3:28 AM Saturday23 - November 2024
ಬ್ರೇಕಿಂಗ್ ನ್ಯೂಸ್
ಮೂಡಿಗೆರೆ: ಬೆಂಕಿ ಆಕಸ್ಮಿಕದಲ್ಲಿ ಗುಡಿಸಲು ಸಂಪೂರ್ಣ ಭಸ್ಮ; ಬೀದಿಗೆ ಬಿದ್ದ ಬಡ ಕುಟುಂಬ ರಾಜ್ಯ ವಿಧಾನಸಭೆಯ 3 ಕ್ಷೇತ್ರಗಳ ಉಪ ಚುನಾವಣೆ; ಕಾಂಗ್ರೆಸ್ ಭರ್ಜರಿ ಜಯ; ಕೇಸರಿ… ಸಂಡೂರಿನಲ್ಲಿ ಕಾಂಗ್ರೆಸ್‌ ಅಭ್ಯರ್ಥಿ ಅನ್ನಪೂರ್ಣಗೆ ಜಯ: ಬಿಜೆಪಿ ಮೈತ್ರಿಕೂಟಕ್ಕೆ ತೀವ್ರ ಮುಖಭಂಗ ​ ಮಹಾರಾಷ್ಟ್ರ: ಆಡಳಿತಾರೂಢ ಬಿಜೆಪಿ ನೇತೃತ್ವದ ಮಹಾಯುತಿ ಮೈತ್ರಿಕೂಟ ಮತ್ತೆ ಅಧಿಕಾರಕ್ಕೆ? ಆರೆಸ್ಸೆಸ್ ಮುಖ್ಯಸ್ಥ ಡಾ. ಭಾಗವತ್ ಡಿ. 7ರಂದು ಕಲ್ಲಡ್ಕಕ್ಕೆ: ಶ್ರೀರಾಮ ವಿದ್ಯಾಕೇಂದ್ರ ಕ್ರೀಡೋತ್ಸವದಲ್ಲಿ… ಬೆಂಗಳೂರು ಮತ್ತು ಚೆನ್ನೈಗೆ ಆಸ್ಟ್ರೇಲಿಯನ್ ಡಿಜಿಟೆಕ್ ಟ್ರೇಡ್ ಮಿಷನ್ ಭೇಟಿ ವೈಜ್ಞಾನಿಕತೆ, ವೈಚಾರಿಕತೆ ಇಲ್ಲದ ಶಿಕ್ಷಣದಿಂದ ಮಾನವೀಯ ಮೌಲ್ಯ ಬೆಳೆಸಿಕೊಳ್ಳಲು ಸಾಧ್ಯವಿಲ್ಲ: ಸಿಎಂ ಸಿದ್ದರಾಮಯ್ಯ ನೀರು ಹರಿಸುವ ನಿರ್ಣಯದಿಂದ ನಮ್ಮ ಭಾಗದ ರೈತರಿಗೆ ಅನ್ಯಾಯ: ಮಾಜಿ ಸಚಿವ ನರಸಿಂಹ… ಫೆಸ್ಟಿವಲ್ ಆಫ್ ಆಸ್ಟ್ರೇಲಿಯಾ: ಶಿಕ್ಷಣದ ಶ್ರೇಷ್ಠತೆ ಮತ್ತು ಪ್ರಿಮಿಯಂ ಎಫ್ & ಬಿ… ತೇಜಸ್ವಿ ಅವರು ನಡೆನುಡಿಯಲ್ಲಿ ಬಹುತೇಕ ಒಂದೇ ಎಂಬಂತೆ ಬದುಕಿದ ಅಪರೂಪದ ಲೇಖಕರು; ಡಾ.ಸಂಪತ್…

