9:23 PM Wednesday14 - January 2026
ಬ್ರೇಕಿಂಗ್ ನ್ಯೂಸ್
ಮನರೇಗಾ ಬಚಾವ್ ಸಂಗ್ರಾಮ: ಸ್ಥಳೀಯ ಸಂಸ್ಥೆಗಳ ಚುನಾವಣೆ ಪೂರ್ವಸಿದ್ದತಾ ಸಭೆ ಜಿ ರಾಮ್ ಜಿ ಬಗ್ಗೆ ಕಾಂಗ್ರೆಸ್ ಸುಳ್ಳು ಸಂಕಥನ: ಕೇಂದ್ರ ಸಚಿವ ಎಚ್.ಡಿ.… ಕಾರ್ಯಾಂಗ, ಶಾಸಕಾಂಗ, ನ್ಯಾಯಾಂಗ ಸಮನ್ವಯತೆಯಿಂದ ಕೆಲಸ ಮಾಡಿದಾಗ ಮಾತ್ರ ಸುಖಿ ರಾಜ್ಯ ಸ್ಥಾಪನೆ… ಕಿಂಗ್ ಸಿಗರೇಟ್: ಎಂಆರ್‌ಪಿ ₹170 ಇದ್ದರೂ ₹250ಕ್ಕೆ ಮಾರಾಟ; ನಿಯಂತ್ರಣವಿಲ್ಲದ ದರ; ಗ್ರಾಹಕರ… ಒಣಗಿದ್ದ ಸಿಪ್ಪೆ ಸಾಗಿಸುತ್ತಿದ್ದ ಲಾರಿ ಬೆಂಕಿಗಾಹುತಿ: ಮೈಸೂರಿನಿಂದ ಮಂಗಳೂರಿಗೆ ಹೋಗುತ್ತಿದ್ದ ವಾಹನ ಕೇರಳ ಸರ್ಕಾರದಿಂದ ಭಾಷಾ ಸ್ವಾತಂತ್ರ್ಯದ ಉಲ್ಲಂಘನೆ: ಸಚಿವ ಶಿವರಾಜ್ ‌ತಂಗಡಗಿ ಪ್ರಹ್ಲಾದ್ ಜೋಶಿ ಅವರಿಗೆ ನ್ಯಾಷನಲ್ ಹೆರಾಲ್ಡ್ ಪತ್ರಿಕೆ ಇತಿಹಾಸ ಗೊತ್ತಿಲ್ಲ: ಡಿಸಿಎಂ ಡಿ.ಕೆ.… ನಿಷ್ಕ್ರಿಯ ಪತ್ರಿಕೆಗಾಗಿ ರಾಜ್ಯದ ಖಜಾನೆ ಲೂಟಿ ಮಾಡಿದ ಕಾಂಗ್ರೆಸ್ ಸರ್ಕಾರ: ಕೇಂದ್ರ ಸಚಿವ… ವಿಮಾನದಲ್ಲಿ ಶೈಕ್ಷಣಿಕ ಪ್ರವಾಸ: ಖಾಸಗಿ ಶಾಲೆಗಳಿಗೆ ಸೆಡ್ಡು ಹೊಡೆದು ನಿಂತ ಮುತ್ತಿಗೆಪುರ ಸರಕಾರಿ… ಅಕ್ರಮ ಗಾಂಜಾ ಮಾರಾಟ: ಅಸ್ಸಾಂ ಮೂಲದ ಇಬ್ಬರು ಆರೋಪಿಗಳ ಬಂಧನ

