7:25 AM Sunday24 - November 2024
ಬ್ರೇಕಿಂಗ್ ನ್ಯೂಸ್
ಮೂಡಿಗೆರೆ: ಬೆಂಕಿ ಆಕಸ್ಮಿಕದಲ್ಲಿ ಗುಡಿಸಲು ಸಂಪೂರ್ಣ ಭಸ್ಮ; ಬೀದಿಗೆ ಬಿದ್ದ ಬಡ ಕುಟುಂಬ ರಾಜ್ಯ ವಿಧಾನಸಭೆಯ 3 ಕ್ಷೇತ್ರಗಳ ಉಪ ಚುನಾವಣೆ; ಕಾಂಗ್ರೆಸ್ ಭರ್ಜರಿ ಜಯ; ಕೇಸರಿ… ಸಂಡೂರಿನಲ್ಲಿ ಕಾಂಗ್ರೆಸ್‌ ಅಭ್ಯರ್ಥಿ ಅನ್ನಪೂರ್ಣಗೆ ಜಯ: ಬಿಜೆಪಿ ಮೈತ್ರಿಕೂಟಕ್ಕೆ ತೀವ್ರ ಮುಖಭಂಗ ​ ಮಹಾರಾಷ್ಟ್ರ: ಆಡಳಿತಾರೂಢ ಬಿಜೆಪಿ ನೇತೃತ್ವದ ಮಹಾಯುತಿ ಮೈತ್ರಿಕೂಟ ಮತ್ತೆ ಅಧಿಕಾರಕ್ಕೆ? ಆರೆಸ್ಸೆಸ್ ಮುಖ್ಯಸ್ಥ ಡಾ. ಭಾಗವತ್ ಡಿ. 7ರಂದು ಕಲ್ಲಡ್ಕಕ್ಕೆ: ಶ್ರೀರಾಮ ವಿದ್ಯಾಕೇಂದ್ರ ಕ್ರೀಡೋತ್ಸವದಲ್ಲಿ… ಬೆಂಗಳೂರು ಮತ್ತು ಚೆನ್ನೈಗೆ ಆಸ್ಟ್ರೇಲಿಯನ್ ಡಿಜಿಟೆಕ್ ಟ್ರೇಡ್ ಮಿಷನ್ ಭೇಟಿ ವೈಜ್ಞಾನಿಕತೆ, ವೈಚಾರಿಕತೆ ಇಲ್ಲದ ಶಿಕ್ಷಣದಿಂದ ಮಾನವೀಯ ಮೌಲ್ಯ ಬೆಳೆಸಿಕೊಳ್ಳಲು ಸಾಧ್ಯವಿಲ್ಲ: ಸಿಎಂ ಸಿದ್ದರಾಮಯ್ಯ ನೀರು ಹರಿಸುವ ನಿರ್ಣಯದಿಂದ ನಮ್ಮ ಭಾಗದ ರೈತರಿಗೆ ಅನ್ಯಾಯ: ಮಾಜಿ ಸಚಿವ ನರಸಿಂಹ… ಫೆಸ್ಟಿವಲ್ ಆಫ್ ಆಸ್ಟ್ರೇಲಿಯಾ: ಶಿಕ್ಷಣದ ಶ್ರೇಷ್ಠತೆ ಮತ್ತು ಪ್ರಿಮಿಯಂ ಎಫ್ & ಬಿ… ತೇಜಸ್ವಿ ಅವರು ನಡೆನುಡಿಯಲ್ಲಿ ಬಹುತೇಕ ಒಂದೇ ಎಂಬಂತೆ ಬದುಕಿದ ಅಪರೂಪದ ಲೇಖಕರು; ಡಾ.ಸಂಪತ್…

ಇತ್ತೀಚಿನ ಸುದ್ದಿ

ಪೊಲೀಸ್ ನೇಮಕಾತಿಯಲ್ಲೂ ಕಮಿಷನ್ ವಾಸನೆ:ರಾಜಕಾರಣಿಗಳ ಕೊರಳು ಸುತ್ತುಲಿದೆಯೇ ಈ ಪ್ರಕರಣ?

17/04/2022, 12:02

ಬೆಂಗಳೂರು(reporterkarnataka.com): ರಾಜ್ಯದಲ್ಲಿ ಪೊಲೀಸ್ ನೇಮಕಾತಿಯಲ್ಲಿಯೂ ಅವ್ಯವಹಾರ ಕಂಡು ಬಂದಿದೆ. ಈ ಸಂಬಂಧ  6 ಮಂದಿ ಆರೋಪಿಗಳನ್ನು ಶನಿವಾರ ಸಿಐಡಿ ಪೊಲೀಸರು ಶನಿವಾರ ಬಂಧಿಸಿದ್ದು, ಇದರ ಆಳ ಮತ್ತು ವಿಸ್ತಾರ ಇನ್ನಷ್ಟು ಹಬ್ಬಿರುವ ಬಗ್ಗೆ ಶಂಕೆ ವ್ಯಕ್ತವಾಗಿದೆ.

