ಇತ್ತೀಚಿನ ಸುದ್ದಿ
ಪ್ರಧಾನಿ ಮೋದಿ ಆಸ್ಟ್ರಿಯಾ ಭೇಟಿ: ರಾಜಧಾನಿ ವಿಯೆನ್ನಾದಲ್ಲಿ ಭರ್ಜರಿ ಸ್ವಾಗತ; ಚಾನ್ಸೆಲರ್ ಕಾರ್ಲ್ ನೆಹಮ್ಮರ್ ಜತೆ ಮಾತುಕತೆ
11/07/2024, 22:20
ವಿಯೆನ್ನಾ(reporterkarnataka.com): ಪ್ರಧಾನಿ ನರೇಂದ್ರ ಮೋದಿ ಅವರು ಆಸ್ಟ್ರಿಯಾದ ರಾಜಧಾನಿ ವಿಯೆನ್ನಾಗೆ ಇಂದು ಆಗಮಿಸಿದರು.
ನಮ್ಮ ರಾಷ್ಟ್ರಗಳು ಹಂಚಿದ ಮೌಲ್ಯಗಳು ಮತ್ತು ಉತ್ತಮ ಬದ್ಧತೆಯಿಂದ ಸಂಪರ್ಕ ಹೊಂದಿವೆ ಎಂದು ಪ್ರಧಾನಿ ಮೋದಿ ನುಡಿದರು.
ಆಸ್ಟ್ರಿಯಾ ಚಾನ್ಸೆಲರ್ ಕಾರ್ಲ್ ನೆಹಮ್ಮರ್ ಅವರೊಂದಿಗಿನ ಮಾತುಕತೆಗಳು, ಭಾರತೀಯ ಸಮುದಾಯದೊಂದಿಗೆ ಸಂವಾದಗಳು ಮತ್ತು ಹೆಚ್ಚಿನವುಗಳನ್ನು ಒಳಗೊಂಡಂತೆ ಆಸ್ಟ್ರಿಯಾದಲ್ಲಿ ವಿವಿಧ ಕಾರ್ಯಕ್ರಮಗಳನ್ನು ಎದುರು ನೋಡುತ್ತಿದ್ದೇನೆ ಎಂದು ಮೋದಿ ಹೇಳಿದರು.