8:36 PM Saturday23 - August 2025
ಬ್ರೇಕಿಂಗ್ ನ್ಯೂಸ್
Kodagu | ಸಿದ್ದಾಪುರ: ಕರಡಿಗೋಡು ವಂದನಾಪುರ ಎಸ್ಟೇಟ್ ಮನೆ ಆವರಣದಲ್ಲಿ ಕಾಡಾನೆಗಳ ದಾoಧಲೆ ಡಿಸ್ಕಸ್ ಥ್ರೋ ವೇಳೆ ಅವಘಡ: ವಿದ್ಯಾರ್ಥಿ ಗಂಭೀರ: ಮಂಗಳೂರು ಆಸ್ಪತ್ರೆಗೆ ದಾಖಲು ಬ್ರ್ಯಾಂಡ್ ಕರಾವಳಿ ಹೆಸರಲ್ಲಿ ಅಭಿವೃದ್ಧಿಗೆ ಒತ್ತು ನೀಡಬೇಕು: ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಸ್ನೇಹಿತನ ಆಟೋ ತರಲು ಹೋಗಿದ್ದ ಚಾಲಕ ಅಪಘಾತದಲ್ಲಿ ದುರ್ಮರಣ: ಕಾರು ಡಿಕ್ಕಿ ಹೊಡೆದು… ವೈದ್ಯಕೀಯ ವಿದ್ಯಾರ್ಥಿನಿ ಅನನ್ಯಾ ಭಟ್ ನಾಪತ್ತೆ ಪ್ರಕರಣ: ಸುಜಾತ ಭಟ್ ದೂರು ಎಸ್ಐಟಿಗೆ… ಕುಶಾಲನಗರ: ರಾಷ್ಟ್ರ ರಕ್ಷಣಾ ಪಡೆ ಸಂಸ್ಥಾಪಕ ಪುನೀತ್ ಕೆರೇಹಳ್ಳಿ ಪೊಲೀಸ್ ವಶಕ್ಕೆ ದಲಿತ ಸಿಎಂ ಕೂಗು ತಪ್ಪಿಸಲು ಒಳ ಮೀಸಲಾತಿ ಜಾರಿ: ದಿಲ್ಲಿಯಲ್ಲಿ ಮಾಜಿ ಸಿಎಂ… ತೋಟದಲ್ಲಿ ಬಿದ್ದಿದ್ದ ತೆಂಗಿನಕಾಯಿ ಹೆಕ್ಕಿದ್ದಕ್ಕೆ ಮಾಲೀಕನಿಂದ ಅಮಾನುಷ ಹಲ್ಲೆ: ಯುವಕ ಸಾವು ಧರ್ಮಸ್ಥಳ ಪ್ರಕರಣವನ್ನು ಎನ್ಐಎ ತನಿಖೆಗೆ ವಹಿಸಬೇಕು: ಮಾಜಿ ಗೃಹ ಸಚಿವ ಆರಗ ಜ್ಞಾನೇಂದ್ರ ಮಟ್ಟು ಗುಳ್ಳ ನಂಟು ಉಡುಪಿ ಮಠಕ್ಕೂ ಉಂಟು: ವಾದಿರಾಜ ತೀರ್ಥರು ಬದನೆಗೆ ಹೆಸರಿಟ್ಟರಂತೆ!

ಇತ್ತೀಚಿನ ಸುದ್ದಿ

ಪಾಲಿಷ್ ಮಾಡಿ ಕೊಡುವುದಾಗಿ ನಂಬಿಸಿ 5 ಲಕ್ಷ ರೂ. ಮೌಲ್ಯದ ಚಿನ್ನ ಎಗರಿಸಿ ಪರಾರಿ: ಹಾಡಹಗಲೇ ಇಬ್ಬರು ಯುವಕರಿಂದ ಕೃತ್ಯ

29/07/2021, 16:59

ಶರಣೇ ಗೌಡ ಸಿಂಧನೂರು ರಾಯಚೂರು
info.reporterkarnataka@gmail.com

ಚಿನ್ನದ ವಸ್ತುಗಳನ್ನು ಪಾಲಿಷ್ ಮಾಡಿ ಕೊಡುವುದಾಗಿ ನಂಬಿಸಿದ ಯುವಕರ ತಂಡವೊಂದು ಹಾಡಹಗಲೇ ಚಿನ್ನದ ಆಭರಣಗಳೊಂದಿಗೆ ಪರಾರಿಯಾದ ಘಟನೆ 

ಸಿಂಧನೂರು ಪಟ್ಟಣದಲ್ಲಿ ಗುರುವಾರ ಬೆಳಕಿಗೆ ಬಂದಿದೆ.

