3:22 PM Monday21 - April 2025
ಬ್ರೇಕಿಂಗ್ ನ್ಯೂಸ್
DCM In Dharmastala | ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಧರ್ಮಸ್ಥಳಕ್ಕೆ ಭೇಟಿ:… Chikkamagaluru | ಜನಿವಾರ ತೆಗೆಸಿದ ಪ್ರಕರಣ: ಶೃಂಗೇರಿಯಲ್ಲಿ ಪೇಜಾವರ ಸ್ವಾಮೀಜಿ ಅಸಮಾಧಾನ Gokarna | ಜನಿವಾರ ಪ್ರಕರಣ: ಸಂಘಟಿತ ಪ್ರತಿಭಟನೆಗೆ ಹೊಸನಗರ ಮಠದ ರಾಘವೇಶ್ವರ ಶ್ರೀ… ಮುಳಿಯ ಗೋಲ್ಡ್ ಆ್ಯಂಡ್ ಡೈಮಂಡ್ ಶೋರೂಮ್ ಗೆ ನಾಳೆ ಪ್ರಸಿದ್ದ ಚಲನಚಿತ್ರ ನಟ… Mangaluru | ವಕ್ಫ್ ತಿದ್ದುಪಡಿ ಕಾಯ್ದೆ ವಿರುದ್ಧ ಬೃಹತ್ ಪ್ರತಿಭಟನೆ; ಅಡ್ಯಾರ್ ಮೈದಾನದಲ್ಲಿ… Karnataka BJP | ಕಲಬುರ್ಗಿಯಲ್ಲಿ ಬಿಜೆಪಿ ಜನಾಕ್ರೋಶ ಯಾತ್ರೆ: ಕಾಂಗ್ರೆಸ್ ತುಘಲಕ್ ದರ್ಬಾರ್… Bagalkote | ಅನುಭವ ಮಂಟಪ-ಬಸವಾದಿ ಶರಣರ ವೈಭವದ ರಥಯಾತ್ರೆ: ಸಿಎಂ ಸಿದ್ದರಾಮಯ್ಯ ಚಾಲನೆ Kolara | ಮಾವು ಸುಗ್ಗಿ ಅಂತ್ಯಕ್ಕೆ ದಿನಗಣನೆ ಆರಂಭ: ಈ ವರ್ಷ ಇಳುವರಿಯೂ… Mangaluru | ಸರಕಾರದ ಆಶಯ ಅರಿತು ಕೆಲಸ ಮಾಡಿ: ಮುಂಗಾರು ಹಂಗಾಮು ಉದ್ಘಾಟಿಸಿ… ಮಹಿಳೆ ಮೇಲೆ ಲೈಂಗಿಕ ಕಿರುಕುಳ ಹಾಗೂ ಹಲ್ಲೆ: ಬಣಕಲ್ ಪೊಲೀಸ್ ಠಾಣೆಯಲ್ಲಿ ಪ್ರಕರಣ…

ಇತ್ತೀಚಿನ ಸುದ್ದಿ

ಪೂಜಾರಹಳ್ಳಿ ಕೆರೆ ಒತ್ತುವರಿ ತೆರವುಗೊಳಿಸಲು ಒತ್ತಾಯಿಸಿ ಪಾದಯಾತ್ರೆ: ಗ್ರಾಮ ಪಂಚಾಯಿತಿಗೆ ಮನವಿ

04/07/2022, 16:57

ವಿ.ಜಿ.ವೃಷಭೇಂದ್ರ ಕೂಡ್ಲಿಗಿ ವಿಜಯನಗರ

info.reporterkarnataka@gmail.com

ಕೂಡ್ಲಿಗಿ ತಾಲೂಕು ಹೊಸಹಳ್ಳಿ ಹೋಬಳಿ ವ್ಯಾಪ್ತಿಯ ಪೂಜಾರಹಳ್ಳಿ ಕೆರೆ ಒತ್ತುವರಿ ನಿವೇಶನಗಳನ್ನು ತೆರವುಗೊಳಿಸಿ ಒತ್ತಾಯಿಸಿ ಗ್ರಾಪಂಗೆ ಮನವಿ ಸಲ್ಲಿಸಲಾಯಿತು.