ಇತ್ತೀಚಿನ ಸುದ್ದಿ

ಪೌರಕಾರ್ಮಿಕರ ರಾಜ್ಯಾಧ್ಯಕ್ಷರಾಗಿ ಕೆ.ಪ್ರಭಾಕರ ಆಯ್ಕೆ: ಕೂಡ್ಲಿಗಿ ನಾಗರೀಕರಿಂದ ಅಭಿನಂದನೆ 

14/06/2022, 20:50

ವಿ.ಜಿ.ವೃಷಭೇಂದ್ರ ಕೂಡ್ಲಿಗಿ ವಿಜಯನಗರ

info.reporterkarnataka@gmail.com

ವಿಜಯನಗರ ಜಿಲ್ಲೆ ಕೂಡ್ಲಿಗಿ ಪಟ್ಟಣದ ಪ್ರವಾಸಿ ಮಂದಿರದಲ್ಲಿ, ಇತ್ತಿಚೆಗಷ್ಟೆ ಕರಾಪೌಸೇ ನೌಕರರ ಸಂಘದ ರಾಜ್ಯಾಧ್ಯಕ್ಷರಾಗಿ ಆಯ್ಕೆಯಾಗಿರುವ. ಕೂಡ್ಲಿಗಿಯ  ಕೆ.ಪ್ರಭಾಕರ ರವರನ್ನು ಅವರ ಸ್ನೇಹಿತರು, ಹಿತೈಷಿಗಳು, ಸಮಾಜದ ಹಿರಿಯರು ಹಾಗೂ ಯುವಕರು, ಕೆ.ಪ್ರಭಾಕರವರಿಗೆ ಸನ್ಮಾನಿಸಿದರು ಮತ್ತು ಸಿಹಿ ತಿನಿಸು ಮೂಲಕ ಅವರನ್ನು ಅಭಿನಂದಿಸಿದರು. 


ಯುವಕರು ನೆರೆದವರೆಲ್ಲರಿಗೂ ಸಿಹಿ ಹಂಚಿ ಸಂಭ್ರಮಿಸಿದರು, ಈ ಸಂದರ್ಭದಲ್ಲಿ ಮಾತನಾಡಿದ ಪತ್ರಕರ್ತ, ದಲಿತ ಯುವ ಮುಖಂಡ, ಹೋರಾಟಗಾರರಾದ  ಸಾಲುಮನಿ ರಾಘವೇಂದ್ರ ಪ್ರಭಾಕರರನ್ನು ಅಭಿನಂದಿಸಿ ಮಾತನಾಡಿದರು, ಕೂಡ್ಲಿಗಿ ಪಟ್ಟಣದ ದಲಿತ ಸಮುದಾಯದ ಕಡುಬಡತನದಿಂದ. ಹೊರಹೊಮ್ಮಿರುವ ರಾಜ್ಯದ ಯುವ ದುರೀಣರಾಗಿದ್ದಾರೆ. ಅವರು ಕರ್ನಾಟಕ ರಾಜ್ಯದ ಪೌರ ನೌಕರರ ಸಂಘಕ್ಕೆ ರಾಜ್ಯಾಧ್ಯಕ್ಷರಾಗಿ ಅವಿರೋಧವಾಗಿ ಆಯ್ಕೆ ಆಗಿರುವುದು ಹೆಮ್ಮೆಯ ಸಂಗತಿಯಾಗಿದೆ.ದಲಿತ ಸಮುದಾಯ ಮಾತ್ರವಲ್ಲ,ಕೂಡ್ಲಿಗಿ ತಾಲೂಕಿನ ಸಮಸ್ತ ಜನತೆಯಲ್ಲಿ ಹರ್ಷವನ್ನುಂಟು ಮಾಡಿದೆ ಎಂದರು.

