನ್ನು ಪಕ್ಷದ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್, ಸ್ಪೀಕರ್ ಹಾಗೂ ರಾಜ್ಯಪಾಲರಿಗೂ ಕಳುಹಿಸಲಾಗಿದೆ.

ಇತ್ತೀಚಿನ ಸುದ್ದಿ

ಜಾಹೀರಾತು