1:58 AM Tuesday26 - November 2024
ಬ್ರೇಕಿಂಗ್ ನ್ಯೂಸ್
ತೀರ್ಥಹಳ್ಳಿ ತುಂಗಾ ಕಮಾನು ಸೇತುವೆ ಕೆಳಗೆ ಅಸ್ತಿ ಪಂಜರ ಪತ್ತೆ: ತನಿಖೆ ಆರಂಭ ಕಳೆದ ಬಾರಿ ಅರ್ಧಂಬರ್ಧ ಸುಣ್ಣಬಣ್ಣ ಕಂಡ ತುಂಗಾ ಕಮಾನು ಸೇತುವೆಗೆ ಈ ಬಾರಿ… ಅಟಲ್ ಜೀ ಜನಸ್ನೇಹಿ ಕೇಂದ್ರ ಯೋಜನೆಯಲ್ಲಿ ಕೋಲಾರ ಪ್ರಥಮ: ಜಿಲ್ಲಾಧಿಕಾರಿ ಅಕ್ರಂ ಪಾಷಾಗೆ… ಚನ್ನಪಟ್ಟಣದಲ್ಲಿ ಸೋಲು: ನಿಖಿಲ್ ಕುಮಾರಸ್ವಾಮಿಗೆ ರಕ್ತದಲ್ಲಿ ಪತ್ರ ಬರೆದು ಧೈರ್ಯ ತುಂಬಿದ ಕಾರ್ಯಕರ್ತ! ಮೂಡಿಗೆರೆ: ಬೆಂಕಿ ಆಕಸ್ಮಿಕದಲ್ಲಿ ಗುಡಿಸಲು ಸಂಪೂರ್ಣ ಭಸ್ಮ; ಬೀದಿಗೆ ಬಿದ್ದ ಬಡ ಕುಟುಂಬ ರಾಜ್ಯ ವಿಧಾನಸಭೆಯ 3 ಕ್ಷೇತ್ರಗಳ ಉಪ ಚುನಾವಣೆ; ಕಾಂಗ್ರೆಸ್ ಭರ್ಜರಿ ಜಯ; ಕೇಸರಿ… ಸಂಡೂರಿನಲ್ಲಿ ಕಾಂಗ್ರೆಸ್‌ ಅಭ್ಯರ್ಥಿ ಅನ್ನಪೂರ್ಣಗೆ ಜಯ: ಬಿಜೆಪಿ ಮೈತ್ರಿಕೂಟಕ್ಕೆ ತೀವ್ರ ಮುಖಭಂಗ ​ ಮಹಾರಾಷ್ಟ್ರ: ಆಡಳಿತಾರೂಢ ಬಿಜೆಪಿ ನೇತೃತ್ವದ ಮಹಾಯುತಿ ಮೈತ್ರಿಕೂಟ ಮತ್ತೆ ಅಧಿಕಾರಕ್ಕೆ? ಆರೆಸ್ಸೆಸ್ ಮುಖ್ಯಸ್ಥ ಡಾ. ಭಾಗವತ್ ಡಿ. 7ರಂದು ಕಲ್ಲಡ್ಕಕ್ಕೆ: ಶ್ರೀರಾಮ ವಿದ್ಯಾಕೇಂದ್ರ ಕ್ರೀಡೋತ್ಸವದಲ್ಲಿ… ಬೆಂಗಳೂರು ಮತ್ತು ಚೆನ್ನೈಗೆ ಆಸ್ಟ್ರೇಲಿಯನ್ ಡಿಜಿಟೆಕ್ ಟ್ರೇಡ್ ಮಿಷನ್ ಭೇಟಿ

