7:35 AM Friday18 - July 2025
ಬ್ರೇಕಿಂಗ್ ನ್ಯೂಸ್
ಬಿರುಸುಗೊಂಡ ಕಾಡಾನೆಗಳ ಅರಣ್ಯಕ್ಕೆ ಅಟ್ಟುವ ಕಾರ್ಯ: ನಾಡಿನಿಂದ ಕಾಡಿನತ್ತ ಆನೆಗಳ ಮತ್ತೊಂದು ಹಿಂಡು ಭಾರೀ ಮಳೆ: ಕೊಡಗು ಜಿಲ್ಲೆಯಾದ್ಯಂತ ರೆಡ್ ಅಲರ್ಟ್ ಘೋಷಣೆ: ಶಾಲೆ- ಕಾಲೇಜುಗಳಿಗೆ ನಾಳೆಯೂ… ಎಐಸಿಸಿ ಅಖಿಲ ಭಾರತ ಹಿಂದುಳಿದ ವರ್ಗಗಳ ಸಲಹಾ ಸಮಿತಿಯ ಮೊದಲ ಸಭೆ ಅತ್ಯಂತ… ಭಾರೀ ಮಳೆ: ಕೊಡಗು ಜಿಲ್ಲೆಯ ಎಲ್ಲ ಅಂಗನವಾಡಿ, ಶಾಲೆ ಹಾಗೂ ಪಿಯು ಕಾಲೇಜಿಗೆ… ಕರ್ಣಾಟಕ ಬ್ಯಾಂಕ್ ವಿಲೀನಗೊಳಿಸುವ ಯಾವುದೇ ಪ್ರಸ್ತಾಪ ಇಲ್ಲ: ಬ್ಯಾಂಕಿನ ನೂತನ ವ್ಯವಸ್ಥಾಪಕ ನಿರ್ದೇಶಕ,… ಕರ್ನಾಟಕ ರಾಜ್ಯ ನರ್ಸಿಂಗ್ ಕೌನ್ಸಿಲ್ ಅಭಿವೃದ್ಧಿಪಡಿಸಿದ ವಿಶೇಷ ಡಿಜಿಲಾಕರ್ ಲೋಕಾರ್ಪಣೆ: ಮುಖ್ಯಮಂತ್ರಿ ಸಿದ್ದರಾಮಯ್ಯ… Kodagu | ಬೇಲೂರಿನಲ್ಲಿ ಉಪಟಳ ನೀಡುತ್ತಿದ್ದ ‘ಕರಡಿ’ ಆನೆಗೆ ದುಬಾರೆಯಲ್ಲಿ ‘ಬಬ್ರುವಾಹನ’ ಎಂದು… ಸಿಗಂಧೂರು ಸೇತುವೆ ಉದ್ಘಾಟನೆ ಕಾರ್ಯಕ್ರಮದಲ್ಲಿ ಶಿಷ್ಟಾಚಾರ ಉಲ್ಲಂಘನೆ ಆಗಿಲ್ಲ: ಪ್ರತಿಪಕ್ಷ ನಾಯಕ ಆರ್.ಅಶೋಕ್ Chikkamagaluru | ಮೂಡಿಗೆರೆ: ವಿದ್ಯುತ್ ತಂತಿ ಸ್ವರ್ಶಿಸಿ ಅನ್ನದಾತ ದಾರುಣ ಸಾವು ಕಾರ್ಕಳ ಥೀಮ್ ಪಾರ್ಕ್‌ ಪರಶುರಾಮ ಮೂರ್ತಿ ಹಿತ್ತಾಳೆಯದ್ದೇ ಹೊರತು ಕಂಚಿನಿಂದ ಮಾಡಿದ್ದು ಅಲ್ಲ:…

ಇತ್ತೀಚಿನ ಸುದ್ದಿ

ಪ್ರಾಣಿ ಹಿಂಸಕರೇ ಜೋಕೆ!: ಮುಂದೆ ಕಾದಿದೆ ಗ್ರಹಚಾರ; ನಿಮ್ಮ ಹಿಂಸಾ ಪ್ರವೃತ್ತಿಗೆ ಬೀಳಲಿದೆ ದೊಡ್ಡ ಪ್ರಮಾಣದ ದಂಡ