ಪೂಜಾರಹಳ್ಳಿ ಕೆರೆಯಿಂದ ಅಖಿಲ ಭಾರತ ಕಿಸಾನ್ ಸಭಾ ನೇತೃತ್ವದಲ್ಲಿ ಕನ್ನಬೋರೆಯನ ಹಟ್ಟಿಗ್ರಾಮಸ್ಥರು ನೂರಾರು ಜನ ರೈತರು, ಮಹಿಳೆಯರು ಪಾದಯಾತ್ರೆ ನಡೆಸಿದರು.

ಕೆರೆ ಒತ್ತುವರಿ ಮಾಡಿ ಕೆರೆ ಅಂಗಳದಲ್ಲಿ ನಿವೇಶನಗಳನ್ನು ನಿರ್ಮಿಸಿಕೊಂಡಿದ್ದು ಗ್ರಾಮ ಪಂಚಾಯತಿ ಈಗಾಗಲೇ ನೀಡಿರುವ
ಡೋರ್ ನಂಬರ್  ಕೂಡಲೇ ರದ್ದುಗೊಳಿಸಬೇಕು.

ಇತಿಹಾಸ ಉಳ್ಳ ಕೆರೆಯನ್ನು ಸರ್ಕಾರಿ ದಾಖಲಾತಿಗಳಲ್ಲಿ ಹಾಗೂ ಗ್ರಾಮ ಪಂಚಾಯತಿ ವ್ಯಾಪ್ತಿಯ ಒಳಗೆ ಪಹಣಿಯಲ್ಲಿ ನಮೂದಿಸಬೇಕೆಂದು ಒತ್ತಾಯಿಸಿದರು.

ಪೂಜಾರಹಳ್ಳಿ ಕೆರೆಯಿಂದ ಪಾದಯಾತ್ರೆ ಮೂಲಕ ಪೂಜಾರಹಳ್ಳಿ ಗ್ರಾಮ ಪಂಚಾಯತಿಗೆ ನಡೆದು ಬಂದು ಮನವಿ ನೀಡಿದರು.

