ಇತ್ತೀಚಿನ ಸುದ್ದಿ
ಪೊಳಲಿ ದ್ವಾರ: ಗುರುಪುರ- ಪೊಳಲಿ ರಾಷ್ಟ್ರೀಯ ಹೆದ್ದಾರಿಗೆ ಕುಸಿತದ ಭೀತಿ; ವಾಹನ ಸಂಚಾರ ಬದಲು
05/07/2022, 23:51
ಗುರುಪುರ(reporterkarnataka.com): ಮಂಗಳೂರು -ಕಾರ್ಕಳ ರಾಷ್ಟ್ರೀಯ ಹೆದ್ದಾರಿ169 ಪೊಳಲಿ ದ್ವಾರದ ಅಣೆ ವನಭೋಜನ ಎಂಬಲ್ಲಿ ಹೆದ್ದಾರಿಯ ಬದಿ ಕುಸಿದು ಅಪಾಯಕ್ಕೆ ಸಿಲುಕಿದೆ.
ಹೆದ್ದಾರಿಯ ಪಕ್ಕದಲ್ಲಿ ಭಾರೀ ಪ್ರಮಾಣದಲ್ಲಿ ಗುಡ್ಡ ಕುಸಿತ ಉಂಟಾಗಿ, ಹೆದ್ದಾರಿ ಕುಸಿಯುವ ಭೀತಿ ಎದುರಾಗಿದೆ. ಸದ್ಯ ಮಂಗಳೂರು-ಮೂಡಬಿದ್ರೆ ಭಾಗದ ಬಸ್ ಸಹಿತ ಘನ ವಾಹನ ಸಂಚಾರವನ್ನು ಪರ್ಯಾಯ ರಸ್ತೆಗೆ ವರ್ಗಾಯಿಸಲಾಗಿದೆ.
ಪರ್ಯಾಯ ಮಾರ್ಗ: ಗುರುಪುರ -ಕೈಕಂಬ ಜಂಕ್ಷನ್‍ನಿಂದ ಬಜ್ಪೆ ಮರವೂರಾಗಿ ನಗರ ಪ್ರವೇಶಿಸುವಂತೆ ಸಂಚಾರ ವ್ಯವಸ್ಥೆ ಮಾಡಲಾಗಿದೆ. ಕೆಲವು ವಾಹನಗಳಿಗೆ ಪಂಚಾಯತ್ ರಸ್ತೆ ಮೂಲಕ ಬಂಡಸಾಲೆಯಾಗಿ ಮುಂದುವರಿಯಲು ಅವಕಾಶ ಕಲ್ಪಿಸಲಾಗಿದೆ.