ಇತ್ತೀಚಿನ ಸುದ್ದಿ
ಪಿಲಿಕುಳ ನಿಸರ್ಗಧಾಮ ಜು.14ರಿಂದ ಸಾರ್ವಜನಿಕ ವೀಕ್ಷಣೆಗೆ ಲಭ್ಯ: ಮಾಸ್ಕ್ , ಸಾಮಾಜಿಕ ಅಂತರ ಕಡ್ಡಾಯ
13/07/2021, 08:45
ಮಂಗಳೂರು (reporterkarnataka news): ಪಿಲಿಕುಳ ಅಭಿವೃದ್ದಿ ಪ್ರಾಧಿಕಾರ (ಡಾ. ಶಿವರಾಮ ಕಾರಂತ ಪಿಲಿಕುಳ ನಿಸರ್ಗಧಾಮ)ದ ಮೃಗಾಲಯ, ಲೇಕ್‍ಗಾರ್ಡನ್, ಹರ್ಬೇರಿಯಂ ಮತ್ತು ಬೊಟಾನಿಕಲ್ ಮ್ಯೂಸಿಯಂ, ಸಂಸ್ಕೃತಿ ಗ್ರಾಮ ಮತ್ತು ವಿಜ್ಞಾನಕೇಂದ್ರ ವಿಭಾಗಗಳನ್ನು (ತಾರಾಲಯ ಹೊರತುಪಡಿಸಿ) ಸಾರ್ವಜನಿಕರ ವೀಕ್ಷಣೆಗಾಗಿ 2021ರ ಜುಲೈ 14 ರಿಂದ ತೆರೆಯಲಾಗುತ್ತದೆ.
ಸರಕಾರದ ಆದೇಶದಂತೆ ವೀಕ್ಷಕರು ಕಡ್ಡಾಯವಾಗಿ ಸಾಮಾಜಿಕ ಅಂತರವನ್ನು ಕಾಯ್ದುಕೊಂಡು, ಮುಖಗವಸು (ಮಾಸ್ಕ್) ಧರಿಸಿ ವೀಕ್ಷಿಸಬಹುದು ಎಂದು ಪಿಲಿಕುಳ ಅಭಿವೃದ್ದಿ ಪ್ರಾಧಿಕಾರದ ಆಯುಕ್ತ ವೆಂಕಟೇಶ್.ಜಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.