9:16 PM Monday21 - April 2025
ಬ್ರೇಕಿಂಗ್ ನ್ಯೂಸ್
DCM In Dharmastala | ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಧರ್ಮಸ್ಥಳಕ್ಕೆ ಭೇಟಿ:… Chikkamagaluru | ಜನಿವಾರ ತೆಗೆಸಿದ ಪ್ರಕರಣ: ಶೃಂಗೇರಿಯಲ್ಲಿ ಪೇಜಾವರ ಸ್ವಾಮೀಜಿ ಅಸಮಾಧಾನ Gokarna | ಜನಿವಾರ ಪ್ರಕರಣ: ಸಂಘಟಿತ ಪ್ರತಿಭಟನೆಗೆ ಹೊಸನಗರ ಮಠದ ರಾಘವೇಶ್ವರ ಶ್ರೀ… ಮುಳಿಯ ಗೋಲ್ಡ್ ಆ್ಯಂಡ್ ಡೈಮಂಡ್ ಶೋರೂಮ್ ಗೆ ನಾಳೆ ಪ್ರಸಿದ್ದ ಚಲನಚಿತ್ರ ನಟ… Mangaluru | ವಕ್ಫ್ ತಿದ್ದುಪಡಿ ಕಾಯ್ದೆ ವಿರುದ್ಧ ಬೃಹತ್ ಪ್ರತಿಭಟನೆ; ಅಡ್ಯಾರ್ ಮೈದಾನದಲ್ಲಿ… Karnataka BJP | ಕಲಬುರ್ಗಿಯಲ್ಲಿ ಬಿಜೆಪಿ ಜನಾಕ್ರೋಶ ಯಾತ್ರೆ: ಕಾಂಗ್ರೆಸ್ ತುಘಲಕ್ ದರ್ಬಾರ್… Bagalkote | ಅನುಭವ ಮಂಟಪ-ಬಸವಾದಿ ಶರಣರ ವೈಭವದ ರಥಯಾತ್ರೆ: ಸಿಎಂ ಸಿದ್ದರಾಮಯ್ಯ ಚಾಲನೆ Kolara | ಮಾವು ಸುಗ್ಗಿ ಅಂತ್ಯಕ್ಕೆ ದಿನಗಣನೆ ಆರಂಭ: ಈ ವರ್ಷ ಇಳುವರಿಯೂ… Mangaluru | ಸರಕಾರದ ಆಶಯ ಅರಿತು ಕೆಲಸ ಮಾಡಿ: ಮುಂಗಾರು ಹಂಗಾಮು ಉದ್ಘಾಟಿಸಿ… ಮಹಿಳೆ ಮೇಲೆ ಲೈಂಗಿಕ ಕಿರುಕುಳ ಹಾಗೂ ಹಲ್ಲೆ: ಬಣಕಲ್ ಪೊಲೀಸ್ ಠಾಣೆಯಲ್ಲಿ ಪ್ರಕರಣ…

ಇತ್ತೀಚಿನ ಸುದ್ದಿ

ಕ್ರೈಸ್ತ ಸಮುದಾಯದ ಪರಮೋಚ್ಛ ಧಾರ್ಮಿಕ ನಾಯಕ ಪೋಪ್ ಫ್ರಾನ್ಸಿಸ್ ಇನ್ನಿಲ್ಲ: ಪ್ರಧಾನಿ ಮೋದಿ ಸಹಿತ ವಿಶ್ವದ ಹಲವು ಗಣ್ಯರ ಸಂತಾಪ

21/04/2025, 16:59

ವ್ಯಾಟಿಕನ್ ಸಿಟಿ (reporterkarnataka.com): ವಿನಮ್ರತೆ ಮತ್ತು ಬಡವರ ಬಗ್ಗೆ ಕಾಳಜಿಯಿಂದ ಜಗತ್ತನ್ನು ಮೋಡಿ ಮಾಡಿದ ಪೋಪ್ ಫ್ರಾನ್ಸಿಸ್ ಸೋಮವಾರ ನಿಧನರಾದರು ಎಂದು ವ್ಯಾಟಿಕನ್ ಘೋಷಿಸಿದೆ. ಪ್ರಧಾನಿ ನರೇಂದ್ರ ಮೋದಿ ಸಹಿತ ವಿಶ್ವದ ಹಲವು ಗಣ್ಯರು ಪೋಪ್ ಫ್ರಾನ್ಸಿಸ್ ಅವರ ನಿಧನಕ್ಕೆ ಸಂತಾಪ ವ್ಯಕ್ತಪಡಿಸಿದ್ದಾರೆ.


