ಇತ್ತೀಚಿನ ಸುದ್ದಿ
ಪ್ರಸಿದ್ಧ ಪ್ರವಾಸಿ ತಾಣ, ಯಾತ್ರಾಸ್ಥಳ ಕೋಟೆಬೆಟ್ಟಕ್ಕಿಲ್ಲ ಸರಿಯಾದ ರಸ್ತೆ: ಅಭಿವೃದ್ಧಿ ಪಡಿಸಲು ಶಾಸಕರಿಗೆ ಆಗ್ರಹ
20/07/2021, 07:27
ದೇವಲಾಪುರ ಜಗದೀಶ್ ನಾಗಮಂಗಲ ಮಂಡ್ಯ
info.reporterkarnataka@gmail.com
ನಾಗಮಂಗಲ ತಾಲೂಕಿನ ಪ್ರಮುಖ ಪ್ರವಾಸಿ ತಾಣವಾಗಿರುವ ಕೋಟೆಬೆಟ್ಟ ಗ್ರಾಮಕ್ಕೆ ಹೋಗುವ ರಸ್ತೆ ತೀರಾ ಕೆಟ್ಟು ಹೋಗಿದ್ದು, ಜನ ಹಾಗೂ ವಾಹನ ಸಂಚಾರಕ್ಕೆ ಅಯೋಗ್ಯವಾಗಿದೆ.ರಸ್ತೆ ಕೆಸರು ಗುಂಡಿಯಿಂದ ತುಂಬಿದ್ದು, ಕೊಚ್ಚೆ ಹೊಂಡಗಳು ಕೊಳೆತು ನಾರುತ್ತಿವೆ.
ಈ ಗ್ರಾಮದಲ್ಲಿ ಯಾತ್ರಾ ಸ್ಥಳವಾದ ಪ್ರಸಿದ್ಧ ಕಂಬದ ನರಸಿಂಹಸ್ವಾಮಿ ದೇವಾಲಯವಿದೆ. ಹೆಚ್ಚಿನ ಸಂಖ್ಯೆಯಲ್ಲಿ ಭಕ್ತಾದಿಗಳು ಇಲ್ಲಿಗೆ ಆಗಮಿಸುತ್ತಾರೆ. ಹೊರ ಜಿಲ್ಲೆ, ಹೊರ ರಾಜ್ಯಗಳಿಂದಲೂ ಇಲ್ಲಿಗೆ ಆಗಮಿಸುತ್ತಾರೆ. ಆದರೆ ಈ ದಾರಿಯಾಗಿ ತೆರಳುವುದು ಬಲು ದೊಡ್ಡ ಸವಾಲಾಗಿದೆ. ಸ್ಥಳೀಯ ಶಾಸಕರು ತಕ್ಷಣ ಪ್ರವಾಸಿ ತಾಣವಾಗಿರುವ ಕೋಟೆ ಬೆಟ್ಟಕ್ಕೆ ಹೋಗುವ ಮಾರ್ಗದ ರಸ್ತೆಯನ್ನು ದುರಸ್ತಿ ಮಾಡಿಸಬೇಕೆಂದು ಭಕ್ತಾದಿಗಳು ಹಾಗೂ ಅಲ್ಲಿನ ಜನತೆ ಒತ್ತಾಯಿಸಿದ್ದಾರೆ.