ಇತ್ತೀಚಿನ ಸುದ್ದಿ

ಪ್ಲಾಸ್ಟಿಕ್‌ನಿಂದ ಮುಕ್ತಿಗಾಗಿ ತಯಾರಿಸಿ ಪರಿಸರ ಇಟ್ಟಿಗೆ

08/05/2021, 13:41

Info.reporterkarnataka@gmail.com
ಇಡೀ ಜೀವರಾಶಿಗೆ ಮಾರಕವಾದ ಪ್ಲಾಸ್ಟಿಕ್ ತ್ಯಾಜ್ಯ ಪರಿಸರದ ಮೇಲೆ ಘೋರ ಪರಿಣಾಮವನ್ನು ಬೀರುತ್ತಿದೆ. ಪ್ಲಾಸ್ಟಿಕ್ ಅಪಾಯಕಾರಿ ಅಂತ ಗೊತ್ತಿದ್ದರೂ ಸಹ ಅದರ ಬಳಕೆ ದಿನದಿಂದ ದಿನಕ್ಕೆ ಹೆಚ್ಚುತ್ತಲೇ ಇದೆ. ಪ್ಲಾಸ್ಟಿಕ್ ಮುಕ್ತ ಕ್ಯಾಂಪಸ್ ಹಾಗೂ ಮೊಡಂಕಾಪು ಪರಿಸರದಲ್ಲಿ ಮರು ಬಳಕೆಯಾಗದ ಪ್ಲಾಸ್ಟಿಕ್‌ನ ಸೂಕ್ತ ನಿರ್ವಹಣೆಗಾಗಿ ಕಾರ್ಮೆಲ್ ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನಾ ಘಟಕವು ಪರಿಸರ ಇಟ್ಟಿಗೆಯ ಮಾಹಿತಿ ಮತ್ತು ತಯಾರಿಕೆಯ ಯೋಜನೆಯನ್ನು ಹಮ್ಮಿಕೊಂಡಿತ್ತು.



