ಇತ್ತೀಚಿನ ಸುದ್ದಿ
ಪರ್ಕಳದಲ್ಲಿ ಪಾರ್ಶ್ವ ಚಂದ್ರಗ್ರಹಣ ದರ್ಶನ: ದೂರದರ್ಶಕದ ಮೂಲಕ ಸಾರ್ವಜನಿಕರಿಂದ ವೀಕ್ಷಣೆ
09/11/2022, 13:59
ಮಣಿಪಾಲ(reporterkarnataka.com): ಪಾರ್ಶ್ವ ಚಂದ್ರಗ್ರಹಣದ ಪ್ರಯುಕ್ತ ಪರ್ಕಳದ ಪೇಟೆಯಲ್ಲಿರುವ ಸಂಧ್ಯಾ ವೆಜ್ ರೆಸ್ಟೋರೆಂಟ್ ನ ಐದನೇ ಮಹಡಿಯಲ್ಲಿ ಇಂದು ಸಾರ್ವಜನಿಕ ಗ್ರಹಣ ವೀಕ್ಷಣೆಗೆ ಅವಕಾಶ ಕಲ್ಪಿಸಲಾಗಿತ್ತು.
ಈ ಸಂದರ್ಭದಲ್ಲಿ ಎಂಐಟಿ ಉದ್ಯೋಗಿ ಆರ್. ಮನೋಹರ್ ಅವರು ಆವಿಷ್ಕರಿಸಿದ ಹೊಸ ದೂರದರ್ಶಕವನ್ನು ಪರಿಚಯಿಸಲಾಯಿತು. ನೂರಾರು ಮಂದಿ ದೂರದರ್ಶಕದ ಮೂಲಕ ಚಂದ್ರಗ್ರಹಣ ವೀಕ್ಷಿಸಿದರು. ಗಣೇಶ್ ರಾಜ್ ಸರಳೇಬೆಟ್ಟು ಕಾರ್ಯಕ್ರಮವನ್ನು ಸಂಘಟಿಸಿದರು.