2:40 AM Sunday20 - April 2025
ಬ್ರೇಕಿಂಗ್ ನ್ಯೂಸ್
DCM In Dharmastala | ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಧರ್ಮಸ್ಥಳಕ್ಕೆ ಭೇಟಿ:… Chikkamagaluru | ಜನಿವಾರ ತೆಗೆಸಿದ ಪ್ರಕರಣ: ಶೃಂಗೇರಿಯಲ್ಲಿ ಪೇಜಾವರ ಸ್ವಾಮೀಜಿ ಅಸಮಾಧಾನ Gokarna | ಜನಿವಾರ ಪ್ರಕರಣ: ಸಂಘಟಿತ ಪ್ರತಿಭಟನೆಗೆ ಹೊಸನಗರ ಮಠದ ರಾಘವೇಶ್ವರ ಶ್ರೀ… ಮುಳಿಯ ಗೋಲ್ಡ್ ಆ್ಯಂಡ್ ಡೈಮಂಡ್ ಶೋರೂಮ್ ಗೆ ನಾಳೆ ಪ್ರಸಿದ್ದ ಚಲನಚಿತ್ರ ನಟ… Mangaluru | ವಕ್ಫ್ ತಿದ್ದುಪಡಿ ಕಾಯ್ದೆ ವಿರುದ್ಧ ಬೃಹತ್ ಪ್ರತಿಭಟನೆ; ಅಡ್ಯಾರ್ ಮೈದಾನದಲ್ಲಿ… Karnataka BJP | ಕಲಬುರ್ಗಿಯಲ್ಲಿ ಬಿಜೆಪಿ ಜನಾಕ್ರೋಶ ಯಾತ್ರೆ: ಕಾಂಗ್ರೆಸ್ ತುಘಲಕ್ ದರ್ಬಾರ್… Bagalkote | ಅನುಭವ ಮಂಟಪ-ಬಸವಾದಿ ಶರಣರ ವೈಭವದ ರಥಯಾತ್ರೆ: ಸಿಎಂ ಸಿದ್ದರಾಮಯ್ಯ ಚಾಲನೆ Kolara | ಮಾವು ಸುಗ್ಗಿ ಅಂತ್ಯಕ್ಕೆ ದಿನಗಣನೆ ಆರಂಭ: ಈ ವರ್ಷ ಇಳುವರಿಯೂ… Mangaluru | ಸರಕಾರದ ಆಶಯ ಅರಿತು ಕೆಲಸ ಮಾಡಿ: ಮುಂಗಾರು ಹಂಗಾಮು ಉದ್ಘಾಟಿಸಿ… ಮಹಿಳೆ ಮೇಲೆ ಲೈಂಗಿಕ ಕಿರುಕುಳ ಹಾಗೂ ಹಲ್ಲೆ: ಬಣಕಲ್ ಪೊಲೀಸ್ ಠಾಣೆಯಲ್ಲಿ ಪ್ರಕರಣ…

ಇತ್ತೀಚಿನ ಸುದ್ದಿ

ಪೂರ್ವಜರ ಕಾಲದಿಂದಲೂ ಹರಕು ಬಟ್ಟೆ.. ಮುರುಕು ರೊಟ್ಟಿ..!: ಶತಮಾನ ಕಳೆದರೂ ಬದಲಾಗದ ನಿರ್ಗತಿಕರ ಬದುಕು!

04/12/2024, 14:59

*ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ 5 ಗ್ಯಾರಂಟಿ ಯೋಜನೆಗಳಿಂದಲೂ ವಂಚಿತರಾಗಿರುವ ನಿರ್ಗತಿಕರು*

*ಸಿಎಂ ಸಿದ್ದರಾಮಯ್ಯನವರ ತವರು ನಂಜನಗೂಡು ನಗರಸಭೆ ಅಧಿಕಾರಿಗಳ ನಿರ್ಲಕ್ಷತನಕ್ಕೆ ದಿನ ಬೆಳಗಾದರೆ ನಂಜುಂಡನ ಮುಡಿಗೆ ತುಳಸಿ ಹಾರ ನೀಡುವವರ ಬದುಕು ಮೂರಾಬಟ್ಟೆ..!*