ಹೋರಾಟದಲ್ಲಿ ಭಾಗವಹಿಸಿದ ಅಖಿಲ ಭಾರತ ಕಿಸಾನ್ ಸಭಾ ರಾಜ ಉಪಾಧ್ಯಕ್ಷ ಹೆಚ್ಚು ವೀರಣ್ಣ ಮಾತನಾಡಿ, ಒಂದು ಕಡೆ ಕೆರೆ ನಮ್ಮದು ಎಂದು ಕೆಲವರು ಖಾತೆ ತಮ್ಮ ಹೆಸರಿಗೆ ಬದಲಾವಣೆ ಮಾಡಿಸಲು ಪ್ರಯತ್ನಿಸುತ್ತಿದ್ದು ಇನ್ನೊಂದು ಕಡೆ ಕೆರೆ ಅಂಗಳದಲ್ಲಿಯೇ 35ಕ್ಕೂ ಹೆಚ್ಚು ನಿವೇಶನಗಳನ್ನ ನಿರ್ಮಾಣ ಮಾಡಿಕೊಂಡು ಕೆರೆ ಅಂಗಳದಲ್ಲಿ 70 ಎಕರೆಗೂ ಹೆಚ್ಚು ಜಮೀನು ಉಳುಮೆ ಮಾಡಿ ಕೊಳವೆ ಬಾವಿಗಳನ್ನು ನಿರ್ಮಿಸಿ ತೋಟಗಳನ್ನ ಬೆಳೆಸಿ ತಮ್ಮ ತಾತ ಮುತಾತರ ಕಾಲದಿಂದ ಬಂದಂತ ಪಿತ್ರಾರ್ಜಿತ ಆಸ್ತಿಯ ರೀತಿಯಲ್ಲಿ ಸಾಗುವಳಿ ಮಾಡಿ ಕೆರೆ ಒತ್ತುವರಿ ಮಾಡಿದ್ದಾರೆ. ಇಂಥ ಸಂದರ್ಭದಲ್ಲಿ ಪೂಜಾರಹಳ್ಳಿ ಕೆರೆ ಉಳಿವಿಗಾಗಿ ಕೆರೆಯ ರಕ್ಷಣೆಗಾಗಿ ಅಖಿಲ ಭಾರತ ಕಿಸಾನ್ ಸಭಾ ನೇತೃತ್ವದಲ್ಲಿ ಜನರ ಹೋರಾಟ ಅನಿವಾರ್ಯವಾಗಿದೆ ಸ್ಥಳೀಯ ಆಡಳಿತ ಕಣ್ಣು ಮುಚ್ಚಿದ್ದು ಕೆರೆ ಒತ್ತುವರಿ ಮಾಡಿರುವವರ ಮೇಲೆ ಕ್ರಮ ಕೈಗೊಳ್ಳದೆ ನಿವೇಶನಗಳನ್ನ ನಿರ್ಮಿಸಲು ಅನುಮತಿ ನೀಡಿ ಮೌನ ವಹಿಸಿದೆ ಆದ್ದರಿಂದ ಕೂಡಲೇ ಕ್ರಮ ಜರುಗಿಸಿ ಕೆರೆಯನ್ನ ರಕ್ಷಿಸಲು ಸರ್ವ ಸದಸ್ಯರ ಹಾಗೂ ಗ್ರಾಮ ಸಭೆಗಳ ಮೂಲಕ ಕೆರೆ ಉಳಿಸಿ ಸರ್ಕಾರಿ ದಾಖಲಾತಿಗಳಲ್ಲಿ ಸೇರಿಸಿ ಎಂಬ ನಿರ್ಣಯವನ್ನು ಜಾರಿಗೆ ಕಳಿಸಿ ಸರ್ಕಾರಕ್ಕೆ ಮತ್ತು ಮೇಲಧಿಕಾರಿಗಳಿಗೆ ಲಿಖಿತ ರೂಪದಲ್ಲಿ ವರದಿ ನೀಡಲು ಅಖಿಲ ಭಾರತ ಕಿಸಾನ್ ಸಭಾ ಒತ್ತಾಯಿಸುತ್ತದೆ. ನಮ್ಮ ಹೋರಾಟ ಪೂಜಾರಹಳ್ಳಿ ಕೆರೆ ಸರ್ಕಾರ ದಾಖಲಾತಿಯಲ್ಲಿ ಸೇರುವರೆಗೂ ಅಖಿಲ ಭಾರತ ಕಿಸಾನ್ ಸಭಾ ಜನರಹೋರಾಟ ನಿಲ್ಲದು. ಯಾರ ವಿರುದ್ಧವೂ ಯಾರ ಪರವಾಗಿ ನಮ್ಮ ಹೋರಾಟವಲ್ಲ. ಕೆರೆ ರಕ್ಷಣೆಗಾಗಿ ನಡಿಯುವ ಹೋರಾಟ ಈಗಾಗಲೇ ಜಿಲ್ಲಾಧಿಕಾರಿಗಳ ಮಾರ್ಗದರ್ಶನದಲ್ಲಿ ಕೆರೆಯ ಸರ್ವೆ ಪ್ರಕ್ರಿಯೆ ಮುಗಿದು ಕೆರೆ ಸ್ಥಿತಿಯನ್ನು ಉನ್ನತ ಅಧಿಕಾರಿಗಳು ಮಾಹಿತಿ ಸಂಗ್ರಹಿಸಿ ಕ್ರಮ ಕೈಗೊಳ್ಳಲು ಮುಂದಾಗಿದ್ದು ನಮ್ಮ ಹೋರಾಟಕ್ಕೆ ಸಿಕ್ಕ ಜಯವಾಗಿದೆ. ಆದರೂ ಕೂಡಲೇ ಎಲ್ಲ ದಾಖಲಾತಿಗಳಲ್ಲಿ ಸರ್ಕಾರಿ ಕೆರೆ ಎಂದು ನಮೂದಿಸಬೇಕು. ಕೆರೆ ಒತ್ತುವರಿಯನ್ನು ಕೂಡಲೇ ತೆರವುಗೊಳಿಸಿ ಕೆರೆ ರಕ್ಷಣೆ ಮಾಡಬೇಕೆಂದು ಈ ದಿನ ಮನವಿ ನೀಡಲಿದ್ದೇವೆ ಎಂದರು. 