545 ಪಿಎಸ್​ಐ ಹುದ್ದೆಗಳ ನೇಮಕಾತಿಯಲ್ಲಿ ಅಕ್ರಮ ನಡೆದಿದೆಯೆನ್ನಲಾಗಿದೆ. ಪೊಲೀಸ್ ಸಬ್ ಇನ್​ಸ್ಪೆಕ್ಟರ್ ಹಾಗೂ ಕಾನ್​ಸ್ಟೆಬಲ್ ಹುದ್ದೆಗಳ ನೇಮಕಾತಿಯಲ್ಲಿ ಅಕ್ರಮದ ಆರೋಪ ಇದೇ ಮೊದಲೇನಲ್ಲ. ಪ್ರತಿಬಾರಿ ನೇಮಕಾತಿಯಲ್ಲೂ ಅಕ್ರಮದ ವಾಸನೆ ಬಡಿಯುತ್ತದೆ. ಸಬ್ ಇನ್​ಸ್ಪೆಕ್ಟರ್ ಹುದ್ದೆಗೆ 30 ಲಕ್ಷ ರೂ.ನಿಂದ 1 ಕೋಟಿ ರೂ.ವರೆಗೆ ಡೀಲ್ ನಡೆಯುತ್ತದೆ ಎಂಬ ಆರೋಪವಿದೆ.

ಮಧ್ಯವರ್ತಿಗಳ ಜತೆ ಇಲಾಖೆಯ ಕೆಲ ಅಧಿಕಾರಿಗಳು ಮತ್ತು ಸಿಬ್ಬಂದಿ ಅಕ್ರಮ ನೇಮಕಾತಿಗೆ ಕೈಜೋಡಿಸುತ್ತಿದ್ದಾರೆ. ರಾಜಕಾರಣಿಗಳ ಪಾತ್ರದ ಬಗ್ಗೆಯೂ ತನಿಖೆ ನಡೆಯುತ್ತಿದೆ.

ಈಗಿನ 545 ಎಸ್​ಐ ಹುದ್ದೆ ನೇಮಕಾತಿಯಲ್ಲೂ ಪರೀಕ್ಷಾ ಕೇಂದ್ರಗಳ ಮೇಲ್ವಿಚಾರಕ ಸಿಬ್ಬಂದಿ ಸೇರಿ ಕೆಲ ಅಧಿಕಾರಿಗಳು ಅಕ್ರಮಕ್ಕೆ ಸಾಥ್ ಕೊಟ್ಟಿರುವ ವಿಚಾರ ಸಿಐಡಿ ಪ್ರಾಥಮಿಕ ತನಿಖೆಯಲ್ಲಿ ಬಯಲಾಗಿದೆ. ಪ್ರಕರಣದ ತನಿಖೆ ಚುರುಕುಗೊಳಿಸಿರುವ ಸಿಐಡಿ ಅಧಿಕಾರಿಗಳು, ಶನಿವಾರ ಕಲಬುರಗಿಯಲ್ಲಿ ಮೂವರು ಅಭ್ಯರ್ಥಿಗಳು ಹಾಗೂ ಮೂವರು ಪರೀಕ್ಷಾ ಕೇಂದ್ರದ ಮಹಿಳಾ ಮೇಲ್ವಿಚಾರಕರನ್ನು ಬಂಧಿಸಿದ್ದಾರೆ. ಅಕ್ರಮದಲ್ಲಿ ಕೆಲ ಅಧಿಕಾರಿಗಳು ಮತ್ತು ಸಿಬ್ಬಂದಿ ಭಾಗಿಯಾಗಿರುವ ಬಗ್ಗೆ ಅನುಮಾನ ವ್ಯಕ್ತವಾಗಿದ್ದು, ಶೀಘ್ರ ಅವರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಲಿದ್ದಾರೆ. ತಲಾ ಹುದ್ದೆಗೆ 30 ಲಕ್ಷ ರೂ.ನಿಂದ 1 ಕೋಟಿ ರೂವರೆಗೆ ಡೀಲ್ ನಡೆದಿರುವ ಶಂಕೆ ವ್ಯಕ್ತವಾಗಿದೆ. ಈ ಹಿಂದೆ ನೇಮಕಾತಿ ಸಂದರ್ಭದಲ್ಲಿ ಪ್ರಶ್ನೆಪತ್ರಿಕೆ ಸೋರಿಕೆ ಹಾಗೂ ಬದಲಿ ಅಭ್ಯರ್ಥಿಗಳನ್ನು ಪರೀಕ್ಷೆಗೆ ಕೂರಿಸಿ ಬರೆಸಿರುವುದು ಬಯಲಾಗಿತ್ತು.

