3:01 PM Friday27 - September 2024
ಬ್ರೇಕಿಂಗ್ ನ್ಯೂಸ್
ಸಿಬಿಐ ಬರಬಾರದು ಎಂದು ಬೇಲಿ ಹಾಕಿದ್ದು ಯಾಕೆ: ಮಾಜಿ ಗೃಹ ಸಚಿವ ಆರಗ… ಬಜಾಜ್ ಫಿನ್‍ಸರ್ವ್ ವತಿಯಿಂದ ವಯನಾಡ್ ಭೂಕುಸಿತ ಪರಿಹಾರಕ್ಕೆ 2 ಕೋಟಿ ರೂ. ದೇಣಿಗೆ ಸರಕಾರಿ ಅಧಿಕಾರಿಗಳ ಬೇಜವಾಬ್ದಾರಿತನ: ಮೊಟ್ಟೆಗಾಗಿ ತಟ್ಟೆ ಹಿಡಿದು ಕುಳಿತ ವಿದ್ಯಾರ್ಥಿಗಳು! ಶಿರೂರು ಭೂಕುಸಿತದಲ್ಲಿ ನಾಪತ್ತೆಯಾಗಿದ್ದ ಟ್ರಕ್ ಜತೆಗೆ ಚಾಲಕ ಅರ್ಜುನ್ ಮೃತದೇಹ ಪತ್ತೆ: ಗಂಗಾವಳಿ… ಅನ್ನ ಹಾಕಿದ ಮನೆಗೆ ಕನ್ನ ಹಾಕಿದ ಖದೀಮ: ಬಾಳೆಹೊನ್ನೂರು ಪೊಲೀಸರಿಂದ ಬಂಧನ ತೀರ್ಥಹಳ್ಳಿಯಲ್ಲೂ ಶುರುವಾಗಿದೆ ಡಿಜಿಟಲ್ ವಂಚನೆ: ಹಣ ಟ್ರಾನ್ಸ್ಫರ್ ಮಾಡುವುದಾಗಿ ನಂಬಿಸಿ 5 ಸಾವಿರ… ನೈತಿಕ ಹೊಣೆ ಹೊತ್ತು ಮುಖ್ಯಮಂತ್ರಿ ತಕ್ಷಣ ರಾಜೀನಾಮೆ ನೀಡಲಿ: ಶಾಸಕ ಡಾ.ಭರತ್ ಶೆಟ್ಟಿ… ನ್ಯಾಯಾಲಯದ ತೀರ್ಪಿಗಾದರೂ ತಲೆಬಾಗಿ ಮುಖ್ಯಮಂತ್ರಿ ರಾಜೀನಾಮೆ ನೀಡಲಿ: ಶಾಸಕ ವೇದವ್ಯಾಸ ಕಾಮತ್ ಆಗ್ರಹ ಕೆಎಸ್ಸಾರ್ಟಿಸಿ: ಅಕ್ಟೋಬರ್ 3ರಿಂದ 12ರ ವರೆಗೆ ದಸರಾ ವಿಶೇಷ ಪ್ರವಾಸ ಪ್ಯಾಕೇಜ್ ಮಂಜಿನ ಮಧ್ಯೆ ಕಳೆದು ಹೋದ ಕೊಟ್ಟಿಗೆಹಾರ-ಚಾರ್ಮಾಡಿ ಘಾಟ್: ಹೆಡ್ಲೈಟ್-ಫಾಗ್ ಲೈಟ್ ಇಲ್ದೆ ಗಾಡಿ…

ಇತ್ತೀಚಿನ ಸುದ್ದಿ

ಪಿತೃ ಪಕ್ಷದ ಊಟಕ್ಕೆ ಮಾವನ ಮನೆಗೆ ಹೋಗಲು 112ಕ್ಕೆ ಕರೆ!!: ಗಲಾಟೆ ಎಂದು ಕರೆಸಿದ ವ್ಯಕ್ತಿ ನಿಜ ಹೇಳಿದಾಗ ದಂಗಾದ ಪೊಲೀಸರು!

27/09/2024, 14:35

ಸಂತೋಷ್ ಅತ್ತಿಗೆರೆ ಚಿಕ್ಕಮಗಳೂರು

info.reporterkarnataka@gmail.com

ಪಿತೃ ಪಕ್ಷದ ಊಟಕ್ಕೆ ಮಾವನ ಮನೆಗೆ ಹೋಗಲು ವ್ಯಕ್ತಿಯೊಬ್ಬರು ಪೊಲೀಸ್ ಜೀಪ್ ಕರೆಸಿಕೊಂಡ ಘಟನೆ
ಮೂಡಿಗೆರೆ ತಾಲೂಕಿನ ಕೊಟ್ಟಿಗೆಹಾರ ಸಮೀಪದ ತರುವೆ ಗ್ರಾಮದಲ್ಲಿ ನಡೆದಿದೆ.


ತರುವೆ ಗ್ರಾಮದ ಅಶೋಕ್ ಎಂಬವರು ಪೊಲೀಸರ
112 ಗೆ ಫೋನ್ ಮಾಡಿ, ‘ಸರ್… ಗಲಾಟೆ ಬೇಗ ಬನ್ನಿ’ ಅಂತ ಮನವಿ ಮಾಡಿದ್ದರು.
ಆದರೆ ಸ್ಥಳಕ್ಕೆ ಬಂದ ಪೊಲೀಸರಿಗೆ ಮಾವನ ಮನೆಗೆ ಡ್ರಾಪ್ ಮಾಡುವಂತೆ ಮನವಿ ಮಾಡಿದ್ದಾರೆ. ಗಾಡಿ ಯಾವು ಇಲ್ಲ… ಮಳೆ ಬೇರೆ, ಪಲ್ಗುಣಿ ಗ್ರಾಮಕ್ಕೆ ಡ್ರಾಪ್ ಮಾಡುವಂತೆ ಅವರು ರಿಕ್ವೆಸ್ಟ್ ಮಾಡಿದ್ದಾರೆ.
ಪೊಲೀಸರಿಗೆ ಒಂದು ಕ್ಷಣ ಅವಾಕ್ಕಾಗಿದ್ದಾರೆ. ಬೈಯ್ಯಬೇಕೋ… ನಗಬೇಕೋ… ತಿಳಿಯಲಿಲ್ಲ. ಕೊನೆಗೆ ಮಾವನ ಮನೆಗೆ ಊಟಕ್ಕೆ ಹೊರಟಿದ್ದ ಅಶೋಕ್ ಗೆ ಪೊಲೀಸರು ಬುದ್ದಿವಾದ ಹೇಳಿದರು. ಕೊನೆಗೆ ಪೊಲೀಸರು ಲಾರಿ ನಿಲ್ಲಿಸಿ ಆ ವ್ಯಕ್ತಿಯನ್ನ ಮಾವನ ಮನೆಗೆ ಕಳಿಸಿದರು.

ಇತ್ತೀಚಿನ ಸುದ್ದಿ

ಜಾಹೀರಾತು