3:19 PM Monday30 - March 2026
ಬ್ರೇಕಿಂಗ್ ನ್ಯೂಸ್
Madikeri | ಕೊಡಗು ಜಿಲ್ಲೆಗೆ ರಾಜ್ಯ ಪೊಲೀಸ್ ಮಹಾ ನಿರ್ದೇಶಕ ಡಾ. ಎಂ.… Kodagu | ಶನಿವಾರಸಂತೆ: ಟ್ರ್ಯಾಕ್ಟರ್ -ಕಾರು ಅಪಘಾತ; ಟ್ರ್ಯಾಕ್ಟರ್ ಚಾಲಕ ಸಾವು ರಾಜ್ಯದಲ್ಲಿ ಆಟೋ ಎಲ್‌ಪಿಜಿ ಕೊರತೆ ಇಲ್ಲ: ಆಹಾರ, ನಾಗರಿಕ ಸರಬರಾಜು ಮತ್ತು ಗ್ರಾಹಕರ… ಮಡಿಕೇರಿ: ಕೊಡಗು ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯ ಸರಕಾರಿ ಶುಶ್ರೂಷಾ ಕಾಲೇಜು 2ನೇ ಘಟಿಕೋತ್ಸವ ಕೇಂದ್ರ ಸರಕಾರವನ್ನು ಟೀಕೆ ಮಾಡುವುದರಲ್ಲೇ 3 ವರ್ಷಗಳ ಕಾಲಹರಣ: ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ… ಕೈ ನಾಯಕರ ಸಂಧಾನ ಯಶಸ್ವಿ: ದಾವಣಗೆರೆ ದಕ್ಷಿಣ ಬಂಡಾಯ ಅಭ್ಯರ್ಥಿ ಪೈಲ್ವಾನ್ ಸ್ಪರ್ಧೆಯಿಂದ… ಚಿಕ್ಕಮಗಳೂರು: ಬಿಸಿಲ ಧಗೆಗೆ ಹೊತ್ತಿ ಉರಿಯುತ್ತಿರುವ ಮೀಸಲು ಅರಣ್ಯ; ಅಪಾಯದಲ್ಲಿ ಜೀವ ಸಂಕುಲ 1ನೇ ತರಗತಿ ದಾಖಲಾತಿ ವಯೋಮಿತಿಯಲ್ಲಿ 60 ದಿನಗಳ ಸಡಿಲಿಕೆ: ಸಚಿವ ಮಧು ಬಂಗಾರಪ್ಪ… ತುಮಕೂರು | ಮಧ್ಯರಾತ್ರಿ ಕುಡುಕ ಪುಂಡರ ಅಟ್ಟಹಾಸ: 10ಕ್ಕೂ ಅಧಿಕ ವಾಹನಗಳ ಗ್ಲಾಸ್… ರಾಜ್ಯ ಸರ್ಕಾರಕ್ಕೆ ಪ್ರತಿಷ್ಠೆಯಾದ ಉಪ ಚುನಾವಣೆ: ಪೈಲ್ವಾನ್ ಮನವೊಲಿಸಲು ಜಮೀರ್‌ಗೆ ಮುಖ್ಯಮಂತ್ರಿ ಸೂಚನೆ