ಗೌಪ್ಯ ಸ್ಥಳದಲ್ಲಿ ಭರ್ತಿ: ಪೊಲೀಸ್ ನೇಮಕಾತಿ ಅಕ್ರಮ ದಂಧೆಯಲ್ಲಿ ಇದು ಹಳೇ ಪದ್ದತಿ. ಪರೀಕ್ಷೆ ನಡೆಯುವ ಹಿಂದಿನ ದಿನ ಓಎಂಆರ್ ಶೀಟ್​ಗಳನ್ನು ಅಭ್ಯರ್ಥಿಗೆ ಕೊಟ್ಟು ಗೌಪ್ಯ ಸ್ಥಳದಲ್ಲಿ ಬರೆಸುವುದು ಅಥವಾ ಪ್ರಶ್ನೆಗಳನ್ನು ಕೊಟ್ಟು ಉತ್ತರಗಳನ್ನು ಹೇಳಿಕೊಟ್ಟು ನೇರ ಪರೀಕ್ಷಾ ಕೇಂದ್ರಕ್ಕೆ ಕರೆತರುವುದು. ಭರ್ತಿ ಮಾಡಿದ ಓಎಂಆರ್ ಶೀಟ್​ಗಳನ್ನು ಪರೀಕ್ಷಾ ದಿನ ಸೀಲ್ಡ್ ಮಾಡಿ ಮೌಲ್ಯಮಾಪನ ಕೇಂದ್ರಕ್ಕೆ ರವಾನಿಸುತ್ತಾರೆ.

ಪರಿವೀಕ್ಷಕರ ಬುಕಿಂಗ್: ಕೊಠಡಿ ಪರಿವೀಕ್ಷಕರನ್ನೇ ಬುಕ್ ಮಾಡಲಾಗುತ್ತದೆ. ತಮಗೆ ಬೇಕಾದ ಸೆಂಟರ್​ಗೆ ಪರಿವೀಕ್ಷಕರನ್ನು ನೇಮಕ ಮಾಡಿಕೊಂಡು ಅವರ ಮೂಲಕ ಅಭ್ಯರ್ಥಿಗಳಿಗೆ ಅನುಕೂಲ ಮಾಡಿಕೊಡುವುದು, ಬ್ಲೂಟೂತ್ ಬಳಕೆಗೆ ಅಥವಾ ಉತ್ತರ ಹೇಳಿಕೊಡುವುದು, ಓಎಂಆರ್ ಶೀಟ್​ನಲ್ಲಿ ಖಾಲಿ ಬಿಟ್ಟಿರುವ ಪ್ರಶ್ನೆಗಳಿಗೆ ಉತ್ತರಿಸಿ ಸೀಲ್ಡ್ ಮಾಡುವುದು. ಇಲ್ಲವಾದರೆ ಓಎಂಆರ್ ಶೀಟ್ ಖಾಲಿ ಬಿಟ್ಟಿರುವ ಅಭ್ಯರ್ಥಿಗಳ ಹೆಸರು, ನೋಂದಣಿ ಸಂಖ್ಯೆಯನ್ನು ಬರೆದು ದಾಖಲೆ ಮಾಡದೆ ನಿರ್ಲಕ್ಷ್ಯ ತೋರುವುದು. ಇದರಿಂದ ಮುಂದೆ ಪೊಲೀಸ್ ತನಿಖೆಗೆ ಅಡ್ಡಿ ಉಂಟಾಗುತ್ತದೆ. ಓಎಂಆರ್ ಶೀಟ್ ಖಾಲಿ ಬಿಟ್ಟ ಅಥವಾ ಬೇಗ ಕೊಠಡಿಯಿಂದ ಹೊರ ಹೋದ ಅಭ್ಯರ್ಥಿಗಳ ಹೆಸರು ಮತ್ತು ನೋಂದಣಿ ಸಂಖ್ಯೆ ದಾಖಲೆ ಮಾಡಿದ್ದರೆ ಅಂತಹ ಅಭ್ಯರ್ಥಿಗಳ ಓಎಂಆರ್ ಶೀಟ್​ಗಳನ್ನು ಎಫ್​ಎಸ್​ಎಲ್​ಗೆ ಕಳುಹಿಸಿದರೆ ಸತ್ಯಾಂಶ ಹೊರಬರುತ್ತದೆ.