88ರ ಹರೆಯದ ಪೋಪ್ ಅವರು 12 ವರ್ಷಗಳ ಕಾಲ ಪೋಪ್ ಪಟ್ಟವನ್ನು ಅಲಂಕರಿಸಿದ್ದಾರೆ. ವಯೋಸಹಜ ಕಾಯಿಲೆಗಳಿಂದ ಅವರು ಬಳಲುತ್ತಿದ್ದರು. ಇತ್ತೀಚೆಗೆ ನ್ಯುಮೋನಿಯಾ ಪೀಡಿತರಾಗಿ ಗುಣಮುಖ ಹೊಂದಿದ್ದರು.
ಲ್ಯಾಟಿನ್ ಅಮೆರಿಕದಿಂದ ಪೋಪ್ ಪಟ್ಟವೇರಿದ ಮೊದಲಿಗರು ಅವರಾಗಿದ್ದಾರೆ.
ಅವರ ತಮ್ಮ ಸಂಪೂರ್ಣ ಜೀವನವನ್ನು ಭಗವಂತ ಮತ್ತು ಚರ್ಚ್‌ನ ಸೇವೆಗೆ ಸಮರ್ಪಿಸಿದ್ದರು.
“ಆತ್ಮೀಯ ಸಹೋದರ ಸಹೋದರಿಯರೇ, ನಮ್ಮ ಪವಿತ್ರ ಫಾದರ್ ಫ್ರಾನ್ಸಿಸ್ ಅವರ ಮರಣವನ್ನು ನಾನು ತೀವ್ರ ದುಃಖದಿಂದ ಘೋಷಿಸಬೇಕಾಗಿದೆ” ಎಂದು ಕಾರ್ಡಿನಲ್ ಕೆವಿನ್ ಫಾರೆಲ್ ವ್ಯಾಟಿಕನ್‌ನ ಟಿವಿ ಚಾನೆಲ್‌ನಲ್ಲಿ ಘೋಷಿಸಿದ್ದಾರೆ.
ಅವರು ಈಸ್ಟರ್ ಸೋಮವಾರದಂದು ನಿಧನರಾದರು, ಈಸ್ಟರ್ ಭಾನುವಾರದಂದು ವ್ಯಾಟಿಕನ್‌ನಲ್ಲಿ ಭಕ್ತರ ಗುಂಪನ್ನು ಸಂತ ಪೀಟರ್ಸ್ ಬೆಸಿಲಿಕಾದಲ್ಲಿ ಬಾಲ್ಕನಿಯಲ್ಲಿ ಕಾಣಿಸಿಕೊಂಡು ಸಂತೋಷಪಡಿಸಿದ ಒಂದು ದಿನದ ನಂತರ ಮರಣ ಹೊಂದಿದರು.
ಇತ್ತೀಚಿಗೆ ಅಸ್ವಸ್ಥರಾದ ಪೋಪ್ ಫ್ರಾನ್ಸಿಸ್ ಅವರನ್ನು
ಫೆಬ್ರವರಿ 14ರಂದು ಬ್ರಾಂಕೈಟಿಸ್ ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ನಂತರದ ದಿನಗಳಲ್ಲಿ, ಪೋಪ್ ಅವರಿಗೆ ಡಬ್ಬಲ್ ನ್ಯುಮೋನಿಯಾ ಇರುವುದು ಪತ್ತೆಯಾಯಿತು. ನಂತರ ಗುಣಮುಖರಾಗಿದ್ದರು.

ಇತ್ತೀಚಿನ ಸುದ್ದಿ

ಜಾಹೀರಾತು