ಇತ್ತೀಚಿನ ಸುದ್ದಿ
ಪೆರುವಾಯಿ: 4 ದನಗಳ ಕಳವು ಪ್ರಕರಣ: ಆರೋಪಿಯ ಬಂಧನ
09/01/2026, 21:36
ಬಂಟ್ವಾಳ(reporterkarnataka.com): ಪೆರುವಾಯಿ ಗ್ರಾಮದ ಸೊಸೈಟಿ ಆವರಣದಿಂದ ಹುಲ್ಲು ಮೇಯಲು ಹೋಗಿದ್ದ 4 ದನಗಳ ಕಳ್ಳತನ ನಡೆಸಿದ ಪ್ರಕರಣ ಸಂಬಂಧಿಸಿದಂತೆ ಓರ್ವ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ.
ಕಳೆದ ಡಿಸೆಂಬರ್ 18ರಂದು ವಿಟ್ಲ ಪೊಲೀಸ್ ಠಾಣಾ ವ್ಯಾಪ್ತಿಯ ಬಂಟ್ವಾಳ ತಾಲೂಕು ಪೆರುವಾಯಿ ಗ್ರಾಮದ ಸೊಸೈಟಿ ಆವರಣದಿಂದ ಹುಲ್ಲು ಮೇಯಲು ಹೋಗಿದ್ದ ಗಣೇಶ ರೈ ಹಾಗೂ ನಾರಾಯಣ ನಾಯ್ಕ ಎಂಬುವವರ ಒಟ್ಟು 4 ದನಗಳು ಕಳ್ಳತನವಾಗಿದ್ದರ ಬಗ್ಗೆ ಗಣೇಶ ರೈ ಎಂಬುವವರು ನೀಡಿದ ದೂರಿನಂತೆ ವಿಟ್ಲ ಪೊಲೀಸ್ ಠಾಣಾ ಅ.ಕ್ರ 169/2025 ರಂತೆ ದೂರು ದಾಖಲಾಗಿತ್ತು. ಜನವರಿ 8ರಂದು ಪ್ರಕರಣದ ಆರೋಪಿಯಾದ ಉಳ್ಳಾಲ ಗ್ರಾಮ ಕೋಡಿಯ
ಝುಲ್ಫಾನ್ ಮಾಲಿಕ್ ಉಳ್ಳಾಲ್ (30) ಎಂಬಾತನನ್ನು ಪೊಲೀದರು ದಸ್ತಗಿರಿ ಮಾಡಿದ್ದಾರೆ. ಆರೋಪಿಯನ್ನು ನ್ಯಾಯಾಲಯಕ್ಕೆ ಹಾಜರು ಪಡಿಸಲಾಗಿದ್ದು, ಪೊಲೀಸ್ ಕಸ್ಟಡಿ ವಿಧಿಸಲಾಗಿದೆ.