ಇತ್ತೀಚಿನ ಸುದ್ದಿ

ಪೂಜಾರಹಳ್ಳಿ; ಅಕ್ರಮ ಕೋರರಿಂದ ಕೆರೆ ರಕ್ಷಿಸಿ: ಜಿಲ್ಲಾಧಿಕಾರಿಗೆ ಗ್ರಾಮಸ್ಥರ ಒತ್ತಾಯ

18/05/2022, 21:22

ವೃಷಭೇಂದ್ರ ಕೂಡ್ಲಿಗಿ ವಿಜಯನಗರ

info.reporterkarnataka@gmail.com 

ಜಿಲ್ಲೆಯ ಕೂಡ್ಲಿಗಿ ತಾಲೂಕಿನ ಪೂಜಾರಹಳ್ಳಿ ಗ್ರಾ.ಪಂ ವ್ಯಾಪ್ತಿಯ ಕೆರ ಮೂರು ಹಳ್ಳಿಗಳಿಗೆ ಸೇರಿದ್ದು, ನೂರಾರು ರೈತರ ಜೀವನಾಡಿಯಾಗಿದೆ. ಕೆರೆಗೆ ನೂರಾರು ವರ್ಷಗಳ ಇತಿಹಾಸವಿದ್ದು, ನೂರಾರು ವರ್ಷಗಳಿಂದಲೂ ಪೂಜಾರ್ ಹಳ್ಳಿ ಸೇರಿದಂತೆ  ಮೂರು ಗ್ರಾಮಗಳಿಗೆ ಜೀವನಾಡಿಯಾಗಿದೆ. ಕೆರೆಗೆ ದೊಡ್ಡ ಏರಿ ಇದ್ದು, ಇತ್ತೀಚಿನ ದಿನಗಳಲ್ಲಿ 74 ಕೆರೆಗಳ ನೀರು ತುಂಬಿಸುವ ಯೋಜನೆ ಅಡಿಯಲ್ಲಿ ಈ ಕೆರೆ ನೀರು ಹೊಂದಲಿದೆ.  

ಸಣ್ಣ ನೀರಾವರಿ ಇಲಾಖೆಯಲ್ಲಿ ಪೂಜಾರಹಳ್ಳಿ ಕೆರೆಯೆಂದು ಸುಮಾರು 250 ಎಕೆರೆ ನಕಾಶೆ ಇದೆ.   ಆದರೆ ಕೆರೆಯನ್ನಯ ಇತ್ತೀಚೆಗೆ ಪಟ್ಟಭದ್ರ ಹಿತಾಸಕ್ತಿಯ ವ್ಯಕ್ತಿಗಳು, ತಮ್ಮ ಕಬಂದ ಭಾಹು ಚಾಚಿ ಕಬಳಿಸಲು ಹುನ್ನಾರವಹಾಕಿದ್ದು, ಅವರಿಂದ ಕೆರೆಯನ್ನು ಕ‍ಾಪಡಬೇಕೆಂದು ಗ್ರಾಮಸ್ಥರು ಜಿಲ್ಲಾಧಿಕಾರಿಗಳಲ್ಲಿ ಕೋರಿದ್ದಾರೆ. 

