ಇತ್ತೀಚಿನ ಸುದ್ದಿ
ಪೊನ್ನಂಪೇಟೆ: ನಿಟ್ಟೂರು ಕಾರ್ಮಾಡು ಬಾಲಕಿಯರ ವಸತಿನಿಲಯದ ಕಾಂಪೌಂಡ್ ನಲ್ಲಿದ್ದ ಚಂದನದ ಮರಗಳ್ಳತನ
15/10/2025, 09:35

ಗಿರಿಧರ್ ಕೊಂಪುಳಿರ ಮಡಿಕೇರಿ
info.reporterkarnataka@gmail.com
ಪೊನ್ನಂಪೇಟೆ ತಾಲ್ಲೂಕಿನ ನಿಟ್ಟೂರು ಕಾರ್ಮಾಡು ಮುಖ್ಯ ರಸ್ತೆಯ ಪಕ್ಕದಲ್ಲೇ ಇರುವ ಮೆಟ್ರಿಕ್ ಪೂರ್ವ ಗಿರಿಜನ ಬಾಲಕಿಯರ ವಸತಿ ನಿಲಯದ ಕಾಂಪೌಂಡ್ ನಲ್ಲಿ ಸಮೃದ್ಧಿಯಾಗಿ ಬೆಳೆದು ನಿಂತಿದ್ದ ಶ್ರೀಗಂಧ ಮರವನ್ನು ತಡರಾತ್ರಿಯಲ್ಲಿ ಕಳ್ಳರು ಮರವನ್ನು ಕಡಿದು ಕಳ್ಳತನ ಮಾಡಲಾಗಿದೆ.
ಕಳೆದ ವಾರವಷ್ಟೇ ತಡ ರಾತ್ರಿ ನಿಟ್ಟೂರು ಮುಖ್ಯ ರಸ್ತೆಯ ಬದಿಯಲ್ಲಿ ಮನೆಗಳಿಗೆ ನುಗ್ಗಿ ರಾತ್ರಿ ಕಳ್ಳತನ ವೆಸಗಿದ್ದು ಅರಣ್ಯ ಇಲಾಖೆ ಮತ್ತು ಪೊಲೀಸರು ಕಳ್ಳರ ಭಂದನಕ್ಕೆ ಕ್ರಮ ಕೖಗೊಳ್ಳುವಂತೆ ಗ್ರಾಮಸ್ಥರು ಒತ್ತಾಯಿಸಿದ್ದಾರೆ.