ಇತ್ತೀಚಿನ ಸುದ್ದಿ
ಪೆರಿಯಡ್ಕದ ಇತ್ತಿಫಾಕುಲ್ ಮುಸ್ಲಿಮೀನ್ ವೆಲ್ಫೇರ್ ಅಸೋಸಿಯೇಷನ್ ನಿಂದ ರಸ್ತೆ ದುರಸ್ತಿ: ಸಾರ್ವಜನಿಕರಿಂದ ಶ್ಲಾಘನೆ
14/07/2024, 14:16
ಉಪ್ಪಿನಂಗಡಿ(reporterkarnataka.com): ಕಳೆದ ಕೆಲ ದಿನಗಳಿಂದ ಸುರಿದ ಭಾರೀ ಮಳೆಯಿಂದಾಗಿ ಉಪ್ಪಿನಂಗಡಿ- ಕಡಬ- ಸುಬ್ರಹ್ಮಣ್ಯ ರಾಜ್ಯರಸ್ತೆ ಯಲ್ಲಿ ಹೊಂಡಗಳು ಸೃಷ್ಟಿಯಾಗಿದ್ದು, ವಾಹನ ಸವಾರರಿಗೆ ಕಷ್ಟವಾಗಿ ಹಲವು ಅಫಘಾತಗಖಾಗುತ್ತಿತ್ತು. ಇದನ್ನು ಮನಗಂಡ ಇತ್ತಿಫಾಕುಲ್ ಮುಸ್ಲಿಮೀನ್ ವೆಲ್ಫೇರ್ ಅಸೋಸಿಯೇಷನ್(IMWA) ಪೆರಿಯಡ್ಕ ಇದರ ವತಿಯಿಂದ ಶ್ರಮಧಾನದ ಮೂಲಕ ಹೊಂಡಗಳನ್ನು ಮುಚ್ಚಿ ತಾತ್ಕಾಲಿಕ ರಸ್ತೆ ದುರಸ್ತಿಗೊಳಿಸಲಾಯಿತು.


ಇವರ ಈ ಸೇವೆಗೆ ಸಾರ್ವಜನಿಕರಿಂದ ಪ್ರಶಂಸೆ ಲಭಿಸಿತು.
ಈ ಸಂದರ್ಭದಲ್ಲಿ imwa ಅಧ್ಯಕ್ಷ ಗಫೂರ್ ಪೆರಿಯಡ್ಕ, ಉಪ್ಪಿನಂಗಡಿ ಗ್ರಾಮ ಪಂಚಾಯತ್ ಸದಸ್ಯರಾದ ಮೈಸೀದ್ ಇಬ್ರಾಹೀಂ, imwa ಸದಸ್ಯರಾದ ಆರೀಫ್ ಪೆರಿಯಡ್ಕ, ಸಂಶುದ್ದೀನ್, ಮುಸ್ತಫಾ, ಸಫೀಕ್, ನೌಷಾದ್ ಹಾಗೂ ಇತರರು ಉಪಸ್ತಿತರಿದ್ದರು.