ಇದೇ ಸಂದರ್ಭದಲ್ಲಿ ಮನವಿಯನ್ನ ಅಭಿವೃದ್ಧಿ ಅಧಿಕಾರಿಗಳಾದ ನಾರಾಯಣ್ , ಗ್ರಾಮ ಪಂಚಾಯತಿ ಅಧ್ಯಕ್ಷರಾದ ಶಿಲ್ಪ ಬಸವರಾಜ್ ಮನವಿ ಪಡೆದು ತಮ್ಮ ವ್ಯಾಪ್ತಿಯಲ್ಲಿ ಬರುವ ಕ್ರಮ ಕೈಗೊಳ್ಳಲು ಸರ್ವ ಸದಸ್ಯರ ಸಭೆ ಕರೆದು ತೀರ್ಮಾನ ಕೈಗೊಂಡು ಕ್ರಮ ಕೈಗೊಳ್ಳುತ್ತೇವೆ ಎಂದು ಅಭಿವೃದ್ಧಿ ಅಧಿಕಾರಿಗಳು ಪ್ರತಿಭಟನಾಕಾರರಿಗೆ ತಿಳಿಸಿದರು.

ಮಹೇಶ್ (ಮಾಜಿ ಅಧ್ಯಕ್ಷರು ತಾಲೂಕು ಪಂಚಾಯಿತಿ), ಯು.( ಪೆನ್ನಪ್ಪ ಖಜಾಂಚಿ ಸಿಪಿಐ ಪಕ್ಷ ಕೂಡ್ಲಿಗಿ),  ಎ.ಕೆ.ಡಿ. ಮಾರೇಶ್,ದಾಸಣ್ಣ ಟಿ., ಗೆದ್ದಯ್ಯ, ಅಂಜನಿ, ಮಂಜುನಾಥ ಓಬಳೇಶ, ಚಿತ್ತಣ್ಣ, ಹೇಮಣ್ಣ, ತಿಪ್ಪೇಸ್ವಾಮಿ ಬಾಲರಾಜ್, ಭೀಮೇಶ್, ರಮೇಶ್ ಗೌಡ, ಗೂಳಿ ಬಸವರಾಜ, ವಕೀಲ ಬೋರಯ್ಯ, ಗೋಪಿ, ತಿಪ್ಪಕ್ಕ ಗಿರಿಜಮ್ಮ, ಗಾಮಕ್ಕ, ಪ್ರೇಮ, ಓಬಮ್ಮ,ಗ್ರಾಮ ಪಂಚಾಯತಿ ಸದಸ್ಯರಾದ ವೆಂಕಟೇಶ್ ಸಿ.,  ನಾಗೇಶ್ ಗೊಂಚಿಗರ್, ನಾಗರಾಜ್, ಸಿದ್ದಣ್ಣ ಮುಂತಾದವರು ಉಪಸ್ಥಿತರಿದ್ದರು.

ನೂರಾರು ಜನ ಮಹಿಳೆಯರು ರೈತರು ಕೂಲಿಕಾರ್ಮಿಕರು ಅಖಿಲ ಭಾರತ ಕಿಸಾನ್ ಸಭಾ ಮುಖಂಡರು ಕಾರ್ಯಕರ್ತರು ಚಳುವಳಿಯಲ್ಲಿ ಭಾಗವಹಿಸಿದ್ದರು.

 

ಇತ್ತೀಚಿನ ಸುದ್ದಿ

ಜಾಹೀರಾತು