ಇತ್ತೀಚಿನ ಸುದ್ದಿ
ಪೊಲೀಸ್ ಠಾಣೆಗಳಲ್ಲಿ ಸಿಸಿ ಕ್ಯಾಮೆರಾ, ಬಯೋಮೆಟ್ರಿಕ್ ಅಳವಡಿಕೆಗೆ ಜಿಲ್ಲಾಧಿಕಾರಿಗೆ ಮನವಿ
13/07/2024, 16:52
*ಪೊಲೀಸ್ ಠಾಣೆಗಳಲ್ಲಿ ಅಕ್ರಮ ತಡೆಯಲು ಉಮೇಶ್ ಮುದ್ನಾಳ್ ಡಿಸಿಗೆ ದೂರು*
ಶಿವು ರಾಠೋಡ ಹುಣಸಗಿ ಯಾದಗಿರಿ
info.reporterkarnataka@gmail.com
ಯಾದಗಿರಿ ಗ್ರಾಮೀಣ ಹಾಗೂ ವಡಗೇರಾ ಪೊಲೀಸ್ ಠಾಣೆಯಲ್ಲಿ ಸಿಸಿ ಕ್ಯಾಮೆರಾ ಹಾಗೂ ಬಯೋಮೆಟ್ರಿಕ್ ಹಾಜರಾತಿ ಕಡ್ಡಾಯಗೊಳಿಸುವಂತೆ ಆಗ್ರಹಿಸಿ ಸಾಮಾಜಿಕ ಹೋರಾಟಗಾರ ಉಮೇಶ್ ಮುದ್ನಾಳ್ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದ್ದಾರೆ.
ಗ್ರಾಮೀಣ ಹಾಗೂ ವಡಗೇರಾ ಪೊಲೀಸ್ ಠಾಣೆಯಲ್ಲಿ ಅಕ್ರಮ ಹೆಚ್ಚಾಗಿವೆ ಎಂಬ ಆರೋಪ ನಿತ್ಯ ಕೇಳಿ ಬರುತ್ತಿವೆ. ಈ ಎರಡು ಠಾಣೆಗೆ ದೂರು ಕೊಡಲು ಬರುವ ಗ್ರಾಮೀಣ ಮುಗ್ದ ಜನರಿಗೆ ಪೊಲೀಸರು ಶೋಷಣೆ ಮಾಡ್ತಿದ್ದಾರೆಂಬ ಆರೋಪ ಕೇಳಿ ಬಂದಿದೆ. ದೂರು ನೀಡಲು ಹೋದ ಸಾರ್ವಜನಿಕರಿಗೆ ಮೊಬೈಲ್ ಒಳಗಡೆ ತರುವಂತಿಲ್ಲ ಎಂವ ಅಲಿಖಿತ ಹೇರುತ್ತಿದ್ದಾರೆ. ದೂರು ನೀಡಲು ಹೋದವರ ಬಳಿಯೇ ಹಣ ಪಡೆಯಿತ್ತಿದ್ದಾರೆ. ಆರೋಪಿಗಳೇ ಪೊಲೀಸರ ಪಾಲಿನ ಪಿರ್ಯಾಧಿದಾರರಾಗಿದ್ದಾರೆ. ಎರಡು ಠಾಣೆಯಲ್ಲಿ ರೌಡಿ ಶೀಟರ್ ಪರೆಡ್ ನಡೆಸಿಲ್ಲ. ಜೊತೆಗೆ ರೌಡಿಗಳ ನಾಮಫಲಕ, ಛಾಯಾಚಿತ್ರ ಫಲಕ ಅಳವಡಿಸಿಲ್ಲ. ಇಂತಹ ಸಮಾಜ ಘಾತುಕರಿಗೆ ಪೊಲೀಸರು ಠಾಣೆಗಳಲ್ಲಿ ರಾಜ ಮರ್ಯಾದೆ ಕೊಡುತ್ತಿದ್ದಾರೆ. ಹೀಗಾಗಿ ಕಚೇರಿಯಲ್ಲಿ ಸಿಸಿ ಕ್ಯಾಮೆರಾ ಅಳವಡಿಕೆ ಮಾಡಿ ಠಾಣೆಗೆ ಬಂದು ಹೋಗುವವರ ಮೇಲೆ ಮೇಕಾಧಿಕಾರಿಗಳು ನಿಗಾ ಇಡುವಂತೆ ಒತ್ತಾಯಿಸಿದ್ದಾರೆ.
ಈ ಸಂದರ್ಭದಲ್ಲಿ ವೀರಣ್ಣಗೌಡ್, ಶಾಂತಪ್ಪ ಗೌಡ, ತಿಪ್ಪಣ್ಣ ಕಮದಲ್, ಶರಣು ಅಂಗಡಿ, ಗೋವಿಂದ ಮರಾಠ, ಅಯ್ಯಣ್ಣ ನಟೇಕರ್, ಶೇಖಪ್ಪಮಡಿವಾಳ, ದುರ್ಗಪ್ಪ ತಾತ, ಮಲ್ಲಪ್ಪ ಮೂಸಿ, ನಿಂಗಪ್ಪ ಮೂಸಿ, ಅಯ್ಯಪ್ಪ ನತೀಕರ್, ಪರಶುರಾಮ್ ಛಲವಾದಿ, ಪ್ರಭು, ತಾರಾಸಿಂಗ ಯಲ್ಲಪ್ಪ, ರಾಜು, ಹಣಮಂತ, ಶಿವು, ಸಾಬಣ್ಣ ಮರೆಪ್ಪ, ವಿಶ್ವ ನಾಥ, ಮಹೇಂದ್ರ, ಮರಲಿಂಗ, ಸಿದ್ದುನಾನೇಕ ಸೇರಿದಂತೆ ಅನೇಕರು ಭಾಗವಹಿಸಿದರು.