ಇತ್ತೀಚಿನ ಸುದ್ದಿ

ಪ್ರಾಣಿಗಳಿಗೂ ಮನುಷ್ಯರಷ್ಟೇ ಬದುಕುವ ಹಕ್ಕಿದೆ: ಅಧಿಕಾರಿಗಳಿಗೆ ಪಾಠ ಮಾಡಿದ ಸ್ಪೀಕರ್ ಖಾದರ್

24/06/2023, 12:52

ಮಂಗಳೂರು(reporterkarnataka.com): ಮನುಷ್ಯರಷ್ಟೇ ಪ್ರಾಣಿಗಳಿಗೂ ಬದುಕಲು ಹಕ್ಕು ಇದೆ. ಅವುಗಳ ಹೆಸರಿನಲ್ಲಿ ಯೋಜನೆ ರೂಪಿಸಿ ಸೂಕ್ತ ವ್ಯವಸ್ಥೆ ಮಾಡದಿದ್ದರೆ ಏನು ಪ್ರಯೋಜನ?
ಪಶು ಸಂಜೀವಿನಿ ಆಂಬುಲೆನ್ಸ್ ಯೋಜನೆಯಲ್ಲಿ ಪ್ರತಿ ಗೋವಿಗೆ ಸರಕಾರದಿಂದ ಎಷ್ಟು ಹಣ ಬರುತ್ತದೆ? ಎಷ್ಟು ಅನುದಾನ ಬರಲು ಬಾಕಿ ಇದೆ ಎಂದು ಸ್ಪೀಕರ್ ಯು.ಟಿ.ಖಾದರ್ ಪ್ರಶ್ನಿಸಿದರು.
ಹೋಮ್ ವರ್ಕ್ ಮಾಡಿ ಬಾರದ ಅಧಿಕಾರಿಗಳ ಬಳಿ ಈ ಕುರಿತು ಯಾವುದೇ ಅಂಕಿಅಂಶ ಮಾಹಿತಿ ಇರಲಿಲ್ಲ. ಹಾಗಾಗಿ ಜಿಲ್ಲಾಮಟ್ಟದ ಅಧಿಕಾರಿಗಳೇ ಸ್ಪೀಕರ್ ಪ್ರಶ್ನೆಗೆ ನಿರುತ್ತರರಾದರು.
ಇದೆಲ್ಲ ನಡೆದದ್ದು ದ.ಕ. ಜಿಪಂ ಕಚೇರಿಯ ನೇತ್ರಾವತಿ ಸಭಾಂಗಣದಲ್ಲಿ ನಡೆದ ತ್ರೈಮಾಸಿಕ ಕೆಡಿಪಿ ಸಭೆಯಲ್ಲಿ. ಸಭೆಯಲ್ಲಿ ಪಾಲನಾ ವರದಿ ವೇಳೆ ಸ್ಪೀಕರ್ ಯು.ಟಿ.ಖಾದರ್ ವಿಷಯ ಪ್ರಸ್ತಾಪಿಸಿದರು.

