6:07 AM Wednesday27 - November 2024
ಬ್ರೇಕಿಂಗ್ ನ್ಯೂಸ್
ತೀರ್ಥಹಳ್ಳಿ ತುಂಗಾ ಕಮಾನು ಸೇತುವೆ ಕೆಳಗೆ ಅಸ್ತಿ ಪಂಜರ ಪತ್ತೆ: ತನಿಖೆ ಆರಂಭ ಕಳೆದ ಬಾರಿ ಅರ್ಧಂಬರ್ಧ ಸುಣ್ಣಬಣ್ಣ ಕಂಡ ತುಂಗಾ ಕಮಾನು ಸೇತುವೆಗೆ ಈ ಬಾರಿ… ಅಟಲ್ ಜೀ ಜನಸ್ನೇಹಿ ಕೇಂದ್ರ ಯೋಜನೆಯಲ್ಲಿ ಕೋಲಾರ ಪ್ರಥಮ: ಜಿಲ್ಲಾಧಿಕಾರಿ ಅಕ್ರಂ ಪಾಷಾಗೆ… ಚನ್ನಪಟ್ಟಣದಲ್ಲಿ ಸೋಲು: ನಿಖಿಲ್ ಕುಮಾರಸ್ವಾಮಿಗೆ ರಕ್ತದಲ್ಲಿ ಪತ್ರ ಬರೆದು ಧೈರ್ಯ ತುಂಬಿದ ಕಾರ್ಯಕರ್ತ! ಮೂಡಿಗೆರೆ: ಬೆಂಕಿ ಆಕಸ್ಮಿಕದಲ್ಲಿ ಗುಡಿಸಲು ಸಂಪೂರ್ಣ ಭಸ್ಮ; ಬೀದಿಗೆ ಬಿದ್ದ ಬಡ ಕುಟುಂಬ ರಾಜ್ಯ ವಿಧಾನಸಭೆಯ 3 ಕ್ಷೇತ್ರಗಳ ಉಪ ಚುನಾವಣೆ; ಕಾಂಗ್ರೆಸ್ ಭರ್ಜರಿ ಜಯ; ಕೇಸರಿ… ಸಂಡೂರಿನಲ್ಲಿ ಕಾಂಗ್ರೆಸ್‌ ಅಭ್ಯರ್ಥಿ ಅನ್ನಪೂರ್ಣಗೆ ಜಯ: ಬಿಜೆಪಿ ಮೈತ್ರಿಕೂಟಕ್ಕೆ ತೀವ್ರ ಮುಖಭಂಗ ​ ಮಹಾರಾಷ್ಟ್ರ: ಆಡಳಿತಾರೂಢ ಬಿಜೆಪಿ ನೇತೃತ್ವದ ಮಹಾಯುತಿ ಮೈತ್ರಿಕೂಟ ಮತ್ತೆ ಅಧಿಕಾರಕ್ಕೆ? ಆರೆಸ್ಸೆಸ್ ಮುಖ್ಯಸ್ಥ ಡಾ. ಭಾಗವತ್ ಡಿ. 7ರಂದು ಕಲ್ಲಡ್ಕಕ್ಕೆ: ಶ್ರೀರಾಮ ವಿದ್ಯಾಕೇಂದ್ರ ಕ್ರೀಡೋತ್ಸವದಲ್ಲಿ… ಬೆಂಗಳೂರು ಮತ್ತು ಚೆನ್ನೈಗೆ ಆಸ್ಟ್ರೇಲಿಯನ್ ಡಿಜಿಟೆಕ್ ಟ್ರೇಡ್ ಮಿಷನ್ ಭೇಟಿ

ಇತ್ತೀಚಿನ ಸುದ್ದಿ

ಪೆಟ್ರೋಲ್, ಡೀಸೆಲ್ ಖರೀದಿಯಲ್ಲಿ ರೇಷನಿಂಗ್:  ಪ್ರತಿಪಕ್ಷದ ಉಪ ನಾಯಕ ಯು.ಟಿ. ಖಾದರ್ ಕಳವಳ

24/05/2022, 07:23

ಮಂಗಳೂರು(reporterkarnataka.com):ದೇಶದಲ್ಲಿ ಮೊದಲ ಬಾರಿಗೆ ಪೆಟ್ರೋಲ್ ಮತ್ತು ಡೀಸೆಲ್ ಖರೀದಿಯಲ್ಲಿ ರೇಷನಿಂಗ್ ಪ್ರಾರಂಭವಾಗಿದ್ದು, ಮುಂದಿನ ದಿನಗಳಲ್ಲಿ ಶ್ರೀಲಂಕಾ ಮಾದರಿನ್ನು ತಲುಪುವ ಸಾಧ್ಯತೆ ಇದೆ ಎಂದು ವಿಧಾನಸಭೆ ಪ್ರತಿಪಕ್ಷದ ಉಪ ನಾಯಕ ಯು.ಟಿ. ಖಾದರ್ ಕಳವಳ ವ್ಯಕ್ತಪಡಿಸಿದರು.

ಅವರು ನಗರದ ಕಾಂಗ್ರೆಸ್ ಭವನದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.

