ಇತ್ತೀಚಿನ ಸುದ್ದಿ
ಪಿಎಫ್ಐ ನಿಷೇಧ ವಿಧ್ವಂಸಕ ಕೃತ್ಯಗಳಲ್ಲಿ ತೊಡಗಿಕೊಳ್ಳುವವರಿಗೆ ಪಾಠ: ಪೇಜಾವರ ಶ್ರೀ
28/09/2022, 21:04

ಉಡುಪಿ(reporterkarnataka.com);
ಸಮಾಜ ದ್ರೋಹಿ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿರುವ ಪಿಎಫ್ಐ ಸಂಘಟನೆಯನ್ನು ನಿಷೇಧ ಮಾಡಿರುವುದು ತುಂಬಾ ನೆಮ್ಮದಿ ತಂದಿದೆ. ಇನ್ಮುಂದೆ ವಿದ್ವಂಸಕ ಕೃತ್ಯಗಳಲ್ಲಿ ತೊಡಗಿಕೊಳ್ಳುವವರಿಗೆ ಇದು ಪಾಠವಾಗಬೇಕು ಎಂದು ಪೇಜಾವರ ಮಠದ ವಿಶ್ವಪ್ರಸನ್ನತೀರ್ಥ ಸ್ವಾಮೀಜಿ ಹೇಳಿದ್ದಾರೆ.
ನಗರದಲ್ಲಿ ಇಂದು ಮಾತನಾಡಿದ ಅವರು, ಸಮಾಜದಲ್ಲಿ ಮುಂದೆ ಯಾರೂ ಕೂಡಾ ವಿಧ್ವಂಸಕ ಕೃತ್ಯ, ಸಮಾಜ ವಿರೋಧಿ ಚಟುವಟಿಕೆ ಗಳನ್ನು ಮಾಡಬಾರದು. ಸರಕಾರವೂ ಕೂಡಾ ಕಾಲ ಕಾಲಕ್ಕೆ ಈ ಬಗ್ಗೆ ಜಾಗೃತಿ ವಹಿಸಿ ಇಂತಹ ಶಕ್ತಿಗಳು ಮರುಹುಟ್ಟು ಪಡೆಯದಂತೆ ಮುನ್ನೆಚ್ಚರಿಕೆ ವಹಿಸಬೇಕು ಎಂದರು.