ಸಂಬಂಧಿಸಿದಂತೆ ಹೋರಾಟ ಗಾರರು ಹೇಳಿಕೆ ನೀಡಿದ್ದು, ಎರಡು ವರ್ಷಗಳಿಂದ ಕೆಬಿ ಹಟ್ಟಿ ಗ್ರಾಮದ ಪಾಪಾಯ ಎನ್ನುವ ವ್ಯಕ್ತಿ ಪೂಜಾರಹಳ್ಳಿ ಕೆರೆ ನನ್ನದು ನನಗೆ ಸೇರಿದ ಆಸ್ತಿ ಎಂದು ಪೂಜಾರಹಳ್ಳಿ ಕೆರೆ ವ್ಯಾಪ್ತಿಯ ಜನರ ಕೂಲಿಕಾರರ ರೈತರಿಗೆ ಆತಂಕ ಸೃಷ್ಟಿ ಮಾಡಿ ಕೆರೆಯಲ್ಲಿ ಉದ್ಯೋಗ ಖಾತ್ರಿ ಕೆಲಸ ಮಾಡಲು ಬಿಡದೆ ಅಡ್ಡಿಪಡಿಸಿ ಜನರ ಜೊತೆ ಸಂಘರ್ಷಕ್ಕೆ ಇಳಿದಿದ್ದು ರೈತರು ಬಡ ಕೂಲಿ ಕಾರ್ಮಿಕರು ಕೆರೆಯಲ್ಲಿ ಉದ್ಯೋಗ ಖಾತ್ರಿ ಕೆಲಸಮಾಡಲು ಮುಂದಾದಾಗ ನಾನು ಸಹಾಯಕ ಆಯುಕ್ತರ ನ್ಯಾಯಾಲಯದಲ್ಲಿ ದೂರು ದಾಖಲಿಸಿದ್ದೇನೆ ಎಂದು ದೌರ್ಜನ್ಯ ಮಾಡುತ್ತಾ ಪೋಲಿಸರ ಬೆಂಬಲದಿಂದ ಸಾವಿರಾರು ಜನ ಕೂಲಿ ಮಾಡುವ ಕೂಲಿ ಕಾರ್ಮಿಕರ ಕೆಲಸವನ್ನೇ ಕಸಿದುಕೊಂಡಿದ್ದ ಹಾಗೂ ಕೂಲಿ ಕಾರ್ಮಿಕರು ರೈತರು ಕೂಡ್ಲಿಗಿ ತಹಶೀಲ್ದಾರರಿಗೆ ನೂರಾರು ಜನ ಹೋರಾಟದ ಮೂಲಕ ಪೂಜಾರಹಳ್ಳಿ ಕೆರೆಯನ್ನು ರಕ್ಷಿಸಿ ಅಕ್ರಮ ಕೋರರನ್ನು ಹೊರಹಾಕಿ ಕೂಲಿಕಾರ್ಮಿಕರಿಗೆ ಉದ್ಯೋಗ ಖಾತ್ರಿ ಕೆಲಸ ನೀಡಿ ಎಂದು ಅಖಿಲ ಭಾರತ ಕಿಸಾನ್ ಸಭಾ ಮುಖಂಡರುಗಳ ನೇತೃತ್ವದಲ್ಲಿ  ಮನವಿ ನೀಡಿದ ಪರಿಣಾಮವಾಗಿ  ಉದ್ಯೋಗ ಖಾತ್ರಿ ಯೋಜನೆಯಲ್ಲಿ ಕೆಲಸ ಮಾಡಲು ತಾಲೂಕು ದಂಡಾಧಿಕಾರಿ ಟಿ.ಜಗದೀಶ್ ತಾಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿಗಳಾದ ರವಿಕುಮಾರ್ ರವರು ಕೂಡಲೇ ಮನವಿಗೆ ಸ್ಪಂದಿಸಿ ಕೂಲಿ ಕಾರ್ಮಿಕರಿಗೆ ಕೆಲಸ ನೀಡಿ ಕಾನೂನನ್ನ ಹೆತ್ತಿದ್ದಾರೆ ಇದೇ ಸಂದರ್ಭದಲ್ಲಿ ಸಹಾಯಕ ಆಯುಕ್ತರು ಹೊಸಪೇಟೆ ನ್ಯಾಯಾಲಯದಲ್ಲಿ,ಕೆರೆಯ ನನ್ನದು ಎಂದು ಅಡ್ಡಿಪಡಿಸುತ್ತಿರುವ ಪಾಪಯ್ಯನ ದೂರು ನ್ಯಾಯಾಲಯದಲ್ಲಿ ವಜಾಗೊಂಡಿದೆ. ಆದ್ದರಿಂದ ರೈತರ ಕೂಲಿ ಕಾರ್ಮಿಕರ ಹೋರಾಟಕ್ಕೆ ಜಯ ಸಿಕ್ಕಿದ್ದು ಈಗ ಸಾವಿರಾರು ಜನ ಕೂಲಿ ಕಾರ್ಮಿಕರು