ಪೆಟ್ರೋಲಿಯಂ ಕಂಪೆನಿಗಳು ಪೆಟ್ರೋಲ್ ಬಂಕ್‌ಗಳಿಗೆ ಸಮರ್ಪಕವಾಗಿ ಪೆಟ್ರೋಲ್, ಡೀಸೆಲ್ ಅನ್ನು ಪೂರೈಸಲು ಸಾಧ್ಯವಾಗುತ್ತಿಲ್ಲ. ೨ ಟ್ಯಾಂಕ್ ಕೇಲಿದಲ್ಲಿ ಒಂದು ಟ್ಯಾಂಕ್, ಪ್ರತೀ ದಿನ ಕೇಳಿದರೂ ೨ ದಿನಗಳಿಗೊಮ್ಮೆ ನೀಡುತ್ತಿದ್ದು, ಪೆಟ್ರೋಲಿಯಂ ಕಂಪೆನಿಗಳು ರೇಷನಿಂಗ್ ಪ್ರಾರಂಭಿಸಿದಂತಾಗಿದ್ದು, ಇದಕ್ಕೆ ಸರ್ಕಾರದ ವೈಫಲ್ಯವೇ ನೇರ ಕಾರಣ ಎಂದು ಆರೋಪಿಸಿದರು.

ಪ್ರತೀ ಪೆಟ್ರೋಲ್ ಬಂಕ್‌ನವರು ಒಂದು ಲೀಟರ್‌ಗೆ ೨೦ ರೂ. ನಷ್ಠವನ್ನು ಅನುಭವಿಸುತ್ತಿದ್ದು, ಪೆಟ್ರೋಲ್ ಡೀಸೆಲ್ ಮೇಲೆ ಶೇ.೩೦ ತೆರಿಗೆ ವಿಧಿಸಿ ಶೋಷಣೆಗೊಳಪಡಿಸಿದ್ದಾರೆ. ಮನಮೋಹನ್ ಸಿಂಗ್ ಅವರು ಪ್ರಧಾನಿಯಾಗಿದ್ದ ಸಂದರ್ಭದಲ್ಲಿ ಶೇ.೩-೯ ತೆರಿಗೆ ಇದ್ದು, ಜನರಿಗೆ ಹೊರೆಯಾಗಬಾರದು ಎಂಬ ಕಾರಣಕ್ಕೆ ಪೆಟ್ರೋಲಿಯಂ ಕಂಪೆನಿಗಳಿಗೆ ಸಬ್ಸಿಡಿ ನೀಡಿ ಯಾವುದೇ ತೊಂದರೆಯಾಗದಂತೆ ನೋಡಿಕೊಂಡಿದ್ದರು. ಆದರೆ ಬಿಜೆಪಿ ಸರ್ಕಾರ ಬಂದ ನಂತರ ಕ್ರೂಡ್ ಆಯಿಲ್ ೩೦-೪೦ ರೂ. ಸಿಗುವ ಸಂದರ್ಭದಲ್ಲಿ ಕೂಡ ಶೇ.೩೦ ತೆರಿಗೆ ಹೇರಿದ್ದು, ಈಗ ಕ್ರೂಡ್ ಆಯಿಲ್‌ಗೆ ಬ್ಯಾರಲ್‌ಗೆ ೧೨೦-೧೩೦ ರೂ. ಆಗಿರುವಾಗ ಸುಲಿಗೆ ಮಾಡಲು ಹೊರಟಿದ್ದು, ಈಗಾಗಲೇ ಅನೇಕ ಖಾಸಗಿ ಬಂಕ್‌ಗಳು ಮುಚಿದ್ದು, ಮುಂದಿನ ದಿನಗಳಲ್ಲಿ ಸರ್ಕಾರಿ ಸೌಮ್ಯದಲ್ಲಿರುವ ಬಂಕ್‌ಗಳು ಕೂಡ ಮುಚ್ಚಬೇಕಾದ ಸನ್ನಿವೇಶ ಎದುರಾಗಬಾರದು ಎಂದು ಟೀಕಿಸಿದರು.

ಈಗ ಏಕಾಏಕಿ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಯನ್ನು ಇಳಿಸಿದ್ದು, ಇದರಲ್ಲಿ ಯಾವುದೇ ದೂರ ದೃಷ್ಠಿ ಕಾಣುತ್ತಿಲ್ಲ. ಕಳೆದ ಬಾರಿ ಪಂಚ ರಾಜ್ಯ ಚುನಾವಣೆಯಲ್ಲಿ ಬೆಲೆ ಇಳಿಸಿ ಮತ್ತೆ ಹೆಚ್ಚಿಸಿದರು ಈಗ ಗುಜರಾತ್ ಹಾಗೂ ಹಿಮಾಚಲ ಪ್ರದೇಶದಲ್ಲಿ ಚುನಾವಣೆ ಬರಲಿದ್ದು ಈಗ ಬೆಲೆ ಕಡಿಮೆ ಮಾಡಿದ್ದು, ಚುನಾವಣೆಯ ನಂತರ ಮತ್ತೆ ಬೆಲೆ ಹೆಚ್ಚಿಸಲಿದ್ದಾರೆ. ಇದು ಜನರಿಗೆ ಬೇಕಾಗಿ ಮಾಡಿರುವುದಲ್ಲ, ಕಂಪೆನಿಯನ ನಿಯಮವನ್ನು ಬುಡಮೇಲು ಮಾಡಲು ಹೊರಟಿರುವುದು ಎಂದರು.

ಪ್ರಮುಖರಾದ ಸದಾಶಿವ ಉಳ್ಳಾಲ್, ಇಬ್ರಾಹಿಂ ಕೋಡಿಜಾಲ್, ಮೊಹಮದ್ ಮೋನು, ಕಲಾವತಿ, ಮೊಹಮದ್ ಕುಂಜತ್‌ಬೈಲ್ ಇದ್ದರು.

ಇತ್ತೀಚಿನ ಸುದ್ದಿ

ಜಾಹೀರಾತು