ಮೋಹನ್ ನಂಜನಗೂಡು ಮೈಸೂರು

info.reporterkarnataka@gmail.com
ನಂಜನಗೂಡು ನಗರಸಭಾ ಅಧಿಕಾರಿಗಳ ಹಾಗೂ ಸ್ಥಳೀಯ ಜನಪ್ರತಿನಿಧಿಗಳ ನಿರ್ಲಕ್ಷತನದಿಂದಾಗಿ ಗ್ಯಾರಂಟಿ ಯೋಜನೆಗಳಿಂದ ವಂಚಿತರಾದ ನಿರ್ಗತಿಕರರಾಗಿ ಜೀವನ ಸಾಗಿಸುತ್ತಿದ್ದಾರೆ.
ಧಾರ್ಮಿಕ ಪುಣ್ಯಕ್ಷೇತ್ರ ನಂಜುಂಡೇಶ್ವರನ ಸನಿಹದಲ್ಲಿಯೇ ತಲೆಮಾರುಗಳಿಂದ ನಿರ್ಗತಿಕ ಕುಟುಂಬಗಳು ವಾಸುತ್ತಿವೆ.
ಪೂರ್ವಜರ ಕಾಲದಿಂದಲೂ ನಂಜುಂಡೇಶ್ವರನಿಗೆ ಪ್ರಿಯವಾದ ತುಳಸಿಹಾರ ತಯಾರಿಕೆಯೇ ಇವರ ಕಾಯಕ.
ಸ್ವಂತ ಸೂರಿಲ್ಲ. ದಾಖಲಾತಿ ಇದ್ದರೂ ಸರ್ಕಾರದ ಗ್ಯಾರಂಟಿ ಯೋಜನೆ ದೊರೆಯುತ್ತಿಲ್ಲ.


ನಾಗರೀಕ ಸಮಾಜ ತಲೆ ತಗ್ಗಿಸುವಂತಹ ಹೀನಾಯ ಪರಿಸ್ಥಿತಿಯಲ್ಲಿ ಜೀವನ ದೂಡುತ್ತಿರುವ ಸುಮಾರು 6 ಕುಟುಂಬದ 30ಕ್ಕೂ ಹೆಚ್ಚು ಮಂದಿ ಇದ್ದಾರೆ.
ನಂಜನಗೂಡು ಪಟ್ಟಣದ ಹಳ್ಳದ ಕೇರಿಯ ಮುಖ್ಯರಸ್ತೆ ಬದಿಯಲ್ಲಿ ಈ ಕುಟುಂಬಗಳು ವಾಸಿಸುತ್ತಿವೆ. ವಾಸವಿರುವ ನಿವೇಶನವು ಇವರದಲ್ಲ. ಪುಟ್ಟ ಶೌಚಾಲಯವೂ ಇವರಿಗಿಲ್ಲ.
ಪ್ರತಿ ಚುನಾವಣೆಗಳ ಸಂದರ್ಭದಲ್ಲಿ ಮತ ಕೇಳಲು ಬಂದು ಬೆಟ್ಟದಷ್ಟು ಭರವಸೆಗಳನ್ನು ತುಂಬುತ್ತಾರೆ ರಾಜಕಾರಣಿಗಳು .
ಇದುವರೆಗೂ ನಮಗೆ ಸೌಲಭ್ಯಗಳು ದೊರೆತಿಲ್ಲ. ನಮಗೂ ಕೇಳಿ ಕೇಳಿ ಸಾಕಾಗಿದೆ. ಯಾರೊಬ್ಬರೂ ನಮಗೆ ಸಹಾಯ ಮಾಡಿಲ್ಲ ಅಂತ ನೊಂದು ಆಕ್ರೋಶ ವ್ಯಕ್ತಪಡಿಸಿದ ನಿರ್ಗತಿಕರು.
ಇನ್ನಾದರೂ ಎಚ್ಚೆತ್ತು ಇವರ ಸಮಸ್ಯೆಗೆ ಅಧಿಕಾರಿಗಳು ಸ್ಪಂದಿಸುವರೆ ಕಾದು ನೋಡಬೇಕಿದೆ.

ಇತ್ತೀಚಿನ ಸುದ್ದಿ

ಜಾಹೀರಾತು