ಇತ್ತೀಚಿನ ಸುದ್ದಿ
ಪ್ರತಿ ಬೂತ್‌ಗೆ ತಲಾ 100 ಸದಸ್ಯತ್ವ ಮಾಡಿಸುವ ಮೂಲಕ ಕಾಂಗ್ರೆಸ್ ಪಕ್ಷವನ್ನು ಬೇರುಮಟ್ಟದಲ್ಲಿ ಸಂಘಟಿಸಿ: ಕೇಂದ್ರ ಮಾಜಿ ಸಚಿವ ಮುನಿಯಪ್ಪ
24/03/2022, 19:55
ಶಬ್ಬೀರ್ ಅಹ್ಮದ್ ಶ್ರೀನಿವಾಸಪುರ ಕೋಲಾರ
info.reporterkarnataka@gmail.com
ಮುಂಬರುವ ವಿಧಾನಸಭಾ ಚುನಾವಣೆ ಹಿನ್ನೆಲೆಯಲ್ಲಿ ಪ್ರತಿ ಬೂತ್‌ಗೆ 100 ಮಂದಿಯ ತಂಡವನ್ನು ಸಂಘಟಿಸುವ ಮೂಲಕ ಕಾಂಗ್ರೆಸ್ ಪಕ್ಷವನ್ನು ಬೇರು ಮಟ್ಟದಿಂದ ಬಲಪಡಿಸಲು ಸದಸ್ಯತ್ವ ನೊಂದಣಿ ಕಾರ್ಯವನ್ನು ಕೈಗೆತ್ತಿ ಕೊಳ್ಳಲಾಗಿದೆ ಎಂದು ಕೇಂದ್ರ ಮಾಜಿ ಸಚಿವ ಕೆ.ಹೆಚ್.ಮುನಿಯಪ್ಪ ಹೇಳಿದರು .
ನಗರ ಹಾರೋಹಳ್ಳಿಯಲ್ಲಿನ ತಮ್ಮ ಗೃಹ ಕಚೇರಿಯಲ್ಲಿನ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಈಗಾಗಲೇ 10 ಸಾವಿರ ಮಂದಿಯ ನೊಂದಣಿಯಾಗಿದ್ದು , ಮಾ 31 ರೊಳಗೆ 30 ಸಾವಿರ ಮಂದಿಯ ಬೂತ್ ಸಮಿತಿಯನ್ನು ರಚಿಸಲಾಗುವುದು ಎಂದು ತಿಳಿಸಿದರು.
ಕೋಲಾರ ವಿಧಾನ ಸಭಾ ಕ್ಷೇತ್ರಕ್ಕೆ ಸಂಬಂಧಿಸಿದಂತೆ ಸದಸ್ಯತ್ವ ನೊಂದಣಿಯನ್ನು ಬ್ಲಾಕ್ ಅಧ್ಯಕ್ಷರಾದ ಉದಯಶಂಕರ್ ಹಾಗೂ ಪ್ರಸಾದ್ ಬಾಬು ನೇತ್ರತ್ವದಲ್ಲಿ ಪರಿಶೀಲಿಸಲಾಗಿದೆ . ಮಾ 31 ರೊಳಗೆ ಪ್ರತಿ ಬೂತ್‌ಗೆ 100 ಮಂದಿಯ ತಂಡವನ್ನು ಸಂಘಟಿಸಲಾಗುವುದು ಎಂದರು.
ಎಐಸಿಸಿ ಅಧ್ಯಕ್ಷೆ ಸೋನಿಯ ಗಾಂಧಿಯವರು,ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ , ಸಿಪಿಎಲ್ ನಾಯಕ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಸೂಚನೆ ಮೇರೆಗೆ ಬೂತ್ ಮಟ್ಟದಿಂದ ಪಕ್ಷವನ್ನು ಸಂಘಟಿಸಿ ಕೊಂಡು ಸಧೃಡ ಪಡೆಸಲಾಗುವುದು. ರಾಷ್ಟ್ರದಲ್ಲಿ ಮತ್ತು ರಾಜ್ಯದಲ್ಲಿ ಮತ್ತೆ ಕಾಂಗ್ರೇಸ್ ಪಕ್ಷವನ್ನು ಅಧಿಕಾರಕ್ಕೆ ತರಲಾಗುವುದು ಎಂದರು.
ಪ್ರಶ್ನೆಯೊಂದಕ್ಕೆ ಉತ್ತರಿಸಿದ ಅವರು , ಭಾರತವು ಜಾತ್ಯತೀತ ರಾಷ್ಟ್ರವಾಗಿದೆ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಎಲ್ಲರೂ ಸರಿ ಸಮಾನರು . ಪ್ರತಿಯೊಬ್ಬರೂ ಸ್ವತಂತ್ರರಾಗಿದ್ದಾರೆ. ಯಾವುದೇ ಜಾತಿ ಭೇದಗಳಿಗೆ ಅವಕಾಶಗಳಿಲ್ಲ . ಅವರವರ ಧರ್ಮಗಳ ಪಾಲನೆಗೆ ಸರ್ವಸ್ವತಂತ್ರ ಪಡೆದಿದ್ದಾರೆ ಎಂದು ನುಡಿದರು.
