ಇತ್ತೀಚಿನ ಸುದ್ದಿ
ಪ್ರತಿಪಕ್ಷ ಉಪ ನಾಯಕ ಖಾದರ್ ಗೆ ನಕಲಿ ಹೆಸರಲ್ಲಿ ಕರೆ, ಸಂದೇಶ: ಪೊಲೀಸ್ ಕಮಿಷನರ್ ಗೆ ದೂರು
02/01/2023, 23:19

ಮಂಗಳೂರು(reporterkarnataka.com): ಪ್ರತಿಪಕ್ಷದ ಉಪ ನಾಯಕ ಯು.ಟಿ. ಖಾದರ್ ಅವರ ಮೊಬೈಲ್ ಗೆ ನಕಲಿ ಕರೆ ಹಾಗೂ ಸಂದೇಶ ಬಂದಿದ್ದು, ಈ ಬಗ್ಗೆ ತನಿಖೆ ನಡೆಸುವಂತೆ ಖಾದರ್ ಅವರು ಮಂಗಳೂರು ಪೊಲೀಸ್ ಕಮಿಷನರ್ ಅವರಿಗೆ ದೂರು ನೀಡಿದ್ದಾರೆ.
ಮಧ್ಯಾಹ್ನ 1.33ರ ಸುಮಾರಿಗೆ 7996664000 ಸಂಖ್ಯೆಯ ಮೊಬೈಲ್‌ನಿಂದ ಎರಡು ಬಾರಿ ನನಗೆ ಕರೆ ಬಂದಿತ್ತು, ಆದರೆ ನಾನು ಸಮಾರಂಭದಲ್ಲಿ ಇದ್ದಿರುವುದರಿಂದ ಕರೆ ಸ್ವೀಕರಿಸಿರಲಿಲ್ಲ. ಬಳಿಕ ಸಭೆ ಮುಗಿಸಿ ಮೊಬೈಲ್ ನೋಡಿದಾಗ ಇದರಲ್ಲಿ ಅದರಲ್ಲಿ ಕಾಲ್ ಮಿ ಎಂದು ಬರೆದಿತ್ತು. ಈ ಮೊಬೈಲ್ ಸಂಖ್ಯೆ ಎಐಸಿಸಿ ಪ್ರಧಾನ ಕಾರ್ಯದರ್ಶಿ ಕೆ. ಸಿ. ವೇಣುಗೋಪಾಲ್ ಹೆಸರಿನಲ್ಲಿ ಸೇವ್ ಮಾಡಲಾಗಿತ್ತು ಎಂದು ಟ್ರೂ ಕಾಲರ್‌ನಲ್ಲಿ ತಿಳಿದಿದೆ. ಈ ಬಗ್ಗೆ ಕಾಲ್ ಮಾಡಿದವರು ಯಾರು ಮತ್ತು ಯಾಕಾಗಿ ಮಾಡಿದರು ಎಂದು ತಿಳಿಯಲು ಸೂಕ್ತ ತನಿಖೆ ನಡೆಸಿ ಕಾನೂನು ಕ್ರಮ ಕೈಗೊಳ್ಳುವಂತೆ ಖಾದರ್ ಅವರು ಕಮಿಷನರ್ ಅವರಿಗೆ ದೂರು ನೀಡಿದ್ದಾರೆ.