9:14 AM Sunday16 - November 2025
ಬ್ರೇಕಿಂಗ್ ನ್ಯೂಸ್
ಬೆಂಗಳೂರು: ಮತ ಕಳ್ಳತನ ವಿರುದ್ಧ ಯುವ ಕಾಂಗ್ರೆಸ್ ಬೃಹತ್ ಪ್ರತಿಭಟನೆ ಬೆಳಗಾವಿ ಮೃಗಾಲಯದಲ್ಲಿ 19 ಜಿಂಕೆಗಳ ಸಾವು: ತನಿಖೆಗೆ ಅರಣ್ಯ ಸಚಿವ ಈಶ್ವರ ಖಂಡ್ರೆ… ಮೂಡಿಗೆರೆಯಲ್ಲಿ 80 ಮೂಟೆ ಕಾಳುಮೆಣಸು ಕಳ್ಳತನ ಪ್ರಕರಣ: ಮಹಿಳಾ ಆರೋಪಿ ಬಂಧನ, ಮೂವರು… ಸಿಎಂ ಕಾನೂನು ಸಲಹೆಗಾರ ಪೊನ್ನಣ್ಣ ವಿರುದ್ಧ ಅವಾಚ್ಯ ಪದ ಬಳಕೆ: ಆರೋಪಿ ವಿರುದ್ಧ… Kodagu | ಮಡಿಕೇರಿ ಸಮೀಪದ ಚೆಂಬು ಗ್ರಾಮದಲ್ಲಿ ಮನೆಗಳ್ಳತನ ಪ್ರಕರಣ: ಇಬ್ಬರ ಬಂಧನ ವೈಚಾರಿಕ-ವೈಜ್ಞಾನಿಕ ಮನೋಭಾವದ ಮಕ್ಕಳ ಮೇಲೆ ದೇಶದ ಭವಿಷ್ಯ ನಿಂತಿದೆ: ಸಿಎಂ ಸಿದ್ದರಾಮಯ್ಯ ಬಿಹಾರ ಚುನಾವಣೆ ಫಲಿತಾಂಶದಿಂದ ಪ್ರಧಾನಿ ಮೋದಿಯವರ ಜನಪ್ರೀಯತೆ ಮತ್ತೆ ದೃಢಪಟ್ಟಿದೆ: ಮಾಜಿ ಸಿಎಂ… ಚಾಕುವಿನಿಂದ ಇರಿದು ಕಾರ್ಮಿಕನ ಕೊಲೆ: ಅಸ್ಸಾಂ ಮೂಲದ ಆರೋಪಿ ಅಂದರ್; ತಪ್ಪುಮಾಹಿತಿ ನೀಡಿದಾತ… ಮೇಕೆದಾಟು ವಿರುದ್ಧದ ತಮಿಳುನಾಡು ಅರ್ಜಿ ಸುಪ್ರೀಂ ಕೋರ್ಟ್ ನಿಂದ ವಜಾ: ರಾಜ್ಯಕ್ಕೆ ಮಹಾಜಯ Shivamogga | ತೀರ್ಥಹಳ್ಳಿ ಸಮೀಪದ ತಳುವೆ ಬಳಿ ಅಪಘಾತ: ವ್ಯಕ್ತಿಯೋರ್ವನ ಕಾಲು ಕಟ್

ಇತ್ತೀಚಿನ ಸುದ್ದಿ

ಪರಪ್ಪನ ಅಗ್ರಹಾರದಲ್ಲಿ ಒಂದು ರಾತ್ರಿ ಕಳೆದ ಚೈತ್ರಾ ಕುಂದಾಪುರ: ಇಂದು ಖೈದಿ ಸಂಖ್ಯೆ ನೀಡಲಿದ್ದಾರೆ ಜೈಲ್ ಸಿಬ್ಬಂದಿ

