ಇತ್ತೀಚಿನ ಸುದ್ದಿ
ಪರಿಸರ ದಿನಾಚರಣೆ ಪ್ರಯುಕ್ತ ಬಣಕಲ್ ಶಾಲಾ ಮಕ್ಕಳಿಗೆ ‘ಪಕ್ಷಿ ಅರಿವು’ ಕಾರ್ಯಾಗಾರ
05/06/2024, 16:46

ಸಂತೋಷ್ ಅತ್ತಿಗೆರೆ ಚಿಕ್ಕಮಗಳೂರು
info.reporterkarnataka@gmail.com
ಪರಿಸರ ದಿನಾಚರಣೆಯ ಪ್ರಯುಕ್ತ ಮೂಡಿಗೆರೆ ತಾಲೂಕಿನ ಬಣಕಲ್ ವಿಲೇಜ್ ನ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಮಕ್ಕಳಿಗೆ “ಪಕ್ಷಿ ಅರಿವು” ಕಾರ್ಯಾಗಾರ ಹಮ್ಮಿಕೊಳ್ಳಲಾಗಿತ್ತು.
ಕಾರ್ಯಾಗಾರದಲ್ಲಿ ಶಿಕ್ಷಕ ಪೂರ್ಣೇಶ್ ಮತ್ತಾವರ ಪಶ್ಚಿಮ ಘಟ್ಟದ ಭಾಗವಾದ ಶಾಲಾ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಕಂಡುಬರುವ ಪಕ್ಷಿಗಳ ಕುರಿತು ಚಿತ್ರ ಮಾಹಿತಿ ನೀಡಿದರು. ಮಕ್ಕಳು ತಾವು ದಿನನಿತ್ಯ ಕಾಣುವ ಹತ್ತಾರು ಬಗೆಯ ಪಕ್ಷಿಗಳನ್ನು ಹೆಸರಿಸಿದರು. ಪಕ್ಷಿಗಳು ಮತ್ತು ಅವುಗಳ ಗುಣ ಸ್ವಭಾವಗಳಿಗೆ ಸಂಬಂಧಿಸಿದ ನಲಿಕಲಿ ಚಟುವಟಿಕೆಗಳನ್ನು ಆಯೋಜಿಸಲಾಯಿತು.
ಈ ಸಂದರ್ಭದಲ್ಲಿ ಶಾಲಾ ಮುಖ್ಯ ಶಿಕ್ಷಕರಾದ ಶಿವಮೂರ್ತಿ ಉಪಸ್ಥಿತರಿದ್ದರು.