ಪರಿಸರ ಇಟ್ಟಿಗೆ ಎಂದರೇನು?
ನಮ್ಮ ನಿತ್ಯಜೀವನದಲ್ಲಿ ಮರು ಬಳಕೆಯಾಗದ ಪ್ಲಾಸ್ಟಿಕ್ ನ ನಿರ್ವಹಣೆ ಒಂದು ಸವಾಲೇ ಆಗಿದೆ. ಜನರು ತಮ್ಮ ದಿನನಿತ್ಯದ ಚಟುವಟಿಕೆಗಳಲ್ಲಿ ಬಳಸಲಾಗದ ಪ್ಲಾಸ್ಟಿಕ್ ತ್ಯಾಜ್ಯಗಳನ್ನು ಎಲ್ಲೆಂದರಲ್ಲಿ ಬಿಸಾಡುವುದನ್ನು ಹಾಗೂ ಸುಟ್ಟು ಹಾಕುವುದನ್ನು ನಾವು ಕಾಣಬಹುದು. ಈ ನಿಟ್ಟಿನಲ್ಲಿ ಪರಿಸರ ಇಟ್ಟಿಗೆಗಳು ಮರು ಬಳಕೆಯಾಗದ ಪ್ಲಾಸ್ಟಿಕ್ ತ್ಯಾಜ್ಯದ ಸೂಕ್ತ ನಿರ್ವಹಣೆ ಮಾಡುವಲ್ಲಿ ಮಹತ್ವದ ಪಾತ್ರ ವಹಿಸುತ್ತದೆ.
ದಿನನಿತ್ಯ ಉಪಯೋಗಿಸಿದ ಮರುಬಳಕೆ ಯಾಗದ ಪ್ಲಾಸ್ಟಿಕ್ ತ್ಯಾಜ್ಯಗಳನ್ನು ಸ್ವಚ್ಛಮಾಡಿ ತಂಪುಪಾನೀಯದ ಅಥವಾ ಯಾವುದೇ ಪ್ಲಾಸ್ಟಿಕ್ ಬಾಟಲ್ ಗಳಲ್ಲಿ ಸಣ್ಣ ಸಣ್ಣ ತುಂಡುಗಳಾಗಿ ಕತ್ತರಿಸಿ ತುಂಬಿಸಬೇಕು ಹಾಗೂ ಒಂದು ಕೋಲಿನ ಸಹಾಯದಿಂದ ತ್ಯಾಜ್ಯವನ್ನು ಮತ್ತಷ್ಟು ತುಂಬಿಸಬೇಕು. ಹೀಗೆ ತಯಾರಾದ ಬಾಟಲನ್ನು ಪರಿಸರ ಇಟ್ಟಿಗೆ ಎಂದು ಕರೆಯುತ್ತಾರೆ.ಎರಡು ಲೀಟರ್ ತಂಪುಪಾನೀಯದ ಬಾಟಲನ್ನು ಪರಿಸರ ಇಟ್ಟಿಗೆ ಯಾಗಿ ಪರಿವರ್ತಿಸಲು ಸರಿಸುಮಾರು ಮೂರು ತಿಂಗಳಿನ ಮರುಬಳಕೆಯಾಗದ ಪ್ಲಾಸ್ಟಿಕ್ ತ್ಯಾಜ್ಯವನ್ನು ಉಪಯೋಗಿಸಬಹುದು. ಹೀಗೆ ತಯಾರಾದ ಪರಿಸರ ಇಟ್ಟಿಗೆಗಳನ್ನು ಕಟ್ಟಡ ನಿರ್ಮಾಣದ ಕೆಲಸದಲ್ಲಿ, ಕಾಲೇಜಿನ ಆವರಣ ಗೋಡೆ ಹಾಗೂ ಹೂತೋಟದ ಆವರಣಗೋಡೆ ನಿರ್ಮಾಣದಲ್ಲಿ ಅದೇ ರೀತಿ ಗಿಡ-ಮರಗಳಿಗೆ ಕಟ್ಟೆಗಳನ್ನು ಕಟ್ಟಲು ಹಾಗೂ ಕುಳಿತುಕೊಳ್ಳುವ ಸೋಫ, ಬೆಂಚು, ಕುರ್ಚಿ ಮೊದಲಾದ ಪೀಠೋಪಕರಣಗಳನ್ನು ತಯಾರಿಸಲು ಬಳಸುತ್ತಾರೆ.
ಕಾರ್ಮೆಲ್ ಕಾಲೇಜ್ ಮೊಡಂಕಾಪು ರಾಷ್ಟ್ರೀಯ ಸೇವಾ ಯೋಜನಾ ಘಟಕ ಪ್ಲಾಸ್ಟಿಕ್ ಮುಕ್ತ ಕ್ಯಾಂಪಸ್ ಹಾಗೂ ಪರಿಸರದಲ್ಲಿ ಮರುಬಳಕೆಯಾಗದ ಪ್ಲಾಸ್ಟಿಕ್ ಮುಕ್ತ ನಿರ್ವಹಣೆಗಾಗಿ ಹಮ್ಮಿಕೊಂಡಿರುವ ಪರಿಸರ ಇಟ್ಟಿಗೆ ಮಾಹಿತಿ ಮತ್ತು ತಯಾರಿಕಾ ಯೋಜನೆಯನ್ನು ಮಂಗಳೂರು ವಿಶ್ವವಿದ್ಯಾಲಯದ ರಾಷ್ಟ್ರೀಯ ಸೇವಾ ಸಂಯೋಜನಾಧಿಕಾರಿ ಡಾ.ನಾಗರತ್ನ ಕೆ.ಎ. ಚಾಲನೆ ನೀಡಿದ್ದು, ಕಾಲೇಜಿನ ಪ್ರಿನ್ಸಿಪಾಲರಾದ ಸಿ.ಡಾ.ಲತಾ ಫೆರ್ನಾಂಡಿಸ್ ಎ.ಸಿ., ರಾಷ್ಟ್ರೀಯ ಸೇವಾ ಯೋಜನಾಧಿಕಾರಿಗಳಾದ ಮಧುರಾ ಕೆ., ದೀಪ್ತಿ, ಹಿಂದಿ ಉಪನ್ಯಾಸಕರಾದ ಚಂದ್ರಿಕಾ ರಾವ್ ಮಾರ್ಗದರ್ಶನದಲ್ಲಿ ರಾಷ್ಟ್ರೀಯ ಸೇವಾ ಯೋಜನಾ ಘಟಕದ ಸ್ವಯಂಸೇವಕರು ತಮ್ಮ ಬಿಡುವಿನ ವೇಳೆಯಲ್ಲಿ ಪರಿಸರ ಇಟ್ಟಿಗೆ ತಯಾರಿಕೆಯಲ್ಲಿ ಕಳೆದ 3 ತಿಂಗಳಿಂದ ತಮ್ಮನ್ನು ತಾವು ತೊಡಗಿಸಿಕೊಂಡಿದ್ದಾರೆ.ವಿದ್ಯಾರ್ಥಿಗಳು ತಮ್ಮ ಬಿಡುವಿನ ಸಮಯದಲ್ಲಿ ಮೊಡಂಕಾಪು ಪರಿಸರದ ಪ್ರತಿಯೊಂದು ಅಂಗಡಿಗಳಿಂದ ಮರು ಬಳಕೆಯಾಗದ ಪ್ಲಾಸ್ಟಿಕ್ ತ್ಯಾಜ್ಯಗಳನ್ನು ಸಂಗ್ರಹಿಸುತ್ತಿದ್ದಾರೆ. ಕಳೆದ ತಿಂಗಳಿನಲ್ಲಿ ನಡೆದ ಬಂಟ್ವಾಳ ಕರಾವಳಿ ಉತ್ಸವದ ವಿವಿಧ ವಾಣಿಜ್ಯ ಮಳಿಗೆಗಳಿಂದ ಕೂಡ ಪ್ಲಾಸ್ಟಿಕ್ ತ್ಯಾಜ್ಯಗಳನ್ನು ಸಂಗ್ರಹಿಸಿರುತ್ತಾರೆ.ಅದೇ ರೀತಿ ಮೊಡಂಕಾಪು ಪರಿಸರದ ರಸ್ತೆಬದಿಯಲ್ಲಿ ಬಿದ್ದಂತಹ ಪ್ಲಾಸ್ಟಿಕ್ ತ್ಯಾಜ್ಯಗಳನ್ನು ಸಂಗ್ರಹಿಸಿದ್ದು, ಸಂಗ್ರಹಿಸಿದ ಮರುಬಳಕೆಯಾಗದ ಪ್ಲಾಸ್ಟಿಕ್ ತ್ಯಾಜ್ಯಗಳಿಂದ ಪರಿಸರ ಇಟ್ಟಿಗೆಯನ್ನು ತಯಾರಿಸುತ್ತಿದ್ದಾರೆ. ಅಂಗಡಿ ಮಾಲೀಕರು ಹಾಗೂ ಕರಾವಳಿ ಉತ್ಸವದ ವ್ಯವಸ್ಥಾಪಕರು ಕೂಡ ಬಹಳಷ್ಟು ಮುತುವರ್ಜಿಯಿಂದ ವಿದ್ಯಾರ್ಥಿಗಳ ಪ್ಲಾಸ್ಟಿಕ್ ಸಂಗ್ರಹಣೆಗೆ ಸರ್ವ ಸಹಕಾರವನ್ನು ನೀಡಿರುತ್ತಾರೆ.ಅದಲ್ಲದೆ ಕಾಲೇಜಿನ ಪ್ರತಿಯೊಂದು ವಿದ್ಯಾರ್ಥಿ ವಿದ್ಯಾರ್ಥಿನಿಯರು ತಮ್ಮ ತಮ್ಮ ಮನೆಗಳಲ್ಲಿ ಪರಿಸರ ಇಟ್ಟಿಗೆಯನ್ನು ತಯಾರಿಸುತ್ತಿದ್ದಾರೆ ಪ್ರಸ್ತುತ ಕಾಲೇಜಿನಲ್ಲಿ ಸುಮಾರು 75 ಪರಿಸರ ಇಟ್ಟಿಗೆ ಈಗಾಗಲೇ ತಯಾರಿಸಿರುತ್ತಾರೆ. ನಮ್ಮ ಯೋಜನೆಯಂತೆ ಕಾಲೇಜಿನ ಕ್ಯಾಂಪಸ್ಸಿನಲ್ಲಿ ವಿದ್ಯಾರ್ಥಿಗಳು ತಯಾರಿಸಿದ ಪರಿಸರ ಇಟ್ಟಿಗೆಗಳ ಸಹಾಯ ದಿಂದ ವಿದ್ಯಾರ್ಥಿಗಳು ಕುಳಿತುಕೊಳ್ಳಲು ಬೇಂಚನ್ನು ಆದಷ್ಟು ಬೇಗ ನಿರ್ಮಾಣ ಮಾಡಲು ನಿರ್ಧರಿಸಲಾಗಿದೆ.