24/09/2023, 11:24

ಮೃದುಲಾ ನಾಯರ್ ಬೆಂಗಳೂರು

info.reporterkarnataka@gmail.ಕಂ

ಬಿಜೆಪಿ ಟಿಕೆಟ್ ಕೊಡಿಸುವುದಾಗಿ ಉದ್ಯಮಿಯೊಬ್ಬರಿಗೆ ಬಹುಕೋಟಿ ವಂಚಿಸಿದ ಪ್ರಕರಣ ಸಂಬಂಧಿಸಿದಂತೆ ಬಂಧಿತಳಾದ ಚೈತ್ರಾ ಕುಂದಾಪುರ ಬೆಂಗಳೂರಿನ ಪರಪ್ಪನ ಅಗ್ರಹಾರ ಜೈಲಿನಲ್ಲಿ ಮೊದಲ ದಿನ ಕಳೆದಿದ್ದಾರೆ. ಇಂದು ಆಕೆಗೆ ಖೈದಿ ಸಂಖ್ಯೆ ಸಿಗಲಿದೆ.
ಚೈತ್ರಾ ಕುಂದಾಪುರ ಅವರ ಸಿಸಿಬಿ ಪೊಲೀಸ್ ಕಸ್ಟಡಿ ಅವಧಿ ನಿನ್ನೆಗೆ ಮುಕ್ತಾಯವಾಗಿತ್ತು. ನಿನ್ನೆ ಸಿಸಿಬಿ ಪೊಲೀಸರು ಆಕೆಯನ್ನು ಕೋರ್ಟ್ ಮುಂದೆ ಹಾಜರುಪಡಿಸಿದಾಗ, ನ್ಯಾಯಾಲಯ ಆಕೆಗೆ ನ್ಯಾಯಾಂಗ ಬಂಧನ ವಿಧಿಸಿತ್ತು. ನಂತರ ಅವಳನ್ನು ಪರಪ್ಪನ ಅಗ್ರಹಾರ ಜೈಲಿಗೆ ಕರೆದು ತರಲಾಯಿತು.
ನಿನ್ನೆ ಕೋರ್ಟ್ ನಲ್ಲಿ ಕಣ್ಣೀರು ಹಾಕಿದ್ದ ಚೈತ್ರಾ ಕುಂದಾಪುರ ಅವಳು ಪರಪ್ಪನ ಅಗ್ರಹಾರ ಜೈಲಿನಲ್ಲಿ ಮಂಕಾಗಿದ್ದಳು.
ಶನಿವಾರ ಸಂಜೆ ಸುಮಾರು 6 ಗಂಟೆಗೆ ಚೈತ್ರಾ ಮತ್ತು ಆಕೆಯ ಟೀಮನ್ನು ಪರಪ್ಪನ ಅಗ್ರಹಾರ ಜೈಲಿಗೆ ಕರೆದು ತರಲಾಯಿತು. ಇಲ್ಲಿನ ಹೊಸ ಜೈಲಿನ ಪ್ರತ್ಯೇಕ ಕೊಠಡಿಯಲ್ಲಿ ಚೈತ್ರಾಳನ್ನು ಒಂಟಿಯಾಗಿ ಇರಿಸಲಾಗಿದೆ.
ಚೈತ್ರಾ ಶನಿವಾರ ರಾತ್ರಿ ಜೈಲು ಸಿಬ್ಬಂದಿ ನೀಡಿದ ಚಪಾತಿ, ಅನ್ನ-ಸಾಂಬರ್ ಸೇವಿಸಿದ್ದಾಳೆ.ಇಂದು ಬೆಳಗ್ಗೆ ಜೈಲು ಸಿಬ್ಬಂದಿ ಕೊಟ್ಟ ಪಲಾವ್ ಸೇವನೆ ಮಾಡಿದ್ದಾಳೆ. ಹಾಗೆ ಇಂದು ಆಕೆಗೆ ಜೈಲ್ ಸಿಬ್ಬಂದಿಗಳು ಯುಟಿಪಿ(ಅಂಡರ್ ಟ್ರೈಯಲ್ ಪ್ರಿಸಿನರ್) ಸಂಖ್ಯೆ ನೀಡಿದ್ದಾರೆ.
ಒಟ್ಟು 10 ದಿನಗಳ ಕಾಲ ಹೊಸ ಬಂಧಿಖಾನೆಯಲ್ಲೇ ಚೈತ್ರಾ ಉಳಿಯಲಿದ್ದಾಳೆ. ಬಳಿಕ ಹಳೆಯ ಜೈಲಿಗೆ ಚೈತ್ರಾಳನ್ನು ಜೈಲು ಸಿಬ್ಬಂದಿ ಶಿಫ್ಟ್ ಮಾಡಲಿದ್ದಾರೆ.
ಪ್ರಕರಣದ ಇತರ ಆರೋಪಿಗಳಾದ ಗಗನ್ ಕಡೂರ್, ಪ್ರಜ್ವಲ್, ರಮೇಶ್, ಚೆನ್ನಾನಾಯ್ಕ್, ಧನರಾಜ್ ಹಾಗೂ ಶ್ರೀಕಾಂತ್ ಪ್ರತ್ಯೇಕ‌ ಪುರುಷರ ಸೆಲ್​ನಲ್ಲಿ ಇರಿಸಲಾಗಿದೆ.

ಇತ್ತೀಚಿನ ಸುದ್ದಿ

ಜಾಹೀರಾತು