31/03/2022, 21:29

ಬೆಂಗಳೂರು(reporterkarnataka.com) : ದಂಡದ ಪ್ರಮಾಣ 5 ಸಾವಿರದಿಂದ 50 ಸಾವಿರ ವಿಧಿಸಲು ಕೋರಿ ಪ್ರಸ್ತಾವನೆ ಕೋರಿದೆ. ಈ ಕುರಿತು ಅನಿಮಲ್ ವೆಲ್‌ಫೇರ್‌ನಿಂದ ಸಭೆ ನಡೆಸಿ ಅಂತಿಮ ನಿರ್ಣಯ ತೆಗೆದುಕೊಳ್ಳಲಿದ್ದು, ಆದೇಶಕ್ಕಾಗಿ ಪಶುಸಂಗೋಪನಾ ಇಲಾಖೆ ಕಾಯ್ತಿದೆ.

ಕೆಲವರಿಗೆ ಪ್ರಾಣಿಗಳಿಗೂ ನಮ್ಮಂತೆ ಜೀವ ಇರುತ್ತೆ.‌ಅದಕ್ಕೂ ನೋವಾಗುತ್ತದೆ ಅನ್ನೋದು ಅರ್ಥವೇ ಆಗೋದಿಲ್ಲ. ಹೀಗಾಗಿ ವಿನಾಕಾರಣ ರಸ್ತೆಯಲ್ಲಿ ಹೋಗೋ ನಾಯಿಗೆ ಕಲ್ಲು ಹೊಡೆಯೋದು, ಮಲಗಿದ ನಾಯಿ‌ಮೇಲೆ ಕಾರು ಹತ್ತಿಸೋದು, ಕರೆಂಟ್ ಶಾಕ್ ಕೊಡಿಸೋದು ಇಂಥ ವಿಕೃತಿಗಳನ್ನೆಲ್ಲ ಮೆರೆಯುತ್ತಾರೆ. ಆದರೆ ಈಗ ಇಂಥ ವಿಕೃತರಿಗೆ (Animals Cruelty Case ) ಸರಿಯಾದ ಶಿಕ್ಷೆ ಕೊಡಿಸೋಕೆ ಪಶು ಸಂಗೋಪನಾ ಇಲಾಖೆ ತಯಾರಿ ಮಾಡಿದೆ.

ಕಳೆದ ಕೆಲ ತಿಂಗಳ ಹಿಂದೆ ಲಾರಾ ಎಂಬ ಬೀದಿನಾಯಿ‌ ಮೇಲೆ ಆದಿಕೇಶವಲು ಮೊಮ್ಮಗ ಆದಿ ನಾಯಿ ಹತ್ತಿಸಿದ್ದು, ಬೀದಿ ನಾಯಿ ಗಾಯಗೊಂಡಿದ್ದು, ಬಳಿಕ ಆತ ಏನು ಗೊತ್ತಿಲ್ಲದಂತೆ ಪರಾರಿಯಾಗಿದ್ದ. ಆದರೆ ಸೂಕ್ತ ಕಾನೂನುಗಳಿಲ್ಲದ ಕಾರಣ ಈ ಪ್ರಕರಣದಲ್ಲಿ ಆದಿಕೇಶವಲು ಮೊಮ್ಮಗ ಕೇವಲ 50 ರೂಪಾಯಿ ದಂಡ ಕಟ್ಟಿ ಬಿಡಿಸಿಕೊಂಡಿದ್ದ. ಈ ಪ್ರಕರಣಕ್ಕೆ ತೀವ್ರ ಆಕ್ರೋಶ ವ್ಯಕ್ತ ವಾಗಿತ್ತು. ಈ ಹಿನ್ನೆಲೆಯಲ್ಲಿ ಪ್ರಾಣಿ ದೌರ್ಜನ್ಯ ಪ್ರಕರಣಕ್ಕೆ ಕಠಿಣ ಕ್ರಮ ಕೈಗೊಳ್ಳಲು ಪಶು ಸಂಗೋಪನಾ ಇಲಾಖೆ ತಯಾರಿ ಮಾಡಿದ್ದು, ದಂಡದ ಪ್ರಮಾಣ ಹೆಚ್ಚಳ ಮಾಡಲು ಅನಿಮಲ್ ವೆಲ್‌ಫೇರ್ ಬೋರ್ಡ್ ಆಫ್ ಇಂಡಿಯಾಗೆ ಪಶುಸಂಗೋಪನೆ ಇಲಾಖೆ ಮನವಿ ಮಾಡಿದೆ.