ಪರಿಸರ ಇಟ್ಟಿಗೆ ಮಾಹಿತಿ
ಕಾರ್ಮೆಲ್ ಕಾಲೇಜ್ ಮೊಡಂಕಾಪಿನ ರಾಷ್ಟ್ರೀಯ ಸೇವಾ ಯೋಜನೆಯ ಸ್ವಯಂಸೇವಕರು ಬಂಟ್ವಾಳ ತಾಲೂಕಿನ ವಿವಿಧ ಶಾಲೆ ಹಾಗೂ ಪದವಿ ಪೂರ್ವ ಕಾಲೇಜುಗಳಿಗೆ ತೆರಳಿ ವಿದ್ಯಾರ್ಥಿಗಳಿಗೆ ಪರಿಸರ ಇಟ್ಟಿಗೆಯ ಅಗತ್ಯತೆ ಮತ್ತು ತಯಾರಿಯ ಬಗ್ಗೆ ಮಾಹಿತಿಯನ್ನು ಪ್ರಾತ್ಯಕ್ಷಿಕೆಯ ಮೂಲಕ ನೀಡುತ್ತಿದ್ದಾರೆ.ಹಾಗೂ ಶಾಲಾ ಕಾಲೇಜಿನ ವಿದ್ಯಾರ್ಥಿಗಳಲ್ಲಿ ತಮ್ಮ ತಮ್ಮ ಮನೆಗಳಲ್ಲಿ ಪರಿಸರ ಇಟ್ಟಿಗೆಗಳನ್ನು ತಯಾರಿಸಲು ಮನವರಿಕೆ ಮಾಡುತ್ತಿದ್ದಾರೆ. ಶಾಲಾ ಮತ್ತು ಪದವಿಪೂರ್ವ ಕಾಲೇಜುಗಳಲ್ಲಿ ತಯಾರಿಸಿದ ಪರಿಸರ ಇಟ್ಟಿಗೆಗಳ ಸಹಾಯದಿಂದ ಆಯಾಯ ಶಾಲೆಗಳಲ್ಲಿ ಮತ್ತು ಪದವಿಪೂರ್ವ ಕಾಲೇಜುಗಳಲ್ಲಿ ಬೆಂಚುಗಳನ್ನು ಕೂಡ ನಿರ್ಮಾಣ ಮಾಡಲು ನಿರ್ಧರಿಸಲಾಗಿದೆ. ನಾವು ಮಾಹಿತಿ ನೀಡಿದ ಎಲ್ಲಾ ಶಾಲಾ-ಕಾಲೇಜುಗಳಲ್ಲಿ ಧನಾತ್ಮಕ ಪ್ರತಿಕ್ರಿಯೆ ದೊರಕಿದ್ದು ನಮ್ಮ ಯೋಜನೆಯ ಯಶಸ್ವಿಗೆ ತಮ್ಮ ಬೆಂಬಲವನ್ನು ಸೂಚಿಸಿದ್ದಾರೆ.
ಯಾವುದೇ ಖರ್ಚಿಲ್ಲದೆ ಕೇವಲ ಮರು ಬಳಕೆಯಾಗದ ಪ್ಲಾಸ್ಟಿಕ್ ತ್ಯಾಜ್ಯಗಳಿಂದ ತಯಾರಾಗಿರುವ ಈ ಪರಿಸರ ಇಟ್ಟಿಗೆ ತುಂಬಾ ಪ್ರಯೋಜನಕಾರಿಯಾಗಿದೆ ಹಾಗೂ ಇದು ಪರಿಸರ ಮಾಲಿನ್ಯವನ್ನು ತಡೆಗಟ್ಟುವಲ್ಲಿ ಒಂದು ಪ್ರಮುಖ ಪಾತ್ರ ವಹಿಸುತ್ತದೆ.ಎನ್ನುತ್ತಾರೆ. ರಾಷ್ಟ್ರೀಯ ಸೇವಾ ಯೋಜನಾಧಿಕಾರಿ ಮಧುರಾ ಕೆ


