ಇತ್ತೀಚಿನ ಸುದ್ದಿ
ಪೆರಾಜೆ ಮಠದಲ್ಲಿ ಉಪ್ಪಿನಂಗಡಿ ವಲಯ ವಿದ್ಯಾರ್ಥಿ ಯುವ ಪ್ರತಿಭಾ ಪ್ರದರ್ಶನ, ಕ್ರೀಡೋತ್ಸವ
07/11/2024, 10:53
ಬಂಟ್ವಾಳ(reporterkarnataka.com): ಉಪ್ಪಿನಂಗಡಿ ವಲಯ ವಿದ್ಯಾರ್ಥಿ ಯುವ ಪ್ರತಿಭಾ ಪ್ರದರ್ಶನ ಮತ್ತು ಕ್ರೀಡೋತ್ಸವ ಪೆರಾಜೆ ಮಾಣಿ ಮಠದಲ್ಲಿ ಜರುಗಿತು.
ಉಪ್ಪಿನಂಗಡಿ ಹವ್ಯಕ ಮಂಡಲ ಗುರಿಕ್ಕಾರ ಶಂಕರ ಭಟ್ ಬಲ್ಯ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಇಂದು ಜಾತಿ ಮತಗಳ ವೈಭವೀಕರಣವಾಗುತ್ತಿದ್ದು, ನಮ್ಮ ಅಸ್ತಿತ್ವಕ್ಕಾಗಿ ಸಂಘಟಿತರಾಗುವುದು ಅನಿವಾರ್ಯವಾಗಿದೆ. ಸಂಘಟನೆಗಾಗಿ ಕ್ರೀಡಾಕೂಟ ಏರ್ಪಡಿಸಲಾಗಿದೆ ಎಂದರು. ಬಾಲಸುಬ್ರಹ್ಮಣ್ಯ ಭಟ್ ಸರ್ಪಮೂಲೆ ಮಾತನಾಡಿ, ವೈದಿಕ, ಧಾರ್ಮಿಕ, ಶಿಕ್ಷಕ ಹಾಗೂ ಮಾತೆಯರ ಸಮಾವೇಶಗಳು ಯಶಸ್ವಿಯಾಗಿ ನಡೆದಿದೆ. ವಿದ್ಯಾರ್ಥಿ ಯುವಕರ ಒಗ್ಗೂಡಿಸಲು ಕಾರ್ಯಕ್ರಮ ನಡೆಯುತ್ತಿದೆ ಎಂದರು.
ಕೇಶವ ಪ್ರಕಾಶ ಎಂ.ಶುಭಹಾರೈಸಿದರು. ಪ್ರತಿಭಾನ್ವಿತ ವಿದ್ಯಾರ್ಥಿಗಳು ಹಾಗೂ ಬೆಳ್ತಂಗಡಿ ಶ್ರೀಭಾರತಿ ಉರ್ವಾಲು ಶಾಲೆಯ ವಿದ್ಯಾರ್ಥಿಗಳನ್ನು ಸ್ಮರಣಿಕೆ ನೀಡಿ ಪುರಸ್ಕರಿಸಲಾಯಿತು.
ಹಾರಕೆರೆ ನಾರಾಯಣ ಭಟ್, ಶೈಲಜಾ ಭಟ್ ಕೆ.ಟಿ. ಮತ್ತಿತರರು ಉಪಸ್ಥಿತರಿದ್ದರು.
ಮಹೇಶ ಸ್ವಾಗತಿಸಿದರು.ಅವನೀಶ ಪೆರಿಯಡ್ಕ ನಿರೂಪಿಸಿ ವಂದಿಸಿದರು. ಬಳಿಕ ಮಠದಲ್ಲಿ ಹಿರಿಯರಿಂದ ರುದ್ರ ಪಠಣ ನಡೆಯಿತು.ವಿದ್ಯಾರ್ಥಿಗಳ ಬೌದ್ಧಿಕ ಸ್ಪರ್ಧೆಗಳು,ಹೊರಾಂಗಣ ಮತ್ತು ಒಳಾಂಗಣ ಕ್ರೀಡೆಗಳು ಜರಗಿತು.