ದಂಡದ ಪ್ರಮಾಣ 5 ಸಾವಿರದಿಂದ 50 ಸಾವಿರ ವಿಧಿಸಲು ಕೋರಿ ಪ್ರಸ್ತಾವನೆ ಕೋರಿದೆ. ಈ ಕುರಿತು ಅನಿಮಲ್ ವೆಲ್‌ಫೇರ್‌ನಿಂದ ಸಭೆ ನಡೆಸಿ ಅಂತಿಮ ನಿರ್ಣಯ ತೆಗೆದುಕೊಳ್ಳಲಿದ್ದು, ಆದೇಶಕ್ಕಾಗಿ ಪಶುಸಂಗೋಪನಾ ಇಲಾಖೆ ಕಾಯ್ತಿದೆ. ಈ ಹಿಂದೆ ಪ್ರಾಣಿಗಳ ಮೇಲೆ ದೌರ್ಜನ್ಯ ಮಾಡೋರಿಗೆ ಕೇವಲ 50 ರೂ ದಂಡ ಇತ್ತು. ಇದರಿಂದ ಹಲ್ಲೆ ಮಾಡಿ  50 ರೂ ದಂಡ ಕಟ್ಟಿ ಬರುತ್ತಿತ್ತು. ಹೀಗಾಗಿ ಹೆಚ್ಚು ದಂಡ ವಿಧಿಸಿದ್ರೆ ಇಂತಹ ಪ್ರಕರಣಗಳ ಸಂಖ್ಯೆ ಕಡಿಮೆಯಾಗಲಿದೆ. 1960ರ ಸೆಕ್ಷನ್ 11 ಪ್ರಕಾರ ದಂಡ 10-50 ರೂ.ದಂಡ ಮಾತ್ರ ಹಾಕಬೇಕು ಸೂಚಿಸಲಾಗಿದೆ. ಎರಡನೆ ಬಾರಿಗೆ 25-100 ದಂಡ ಇದೆ. ಹೀಗಾಗಿ ಹೆಚ್ಚು ದೌರ್ಜನ್ಯ ಪ್ರಕರಣಗಳು ದಾಖಲಾಗುತ್ತಿದೆ. ಹೀಗಾಗಿ ದಂಡ ಹೆಚ್ಚಳ ಮಾಡಲು ಇಲಾಖೆ ಮುಂದಾಗಿದ್ದೇವೆ ಎಂದು ಇಲಾಖೆಯ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.


ಸದ್ಯ ಲಾರಾ ಪ್ರಕರಣದಲ್ಲಿ ಪ್ರಾಣಿ ಪ್ರಿಯರು ಪ್ರಾಣಿ ಹಿಂಸೆಯ ವಿರುದ್ಧ ಹೋರಾಟಕ್ಕೆ ನಿಂತಿದ್ದರಿಂದ ಇಂತಹದೊಂದು ಪ್ರಸ್ತಾಪ ಜೀವಪಡೆದುಕೊಳ್ಳಲು ನೆರವಾಗಿದೆ. ಲಾರಾ ಪ್ರಕರಣ ಕೂಡ ವಿಚಾರಣೆ ಹಂತದಲ್ಲಿದ್ದು, ಇನ್ಮುಂದೇ ಮೂಕಪ್ರಾಣಿಗಳ ವಿರುದ್ಧ ದೌರ್ಜನ್ಯ ಎಸಗುವ ಮುನ್ನ ವಿಕೃತರು 10 ಭಾರಿ ಯೋಚಿಸುವ ಸ್ಥಿತಿ ನಿರ್ಮಾಣವಾಗಲಿದೆ.

ಇತ್ತೀಚಿನ ಸುದ್ದಿ

ಜಾಹೀರಾತು