ಸ್ವಚ್ಛ ಪರಿಸರದ ಪರಿಕಲ್ಪನೆ ಇಲ್ಲಿದೆ. ಮೊಡಂಕಾಪು ಕಾಲೇಜಿನ ವಿದ್ಯಾರ್ಥಿಗಳು ಪಠ್ಯದ ಜೊತೆ ಪಠ್ಯೇತರ ಕಾರ್ಯದಲ್ಲಿ ತೊಡಗಿಸಿಕೊಂಡಿರುವುದು ಅಭಿನಾಂದನಾರ್ಹ.ಎನ್ ಎಸ್.ಎಸ್ ವಿದ್ಯಾರ್ಥಿಗಳು ಕೊರೋನಾ ಲಸಿಕೆಯ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸಿದ್ದಾರೆ.ವಿದ್ಯಾರ್ಥಿಗಳು ಮನೆಯಲ್ಲೇ ಇದ್ದು ಸರಕಾರದ ನಿಯಮ ಪಾಲಿಸಿ, ಜೀವ ರಕ್ಷಿಸಿ.
ಮಂಗಳೂರು ವಿಶ್ವವಿದಾಯನಿಲಯದ ರಾಷ್ಟ್ರೀಯ ಸೇವಾಯೋಜನೆಯ ಸಂಯೋಜನಾಧಿಕಾರಿ ಡಾ.ನಾಗರತ್ನ ಕೆ.ಎ.

ಇತ್ತೀಚಿನ ಸುದ್ದಿ

ಜಾಹೀರಾತು