ಅಧಿಕಾರಿಗಳು ಮಾಹಿತಿ ನೀಡಲು ತಡವರಿಸಿದಾಗ ಸ್ಪೀಕರ್ ಖಾದರ್ ತರಾಟೆಗೆ ತೆಗೆದುಕೊಂಡರು. ಜಿಲ್ಲಾಮಟ್ಟದ ಅಧಿಕಾರಿ ಬಳಿ ಲೆಕ್ಕ ಇಲ್ಲವೇ ಎಂದು ಅಸಮಾಧಾನ ವ್ಯಕ್ತಪಡಿಸಿದ ಖಾದರ್, ಈ ಕುರಿತು ಉಸ್ತುವಾರಿ ಸಚಿವರಿಗೆ ಸಮಗ್ರ ವರದಿ ಕೊಡಿ, ವರದಿ ಬಗ್ಗೆ ಸದನದಲ್ಲಿ ಚರ್ಚಿಸಲಾಗುವುದು ಎಂದು ಹೇಳಿದರು.
ದ.ಕ.ಜಿಲ್ಲೆಗೆ ಮಂಜೂರಾದ 9 ಪಶು ಆಂಬುಲೆನ್ಸ್‌ಗಳಿಗೆ ಇನ್ನೂ ಚಾಲಕರ ನೇಮಕವಾಗದಿರುವ ವಿಚಾರ ಪ್ರಸ್ತಾಪವಾಗಿ, ಚಾಲಕರ ನೇಮಿಸದ ಏಜೆನ್ಸಿಗಳ ವಿರುದ್ಧ ಕ್ರಮಕೈಗೊಳ್ಳುವಂತೆ ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್ ಅವರು ಪಶುಸಂಗೋಪನಾ ಇಲಾಖಾಧಿಕಾರಿಗೆ ಸೂಚನೆ ನೀಡಿದರು.
ದಕ್ಷಿಣ ಕನ್ನಡ ಜಿಲ್ಲೆಯಲ್ಲಿ 20 ಗೋಶಾಲೆಗಳಿದ್ದು, ಇದರಲ್ಲಿ 17 ಖಾಸಗಿ, 2 ಧಾರ್ಮಿಕ ದತ್ತಿ ಇಲಾಖೆ ಹಾಗೂ 1 ಪಶು ಇಲಾಖೆಗೆ ಸಂಬಂಧ ಪಟ್ಟದ್ದಾಗಿದೆ. ಜಿಲ್ಲೆಯಲ್ಲಿ 107 ಕ್ಲಿನಿಕ್‌ಗಳಿದ್ದು 74 ಮಂದಿ ವೈದ್ಯರಲ್ಲಿ 28 ಮಂದಿ ಮಾತ್ರ ಕಾರ್ಯನಿರ್ವಹಿಸುತ್ತಿದ್ದಾರೆ. ಕಳೆದ 5 ವರ್ಷದಲ್ಲಿ ಹೊಸ ಪಶು ವೈದ್ಯರ ನೇಮಕವಾಗಿಲ್ಲ ಎಂದರು. ಗೋವುಗಳ ತುರ್ತು ಚಿಕಿತ್ಸೆಗೆ ಸ್ಪಂದಿಸುವ ನಿಟ್ಟಿನಲ್ಲಿ ಪಶು ಸಂಜೀವಿನಿ ಯೋಜನೆಯಡಿ ದಕ್ಷಿಣ ಕನ್ನಡ ಜಿಲ್ಲೆಗೆ 9 ಆಂಬುಲೆನ್ಸ್‌ಗಳು ಮಂಜೂರಾಗಿದ್ದು, ಇದರ ನಿರ್ವಹಣೆಯನ್ನು ಏಜೆನ್ಸಿಯೊಂದಕ್ಕೆ ಟೆಂಡರ್ ನೀಡಲಾಗಿದೆ. ಆದರೆ ಈವರೆಗೆ ಚಾಲಕರ ನೇಮಕವಾಗಿಲ್ಲ ಎಂದು ಅಧಿಕಾರಿ ಉತ್ತರಿಸಿದರು. ಇದರಿಂದ ಅಸಮಾಧಾನಗೊಂಡ ಯು.ಟಿ.ಖಾದರ್, ಮನುಷ್ಯರ ಹಾಗೆ ಪ್ರಾಣಿಗಳಿಗೂ ಬದುಕುವ ಹಕ್ಕಿದೆ. ಅವುಗಳ ಹೆಸರಿನಲ್ಲಿ ಯೋಜನೆ ತಯಾರಿಸಿ ಅದಕ್ಕೆ ಸೂಕ್ತ ವ್ಯವಸ್ಥೆ ಮಾಡದಿದ್ದರೆ ಏನು ಪ್ರಯೋಜನ ಎಂದರಲ್ಲದೆ, ಈ ಬಗ್ಗೆ ವಿಸ್ತತ ವರದಿಯನ್ನು ಜಿಲ್ಲಾ ಉಸ್ತುವಾರಿ ಸಚಿವರಿಗೆ ಒದಗಿಸುವಂತೆ ಅಧಿಕಾರಿಗೆ ಸೂಚಿಸಿದರು. ಹೊಸ ಆಂಬುಲೆನ್ಸ್ ಖರೀದಿಸಿ 6 ತಿಂಗಳು ಕಳೆದರೂ ಚಾಲಕರ ನೇಮಕವಾಗಿಲ್ಲ. ಪಶುಗಳ ಬಳಿಗೆ ತೆರಳಬೇಕಾದ ಆಂಬುಲೆನ್ಸ್ಗಳು ಪಾಳುಬಿದ್ದಸ್ಥಿತಿಯಲ್ಲಿವೆ.ಚಾಲಕರ ನೇಮಿಸದ ಏಜೆನ್ಸಿಗಳ ವಿರುದ್ಧ ಕ್ರಮ ಕೈಗೊಳ್ಳುವಂತೆ ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್ ಅವರು ಪಶು ಸಂಗೋಪನಾ ಇಲಾಖೆ ಅಧಿಕಾರಿಗೆ ಸೂಚನೆ ನೀಡಿದರು.

ಇತ್ತೀಚಿನ ಸುದ್ದಿ

ಜಾಹೀರಾತು