4:22 AM Wednesday10 - September 2025
ಬ್ರೇಕಿಂಗ್ ನ್ಯೂಸ್
ಅಸ್ಸಾಂ ಕಾರ್ಮಿಕರು ಕೊಡಗಿನಿಂದ ಹಾಸನ ಕಡೆಗೆ ವಲಸೆ: ಕುಶಾಲನಗರ ಬಸ್ ನಿಲ್ದಾಣದಲ್ಲಿ ಹಿಂಡು… Kodagu | ಕಾಲೇಜಿನಲ್ಲಿ ಮಚ್ಚು ಹಿಡಿದು ರೀಲ್ಸ್: ವಿದ್ಯಾರ್ಥಿ ವಿರುದ್ದ ಪ್ರಕರಣ ದಾಖಲು;… Kodagu | ಕೇರಳದ ಕಸಾಯಿಖಾನೆಗೆ ಕೋಣಗಳ ಸಾಗಾಟ: 34 ಕೋಣಗಳ ರಕ್ಷಣೆ ಸಂತೋಷದ ಬಾಗಿಲಿನತ್ತ ಪೂಜಾಳ ಪಯಣ: ಬಿಹಾರದಲ್ಲಿರುವ ಕುಟುಂಬ ಜತೆ ಪುನರ್ಮಿಲನ ಕರಾವಳಿಯಲ್ಲಿ ಸಂಭ್ರಮದ ಮೊಂತಿ ಹಬ್ಬ: ಚರ್ಚ್ ಗಳಲ್ಲಿ ವಿಶೇಷ ಬಲಿಪೂಜೆ; ತೆನೆ ವಿತರಣೆ ಮೈಸೂರು ದಸರಾ: ಗೋಲ್ಡ್​ ಕಾರ್ಡ್​; ಟಿಕೆಟ್​ ದರ ಎಷ್ಟು? ಖರೀದಿ ಹೇಗೆ? ಇಲ್ಲಿದೆ… Kodagu | ಮಡಿಕೇರಿ: ಮಾಂದಲಪಟ್ಟಿಗೆಯಲ್ಲಿ ಪ್ರವಾಸಿಗನ ಮೇಲೆ ಜೀಪ್ ಚಾಲಕ ಹಲ್ಲೆ ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಟರ್ಮಿನಲ್ ಬಿಲ್ಡಿಂಗ್ ಧ್ವಂಸ ಬೆದರಿಕೆ: ಆರೋಪಿ ಬಂಧನ ಕೃಷ್ಣಾ ಮೇಲ್ದಂಡೆ ಯೋಜನೆ ಮೂರನೇ ಹಂತ: ಒಂದು ವಾರದೊಳಗೆ ಭೂ ಪರಿಹಾರಕ್ಕೆ ದರ… Kodagu | ಚೋರರಿದ್ದಾರೆ ಎಚ್ಚರಿಕೆ: ಕುಶಾಲನಗರ; ಹೆಚ್ಚುತ್ತಿರುವ ಶ್ರೀಗಂಧ ಮರಗಳ ಕಳ್ಳತನ

ಇತ್ತೀಚಿನ ಸುದ್ದಿ

ಪ್ರಧಾನಿ ಮೋದಿ ಏ.28ರಂದು ಶಿರಸಿಗೆ: ಬಿಜೆಪಿ ಅಭ್ಯರ್ಥಿ ವಿಶ್ವೇಶ್ವರ ಹೆಗಡೆ ಕಾಗೇರಿ ಪರ ಪ್ರಚಾರ

27/04/2024, 14:33

ಆದಿತ್ಯ ಶಿರಸಿ ಕಾರವಾರ

info.reporterkarnataka@gmail.com

ಪ್ರಧಾನಿ ನರೇಂದ್ರ ಮೋದಿ ಅವರು ಏ. 28ರಂದು ಉತ್ತರ ಕನ್ನಡ ಜಿಲ್ಲೆಯ ಶಿರಸಿಗೆ ಆಗಮಿಸಲಿದ್ದು, ಬಿಜೆಪಿ ಅಭ್ಯರ್ಥಿ ವಿಶ್ವೇಶ್ವರ ಹೆಗಡೆ ಕಾಗೇರಿ ಅವರ ಪರ ಪ್ರಚಾರ ನಡೆಸಲಿದ್ದಾರೆ.
28ರಂದು ಬೆಳಗ್ಗೆ 11 ಗಂಟೆಗೆ ಪ್ರಧಾನಿ ಮೋದಿ ಅವರು ಶಿರಸಿಯ ಮಾರಿಕಾಂಬಾ ಜಿಲ್ಲಾ ಕ್ರೀಡಾಂಗಣದಲ್ಲಿ ಆಯೋಜಿಸಲಾದ ಸಾರ್ವಜನಿಕ ಸಭೆಯಲ್ಲಿ ಭಾಷಣ ಮಾಡಲಿದ್ದಾರೆ. ಕಿತ್ತೂರು, ಖಾನಾಪುರ ಪ್ರದೇಶವನ್ನೊಳಗೊಂಡ ಉತ್ತರ ಕನ್ನಡ ಲೋಕಸಭೆ ಕ್ಷೇತ್ರದ ಸುಮಾರು 1 ಲಕ್ಷಕ್ಕೂ ಅಧಿಕ ಮಂದಿ ಪ್ರಧಾನಿ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವ ನಿರೀಕ್ಷೆಯಿದೆ.
ಉತ್ತರ ಕನ್ನಡ ಕ್ಷೇತ್ರದ ಹಾಲಿ ಸಂಸದ ಅನಂತ ಕುಮಾರ್ ಹೆಗಡೆ ಬದಲಿಗೆ ಈ ಬಾರಿ ಮಾಜಿ ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ ಅವರಿಗೆ ಬಿಜೆಪಿ ಟಿಕೆಟ್ ನೀಡಿದೆ. ಈ ಹಿನ್ನೆಲೆಯಲ್ಲಿ ಟಿಕೆಟ್ ಆಕಾಂಕ್ಷಿಯಾಗಿದ್ದ ಅನಂತ ಕುಮಾರ್ ಹೆಗಡೆ ಬಹುತೇಕ ತಟಸ್ಥರಾಗಿದ್ದಾರೆ. ಬಿಜೆಪಿಯ ಯಾವುದೇ ಚುನಾವಣಾ ಪ್ರಚಾರ ಸಭೆಯಲ್ಲಿ ಅವರು ಕಾಣಿಸುತ್ತಿಲ್ಲ. ಮಾಜಿ ಸಚಿವ, ಹಾಲಿ ಶಾಸಕ ಶಿವರಾಮ ಹೆಬ್ಬಾರ್ ಅವರು ಕೂಡ ಪಕ್ಷದಿಂದ ಹಿಂದೆ ಸರಿದಿದ್ದಾರೆ.

ಇತ್ತೀಚಿನ ಸುದ್ದಿ

ಜಾಹೀರಾತು