ಯಾವುದೇ ಜಾತ್ರೆಗಳಲ್ಲಿ ಸರ್ವಧರ್ಮಿಯರು ಭಾಗವಹಿಸುವ ಹಕ್ಕುಗಳಿದೆ . ದೇವಾಲಯಗಳಿಗೂ ಹೋಗ ಬಹುದಾಗಿದೆ. ಯಾವೂದೇ ಧರ್ಮಗಳನ್ನು ಪಾಲನೆ ಮಾಡ ಬಹುದಾಗಿದೆ. ಅದಕ್ಕೆ ಅಡ್ಡಿ ಪಡಿಸುವುದು ಸಂವಿಧಾನದ ಉಲ್ಲಂಘನೆಯಾಗಲಿದೆ ಎಂದು ಹೇಳಿದರು .
ಸಿದ್ದರಾಮಯ್ಯ ಬಂದರೆ ಸ್ವಾಗತ: ಚುನಾವಣಾ ನಿಯಮಗಳ ಪ್ರಕಾರ ಕೆಲವಡೆ ಮೀಸಲಾತಿ , ಕೆಲವಡೆ ಸಾಮಾನ್ಯ ಎಂಬುವುದಾಗಿ ಇದೆ. ಪಕ್ಷದ ಅಭ್ಯರ್ಥಿ ಬಗ್ಗೆ ಕ್ಷೇತ್ರದ ಜನತೆಯ ತೀರ್ಮಾನವೇ ಅಂತಿಮವಾಗಿದೆ ಎಂದ
ಅವರು, ಪ್ರಶ್ನೆಯೊಂದಕ್ಕೆ ಮಾಜಿ ಮುಖ್ಯ ಮಂತ್ರಿ ಸಿದ್ದರಾಮಯ್ಯ ಅವರು ಕೋಲಾರ ಕ್ಷೇತ್ರಕ್ಕೆ ಬಂದಲ್ಲಿ ಸ್ವಾಗತಿಸುತ್ತೇನೆ ಎಂದರು.
ಕೋಲಾರ ಜಿಲ್ಲೆಯ ಕಾಂಗ್ರೇಸ್ ಪಕ್ಷದಲ್ಲಿ ಯಾವೂದೇ ಗುಂಪುಗಾರಿಕೆ ಇಲ್ಲ , ಯಾವ ಘಟಬಂಧನ್ ಇಲ್ಲ . ಅವೆಲ್ಲವೂ ಕಪೋಕಲ್ಪತ ಪ್ರಚಾರಗಳಷ್ಟೆ ಎಂದ ಅವರು ಒಂದು ಪಕ್ಷವೆಂದರೆ ಭಿನ್ನಾಭಿಪ್ರಾಯಗಳು ಸಹಜವಾದರೂ ಚುನಾವಣೆಯಲ್ಲಿ ಎಲ್ಲರೂ ಪಕ್ಷಕ್ಕಾಗಿ ಸಂಘಟಿತ ರಾಗಿ ಶ್ರಮಿಸುತ್ತೇವೆ ಎಂದು ಅವರು ನುಡಿದರು.
ರಾಷ್ಟ್ರಧ್ವಜ ಹಾರಿಸಲು ಯಾರೂ ಅಡ್ಡಿ ಪಡಿ ಸದಿದ್ದರೂ ವಿನಾಕಾರಣ ಜನರನ್ನು ಗೊಂದಲಕ್ಕೆ ಒಳಪಡಿಸಿ ಉದ್ವಿಗ್ನ ಪರಿಸ್ಥಿತಿ ನಿರ್ಮಿಸುವ ಪ್ರಯತ್ನ ಸಲ್ಲದು ಎಂದು ಕಿಡಿ ಕಾರಿದರು.
ಈ ಸಂದರ್ಭದಲ್ಲಿ ಜಿಲ್ಲಾ ಉಪಾಧ್ಯಕ್ಷ ಎಲ್.ಎ.ಮಂಜುನಾಥ್ , ಜಿಲ್ಲಾ ಮಹಿಳಾ ಅಧ್ಯಕ್ಷೆ ರತ್ನಮ್ಮ , ಗ್ರಾಮಾಂತರ ಬ್ಲಾಕ್ ಅಧ್ಯಕ್ಷ ಉದಯಶಂಕರ್ , ನಗರ ಬ್ಲಾಕ್ ಅಧ್ಯಕ್ಷ ಪ್ರಸಾದ್ ಬಾಬು , ಕೆ.ಯು.ಡಿ.ಎ.ಮಾಜಿ ಅಧ್ಯಕ್ಷ ಅಥಾವುಲ್ಲಾ , ಕಿಸಾನ್ ಸೆಲ್ ಜಿಲ್ಲಾಧ್ಯಕ್ಷ ಊರುಬಾಗಿಲು ಶ್ರೀನಿವಾಸ್ , ಅಲ್ಪಸಂಖ್ಯಾತ ವಿಭಾಗದ ಮುಖಂಡ ಯಕ್ವಾಲ್ ಅಹಮದ್ , ಹಿಂದುಳಿದ ವರ್ಗಗಳ ಅಧ್ಯಕ್ಷ ನಾಗರಾಜ್ , ಮಂಜುನಾಥ್ , ಎಸ್.ಸಿ. ವಿಭಾಗದ ಅಧ್ಯಕ್ಷ ಜಯದೇವ ,,ವೇಮಗಲ್ ಪಾಷಟಮಕ ಲಾಲ್ ಬಹುದ್ದೂರ್ ಶಾಸ್ತ್ರಿ ಮುಂತಾದವರು ಹಾಜರಿದ್ದರು .