ಇತ್ತೀಚಿನ ಸುದ್ದಿ
ಸೇನೆಯಲ್ಲಿ 15 ವರ್ಷಕ್ಕಿಂತ ಕಡಿಮೆ ಸೇವೆ ಸಲ್ಲಿಸಿದವರಿಗೂ ಪಿಂಚಣಿ ಸೌಲಭ್ಯ
23/11/2025, 17:16
ಗಿರಿಧರ್ ಕೊಂಪುಳಿರ ಮಡಿಕೇರಿ
info.reporterkarnataka@gmail.com
ಸುಮಾರು15 ವರ್ಷಕ್ಕಿಂತ ಕಡಿಮೆ ಸೇನೆಯಲ್ಲಿ ಸೇವೆ ಸಲ್ಲಿಸಿ ಸೈನಿಕ ಪಿಂಚಣಿ ವಂಚಿತರಾದವರಿಗೂ ‘ಪಿಂಚಣಿ ಸೌಲಭ್ಯವಿದ್ದು, ಇದನ್ನು ಪಡೆದುಕೊಳ್ಳುವಂತೆ ಅಖಿಲ ಮಾಜಿ ಸೈನಿಕರ ಕರ್ನಾಟಕ ಮಾಜಿ ಸೈನಿಕರ ಸಂಘದ ಕೊಡಗು ಘಟಕದ ಗೌರವಾಧ್ಯಕ್ಷ ಕೊಟ್ಟುಕತ್ತಿರ ಸೋಮಣ್ಣ ತಿಳಿಸಿದ್ದಾರೆ.
ಇಂದಿಗೂ ಪಿಂಚಣಿ ಸೌಲಭ್ಯ ಇಲ್ಲದ ಹದಿನೈದು ವರ್ಷಕ್ಕಿಂತ ಕಡಿಮೆ ಸೇವೆ ಸಲ್ಲಿಸಿದ ಮಾಜಿ ಸೈನಿಕರು ಇಲ್ಲವೆ ವಿಧವೆಯರು ಈ ಸೌಲಭ್ಯವನ್ನು ಹೊಂದಿಕೊಳ್ಳಲು ಅವಕಾಶವಿದೆ. ಈ ಪಿಂಚಣಿ ಯೋಜನೆಯಡಿ 8 ಸಾವಿರ ರೂ. ಮಾಸಿಕ ಪಡೆಯಲು ಅವಕಾಶವಿದೆ,” ಎಂದು ತಿಳಿಸಿದರು. ”ಯೋಜನೆಯಡಿ ಸೌಲಭ್ಯ ಪಡೆಯಲು ಬಯಸುವವರ ಆದಾಯ ವಾರ್ಷಿಕ 80 ಸಾವಿರ ರೂ. ಒಳಗಿರಬೇಕು ಮತ್ತು 4 ಎಕರೆಗಿಂತ ಹೆಚ್ಚಿನ ಜಮೀನು ಹೊಂದಿರಬಾರದೆನ್ನುವ ನಿಯಮವಿದೆ. ಹದಿನೈದು ವರ್ಷ ಕ್ಕಿಂತ ಕಡಿಮೆ ಸೇನೆಯಲ್ಲಿ ಸೇವೆ ಸಲ್ಲಿಸಿ ನಿವೃತ್ತರಾಗಿ ಸೈನ್ಯದ ಪಿಂಚಣಿ ಯಿಂದ ವಂಚಿತರಾಗಿರುವವರು ಸೈನಿಕ ಬೋರ್ಡ್ ಮೂಲಕ ಪಿಂಚಣಿ ಸೌಲಭ್ಯ ಪಡೆಯಲು ಅವಕಾಶವಿದೆ. ಇದಕ್ಕಾಗಿ ಅಸಕ್ತರು ಡಿಸ್ಟಾರ್ಜ್ ಸರ್ಟಿಫಿಕೇಟ್, ಸೈನಿಕ ಬೋರ್ಡ್ ಐಡಿ ಕಾರ್ಡ್, ಆಧಾರ್, ಪ್ಯಾನ್, ಅದಾಯ ದೃಢೀಕರಣ ಪತ್ರ ದಾಖಲಾತಿಗಳೊಂದಿಗೆ ಸೈನಿಕ ಬೋರ್ಡ್ ಸಂಪರ್ಕಿಸಬಹುದು. ಮಾಹಿತಿಗಾಗಿ ತನ್ನ ಮೊ. 9448447158 ಅನ್ನು ಸಂಪರ್ಕಿಸಬಹುದು,” ಎಂದು ತಿಳಿಸಿದರು. ಮಾಹಿತಿಯ ಕೊರತೆ: ಈ ಪಿಂಚಣಿ ಹಿಂದಿನಿಂದಲೂ ಜಾರಿಯಲ್ಲಿದ್ದರು ಬಹಳಷ್ಟು ಮಾಜಿ ಸೈನಿಕರಿಗೆ ಇದರ ಕುರಿತಾದ ಮಾಹಿತಿ ಇಲ್ಲದೆ, ಪಿಂಚಣಿಯಿಂದ ವಂಚಿತರಾಗಿದ್ದಾರೆ. ಇನ್ನಾದರು ಇದರ ಸೌಲಭ್ಯ ಹೊಂದಿಕೊಳ್ಳಬೇಕು,” ಎಂದು ಮನವಿ ಮಾಡಿದರು. ಕಡುಬಡವರಿಗೆ ನೆರವು: ಸೈನಿಕ ಪಿಂಚಣಿ ಸೌಲಭ್ಯವನ್ನು ಪಡೆಯುತ್ತಿರುವ ಕಡುಬಡವರಾದ ಮಾಜಿ ಸೈನಿಕರ ಮಕ್ಕಳು ವೈದ್ಯಕೀಯ, ಎಂಜಿನಿಯರಿಂಗ್ ವ್ಯಾಸಂಗ ಮಾಡುತ್ತಿದ್ದಲ್ಲಿ, ಅವರಿಗೆ ಗದಗ್‌ನ ದೇವಪ್ರಭು ಎಂಬುವವರು ಧನ ಸಹಾಯ ಮಾಡಲಿದ್ದಾರೆ. ಈ ಹಿನ್ನೆಲೆಯಲ್ಲಿ ಧನ ಸಹಾಯ ಬಯಸುವ ಕಡುಬಡವರಾದ ಮಾಜಿ ಸೈನಿಕರು ಮೊ. 8660737534 ಅನ್ನು ಸಂಪರ್ಕಿಸಬಹುದು,” ಎಂದು ತಿಳಿಸಿದ್ದಾರೆ.