ಉದ್ಯೋಗ ಖಾತ್ರಿ ಕೆಲಸದಲ್ಲಿ ಕೆರೆಯಲ್ಲಿ ಕೆಲಸ ಮಾಡುತ್ತಿದ್ದು ಆದರೆ ಸರ್ಕಾರ ಮತ್ತು ಅಧಿಕಾರಿಗಳು ನ್ಯಾಯಸಮ್ಮತವಾಗಿ ಪರಿಶೀಲಿಸಿ ಪೂಜಾರಹಳ್ಳಿ ಕೆರೆಯನ್ನು ಅಕ್ರಮ ಕೋರರಿಂದ ಭೂಕಬಳಿಕೆದಾರಿಂದ ರಕ್ಷಿಸಿ ದಾಖಲಾತಿಗಳಲ್ಲಿ ಪೂಜಾರಹಳ್ಳಿ ಕೆರೆ ಸಾರ್ವಜನಿಕರ ಕೆರೆಯೆಂದು ಸರ್ಕಾರಿ ಆಸ್ತಿ ಆಗಿ ದಾಖಲೆಗಳನ್ನು ಸರಿಪಡಿಸಬೇಕೆಂದು ಗ್ರಾಮಸ್ಥರು ಹೋರಾಟದ ಮೂಲಕ ಜಿಲ್ಲಾಧಿಕಾರಿಗಳಿಗೆ ಒತ್ತಾಯಿಸಿದೆ. ಪೂಜಾರಿಯಿಂದ ವಿಜಯನಗರ ಜಿಲ್ಲಾಧಿಕಾರಿಗಳ ಕಚೇರಿ ವರಿಗೆ ಅಖಿಲ ಭಾರತ ಕಿಸಾನ್ ಸಭಾ ನೇತೃತ್ವದಲ್ಲಿ ” ಅಕ್ರಮ ಕೋರರಿಂದ ಪೂಜಾರಹಳ್ಳಿ ಕೆರೆ ಉಳಿಸಿ ಕೂಲಿ ಕಾರ್ಮಿಕರ ರೈತರನ್ನು ರಕ್ಷಿಸಿ,” ಎಂದು ಮುಂದಿನ ದಿನಗಳಲ್ಲಿ ಹೋರಾಟ ನಡೆಸಲಾಗುವುದೆಂದು ಅಖಿಲ ಭಾರತ ಕಿಸಾನ್ ಸಭಾ ರಾಜ್ಯ ಉಪಾಧ್ಯಕ್ಷರಾದ ಎಚ್. ವೀರಣ್ಣ ಎಚ್ಚರಿಸಿದ್ದಾರೆ. ರೈತರ ಪರವಾಗಿ ಬಡ ಕಾರ್ಮಿಕರ ಪರವಾಗಿ ನಾವಿದ್ದೇವೆ ಎಂದು ರೈತ ಬೆಂಬಲಕ್ಕೆ ನಿಂತು ಪೂಜಾ ರಲ್ಲಿ ಕೆರೆ ಉಳಿಯುವ ವರೆಗೂ ಹೋರಾಟ ನಿಲ್ಲದು ಎಂದು ತಿಳಿಸಿದ್ದಾರೆ ಅಡ್ಡಿಪಡಿಸುತ್ತಿರುವ ವ್ಯಕ್ತಿಯ ಮೇಲೆ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದ್ದಾರೆ. ಈ ಸಂದರ್ಭದಲ್ಲಿ ಗ್ರಾಮ ಪಂಚಾಯ್ತಿ ವ್ಯಾಪ್ತಿಯ ಕೂಲಿ ಕಾರ್ಮಿಕರು,ಹಾಗೂ ಗ್ರಾಮ ಪಂಚಾಯತಿಯ ಅಧ್ಯಕ್ಷರು ಸದಸ್ಯರುಗಳು. ತಾಲೂಕು ಪಂಚಾಯಿತಿ ಮಾಜಿ ಸದಸ್ಯ ಮಹೇಶ್, ಬೋರಣ್ಣ,ಸಿದ್ದಲಿಂಗಯ್ಯ, ಸ್ವಾಮಿ, ಗೆದಲಯ್ಯ, ಗ್ರಾಮದ ಮುಖಂಡರಾದ , ವೆಂಕಟೇಶ್ ನಾಯ್,  ಬೋರಯ್ಯ, ಡಿ. ಚೇತನ್, ಪೂಜಾರಿ ಪಾಪಯ್ಯ ಪಾಲಮ್ಮ, ಎ. ಬಸಮ್ಮ, ಮಂಗಳಮ್ಮ,  ಮಲ್ಲಮ್ಮ, ಬೋರಮ್ಮ ನೂರಾರು ಜನ ಗ್ರಾಮಸ್ಥರು ಕೂಲಿ ಕಾರ್ಮಿಕರು ಭಾಗವಹಿಸಿದ್ದರು ಇದ್ದರು.

ಇತ್ತೀಚಿನ ಸುದ್ದಿ

ಜಾಹೀರಾತು