ಪಟ್ಟಣದ ಬಳಗಾನೂರು ರಸ್ತೆ ಸಮೀಪದಲ್ಲಿ ಇರುವ ನಿವೃತ್ತ ಶಿಕ್ಷಕ ಯಲ್ಲಪ್ಲ ಜಾಲಿಹಾಳ  ನಿವಾಸಕ್ಕೆ ಬೆಳಗ್ಗೆ  ಬೈಕ್ ಮೇಲೆ ಆಗಮಿಸಿದ ಇಬ್ಬರು ಯುವಕರು ತಾವು ಚಿನ್ನದ ಅಭರಣಗಳನ್ನು ಪಾಲಿಷ್ ಮಾಡಿಕೊಡುತ್ತೇವೆ ಎಂದು ನಂಬಿಸಿದ್ದಾರೆ, ಅಡಿಗೆ ಮಾಡುವ ಕುಕ್ಕರನಲ್ಲಿ ಚಿನ್ನ ಹಾಕಿ ಕೊಡಿ ಎಂದು ವಂಚಕರು ಹೇಳಿದಾಗ ಕುಟುಂಬದ ಸದಸ್ಯರು ಕುಕ್ಕರನಲ್ಲಿ 10 ತೊಲೆಯ ಚಿನ್ನದ ಆಭರಣಗಳನ್ನು ಹಾಕಿ ಕೊಟ್ಟಿದ್ದಾರೆ. ಕುಕ್ಕರ್ ಕಾಯಿಸುವ ವೇಳೆ  ಕುಟುಂಬದ ಸದಸ್ಯರಿಗೆ ಯಾಮಾರಿಸಿದ ವಂಚಕರ ತಂಡ  5 ಲಕ್ಷ ಬೆಲೆ ಬಾಳುವ 10 ತೊಲೆ ಚಿನ್ನದೊಂದಿಗೆ ಪರಾರಿಯಾಗಿದ್ದಾರೆ.  ಇದರಿಂದ ಗಾಬರಿಗೊಂಡ ಯಲ್ಲಪ್ಪ ಅವರು ಸ್ಥಳೀಯ ಪೊಲೀಸ್ ಠಾಣೆಗೆ ಮಾಹಿತಿ ಮುಟ್ಟಿಸಿದ್ದಾರೆ. ‌ ಸ್ಥಳಕ್ಕೆ ದೌಡಾಯಿಸಿದ ಸಬ್ ಇನ್ ಸ್ಪೆಕ್ಟರ್ ಭೀಮದಾಸ್ ತನಿಖೆ ಕೈಗೊಂಡಿದ್ದಾರೆ.

ಹಾಡು ಹಗಲೇ ಪಟ್ಟಣದಲ್ಲಿ  ಮನೆಗಳಿಗೆ ಹೋಗಿ, ವಂಚಿಸಿ ಚಿನ್ನದ ಆಭರಣಗಳನ್ನು ಕಳವು ಮಾಡುತ್ತಿದ್ದರಿಂದ ಸಾರ್ವಜನಿಕರಲ್ಲಿ ಅತಂಕ ಸೃಷ್ಟಿಯಾಗಿದೆ. ಪೊಲೀಸ್ ಇಲಾಖೆ ವಂಚಕರ ಜಾಲ ಬಯಲು ಮಾಡಬೇಕು ಎಂದು ಆಗ್ರಹಿಸಿದ್ದಾರೆ.

ಇತ್ತೀಚಿನ ಸುದ್ದಿ

ಜಾಹೀರಾತು