ಅಭಿನಂದನೆಗಳನ್ನು ಸ್ವೀಕರಿಸಿದ ರಾಜ್ಯಾಧ್ಯಾಕ್ಷ ಕೆ.ಪ್ರಭಾಕರ್ ಮಾತನಾಡಿ, ಕರ್ನಾಟಕ ರಾಜ್ಯದ ಪೌರ ನೌಕರರ ಸಂಘದ ರಾಜ್ಯಾಧ್ಯಕ್ಷನಾಗಿ ಆಯ್ಕೆ ಮಾಡಿರುವಂತಹ, ಮಾಜಿ ರಾಜ್ಯಾಧ್ಯಕ್ಷರಾದ ಗೌರವಾನ್ವಿತ  ಜಿ.ಎಸ್.ಮಂಜುನಾಥ, ಹಿರಿಯ ಮುಖಂಡರಾದ ಎಲ್. ನಾರಾಯಣಾಚಾರ್ಯ, ಜೆ.ಟಿ. ಹನುಮಂತರಾಜು,ಚಂದ್ರಶೇಖರ್, ಜನ್ಮೋ ಜಿ ರಾವ್ , ಕುಳ್ಳೆಗೌಡ , ಗೋಪಾಲಕೃಷ್ಣ  ,ವೆಂಕಟೇಶ, ಗುರುನಾಥ ,ಮಾಯಣ್ಣ ಸೇರಿದಂತೆ  ಸಮಸ್ತ ಸಂಘಟನೆಯ ರಾಜ್ಯ ಪಧಾದಿಕಾರಿಗಳು ಹಾಗೂ ಸರ್ವರ ಸದಸ್ಯರಿಗೆ ಅಭಿನಂದಿಸುವೆ. ನನ್ನ ಏಳ್ಗೆಗೆ ಕಾರಣರಾದ ನನ್ನ ಗುರುಗಳಿಗೆ  ಸ್ನೇಹಿತರೆಲ್ಲರಿಗೂ,ರಾಜ್ಯದ ಸಮಸ್ತ ಪೌರ ಸೇವ ನೌಕರರಿಗೆ ಹಾಗೂ ನನ್ನ ಒಡನಾಡಿಗಳಿಗೆ, ಪೌರಕಾರ್ಮಿಕರೆಲ್ಲರ ಕುಟುಂಬಸ ಸದಸ್ಯೆರಿಗೆ, ನಲ್ಮೆಯ ಬಂಧುಗಳಿಗೆ ಹಾಗೂ ಹಿತೈಷಿಗಳಿಗೂ ಹೃದಯ ಪೂರ್ವಕ ಧನ್ಯವಾದಗಳನ್ನು ಈ ಮೂಲಕ ತಿಳಿಸುತ್ತೆನೆ ಎಂದರು. ನನ್ನ ಜನ್ಮಕ್ಕೆ ಹಾಗೂ ನನ್ನೆಲ್ಲಾ ಬೆಳವಣಿಗೆಗೆ ಕಾರಣವಾದ, ಕೂಡ್ಲಿಗಿ ಪಟ್ಟಣದ ಸಮಸ್ತ ನಾಗರೀಕರು ಮತ್ತು ಎಲ್ಲಾ ಸಂಘ ಸಂಸ್ಥೆಗಳ ಪದಾಧಿಕಾರಿಗಳು,ಎಲ್ಲಾ ಸಮಾಜದವರಿಗೂ,ಎಲ್ಲಾ ಜನಪ್ರತಿನಿಧಿಗಳಿಗೂ,ಎಲ್ಲಾ ಸ್ನೇಹಿತರಿಗೆ ಕೃತಜ್ಞನತೆಗಳನ್ನು ತಿಳಿಸುತ್ತಿರುವುದಾಗಿ.ನಾಡಿನ ಸಮಸ್ತ ಪೌರಸೇವಾ ನೌಕರರ ಹಿತಕ್ಕಾಗಿ ಪ್ರಾಮಣಿಕವಾಗಿ ದುಡಿಯುವೆ,ಅವರ ಶ್ರೇಯೋಭಿವೃದ್ಧಿಗಾಗಿ ಹಗಲಿರುಳು ಧಕ್ಷತೆಯಿಂದ ಕಾರ್ಯನಿರ್ವಹಿಸುವೆ. ಈ ಮೂಲಕ ಅವರು ನನಗೆ ನೀಡಿರುವ ರಾಜ್ಯಾಧ್ಯಕ್ಷ ಸ್ಥಾನಕ್ಕೆ ಮತ್ತಷ್ಟು ಮೆರಗನ್ನು ತರುವಲ್ಲಿ ಶ್ರಮಿಸುವೆ ಎಂದರು. ವೇದಿಕೆಯಲ್ಲಿದ್ದ ಹಲವು ಮುಖ್ಯ ಅತಿಥಿಗಳು ಮಾತನಾಡಿದರು, ದಲಿತ ಸಮುದಾಯದ ಮುಖಂಡರು ಹಿರಿಯರು,ವಿವಿದ ಜನಪ್ರತಿನಿಧಿಗಳು,ವಿವಿದ ಸಂಘ ಸಂಸ್ಥೆಗಳ ಪದಾಧಿಕಾರಿಗಳು,ದಲಿತ ಸಮಾಜ ಸೇರಿದಂತೆ ವಿವಿದ ಸಮಾಜದ ಯುವಕರು ನೂರಾರು ಹಿತೈಷಿಗಳು ಭಾಗವಹಿಸಿದ್ದರು.

ಇತ್ತೀಚಿನ ಸುದ್ದಿ

ಜಾಹೀರಾತು