ಓಎಂಆರ್ ಶೀಟ್​ನಲ್ಲೇ ಡೀಲ್: ಲಿಖಿತ ಪರೀಕ್ಷೆ ಪತ್ರಿಕೆ-1ರಲ್ಲಿ 50 ಅಂಕ ಮತ್ತು ಪತ್ರಿಕೆ-2ರಲ್ಲಿ 150 ಅಂಕಗಳಿರುತ್ತವೆ. ಇದರಲ್ಲಿ ಹೆಚ್ಚು ಅಂಕ ಪಡೆದವರು ಆಯ್ಕೆಯಾಗುತ್ತಾರೆ. ಅದಕ್ಕಾಗಿ ಅಂಕಗಳ ಮೇಲೆಯೇ ಲಕ್ಷ ಲಕ್ಷ ಡೀಲ್ ನಡೆಯುತ್ತದೆ

ಪತ್ರಿಕೆ-1ರಲ್ಲಿ 50ಕ್ಕೆ ಪ್ರಬಂಧ (20 ಅಂಕ), ಸಾರಾಂಶ ಬರಹ (10 ಅಂಕ), ಭಾಷಾಂತರಕ್ಕೆ (20 ಅಂಕ) ನಿಗದಿ ಮಾಡಲಾಗಿದೆ. ಇದರಲ್ಲಿ 35 ಅಂಕ ಪಡೆಯುವುದು ಸಹ ಕಷ್ಟಸಾಧ್ಯ. ಡೀಲ್ ನಡೆದಿದ್ದರೆ 40 ಅಂಕಗಳಿಗೆ ಮೇಲ್ಪಟ್ಟು ಸಿಗುತ್ತದೆ.

ಪತ್ರಿಕೆ-2ರಲ್ಲಿ 150ಕ್ಕೆ ಬಹು ಆಯ್ಕೆ ಪ್ರಶ್ನೆಗಳಿಗೆ ಉತ್ತರಿಸಬೇಕಾಗಿರುತ್ತದೆ. ಸರಿ ಬರೆದರೆ ಅಂಕ ಸಿಗುತ್ತದೆ. ತಪುಪ ಉತ್ತರ ಬರೆದರೆ ಶೇ.25 ಅಂಕ ಕಡಿತವಾಗುತ್ತದೆ. ಸರಿ ಉತ್ತರ ಗೊತ್ತಿದ್ದರೆ ಅಭ್ಯರ್ಥಿಗಳು ಓಎಂಆರ್ ಶೀಟ್​ನಲ್ಲಿ ಬರೆದು ಉಳಿದವನ್ನು ಖಾಲಿ ಬಿಟ್ಟು ಬರುತ್ತಾರೆ.

ಮೌಲ್ಯಮಾಪನಕ್ಕೂ ಮೊದಲು ಖಾಲಿ ಬಿಟ್ಟ ಪ್ರಶ್ನೆಗಳಿಗೆ ಉತ್ತರ ತುಂಬಿ ಸೀಲ್ಡ್ ಕವರ್​ನಲ್ಲಿ ಪ್ಯಾಕ್ ಮಾಡಿ ಕಳುಹಿಸಲಾಗುತ್ತದೆ. ಇಂತಹ ಅಭ್ಯರ್ಥಿಗಳು ನಕಲು ಓಎಂಆರ್ ಶೀಟ್​ನ್ನು ನಾಶ ಮಾಡಿ ಸಾಕ್ಷ್ಯ ಸಿಗದಂತೆ ನೋಡಿಕೊಳ್ಳುತ್ತಾರೆ.

ಮೌಖಿಕ ಅಂಕ ಕೈಬಿಟ್ರು ತಪ್ಪಲಿಲ್ಲ: ನೇಮಕಾತಿ ಅಕ್ರಮ ತಡೆಯುವ ಉದ್ದೇಶದಿಂದ ಈ ಮೊದಲಿನ ವ್ಯವಸ್ಥೆಯಲ್ಲಿದ್ದ 10 ಅಂಕದ ಮೌಖಿಕ ಪರೀಕ್ಷೆ ಕೈಬಿಡಲಾಗಿತ್ತು. ಈ ಆದೇಶ ಜಾರಿಯಾದ ಮೇಲೆ ಮೊದಲ ಬ್ಯಾಚ್ 545 ಎಸ್​ಐ ನೇಮಕಾತಿ ನಡೆದಿತ್ತು. ಈಗ ಇದಕ್ಕೂ ಸೆಡ್ಡು ಹೊಡೆದು ಅಕ್ರಮ ದಂಧೆ ನಡೆದಿದೆ.

ಇತ್ತೀಚಿನ ಸುದ್ದಿ

ಜಾಹೀರಾತು