1:50 PM Tuesday22 - July 2025
ಬ್ರೇಕಿಂಗ್ ನ್ಯೂಸ್
ಕಾಂಗ್ರೆಸ್ ನ ಗ್ಯಾರಂಟಿ ಯೋಜನೆಗಳಿಂದ ಬಿಜೆಪಿ ಹಾಗೂ ಜೆಡಿಎಸ್ ಕಂಗೆಟ್ಟಿದೆ: ಪಾವಗಡದಲ್ಲಿ ಮುಖ್ಯಮಂತ್ರಿ… ಧರ್ಮಸ್ಥಳ ಪ್ರಕರಣ; ಎಸ್ ಐಟಿ ತನಿಖೆ ಕಾಲಮಿತಿಯಲ್ಲಿ ಕಾನೂನು ಬದ್ದವಾಗಿ ನಡೆಯಲಿ: ಮಾಜಿ… ಧರ್ಮಸ್ಥಳ ಪ್ರಕರಣ; ಎಸ್‌ಐಟಿ ರಚನೆ ಸ್ವಾಗತಾರ್ಹ: ಪ್ರತಿಪಕ್ಷ ನಾಯಕ ಆರ್‌.ಅಶೋಕ್ Kodagu | ಮಂಜಡ್ಕ ನದಿಯಲ್ಲಿ ಬೈಕ್ ಸಹಿತ ಕೊಚ್ಚಿ ಹೋಗಿದ್ದ ಯುವಕನ ಮೃತದೇಹ… ಸುಂಟಿಕೊಪ್ಪ: ರಾಷ್ಟ್ರೀಯ ಹೆದ್ದಾರಿ 275ರಲ್ಲಿ ಆಡಿ-ಟೆಂಪೋ ಡಿಕ್ಕಿ: ಟ್ರಾಫಿಕ್ ಜಾಮ್ Kodagu | ಕುಶಾಲನಗರ: ಆಸ್ತಿಗಾಗಿ ಸ್ನೇಹಿತರ ಜತೆ ಸೇರಿ ತಂದೆಯನ್ನೇ ಕೊಂದ ಪಾಪಿ… SIT Dharmasthala | ಧರ್ಮಸ್ಥಳ ಪ್ರಕರಣ ತನಿಖೆಗೆ ವಿಶೇಷ ತನಿಖಾ ತಂಡ ರಚನೆ:… ಭಾರೀ ಮಳೆ ಮಧ್ಯೆಯೂ ಮುಳ್ಳಯ್ಯನಗಿರಿಗೆ ಪ್ರವಾಸಿಗರ ದಂಡು: ಕಾರು – ಜೀಪ್ ಮುಖಾಮುಖಿ… ಕರ್ನಾಟಕ ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿಗಳಾಗಿ ಜಸ್ಟಿಸ್ ವಿಭು ಬಖ್ರು ಅಧಿಕಾರ ಸ್ವೀಕಾರ: ರಾಜ್ಯಪಾಲ… Kodagu |ಪೊನ್ನಂಪೇಟೆ: ವ್ಯಾಘ್ರನ ಸೆರೆಗೆ 75 ಮಂದಿ ಅರಣ್ಯ ಸಿಬ್ಬಂದಿಗಳ ಕೂಂಬಿಂಗ್ ಕಾರ್ಯಾಚರಣೆ…

ಇತ್ತೀಚಿನ ಸುದ್ದಿ

ಪಣಂಬೂರು ಶ್ರೀ ಕೋಡ್ದಬ್ಬು ದೈವಸ್ಥಾನದಲ್ಲಿ ನೂತನ ವಾಸುಕೀ ಸಭಾಭವನ ಉದ್ಘಾಟನೆ; ವಿವಿಧ ಅಭಿವೃದ್ಧಿ ಕಾರ್ಯಗಳಿಗೆ ಶಾಸಕ ಡಾ.‌ ಭರತ್ ಶೆಟ್ಟಿ ಚಾಲನೆ

30/12/2022, 21:32

ಸುರತ್ಕಲ್(reporterkarnataka.com): ಕೃಷ್ಣಾಪುರದಲ್ಲಿರುವ ಪಣಂಬೂರು ಶ್ರೀ ಕೋಡ್ದಬ್ಬು ದೈವಸ್ಥಾನದಲ್ಲಿ ನೂತನ ವಾಸುಕೀ ಸಭಾಭವನದ ಉದ್ಘಾಟನೆ ಹಾಗೂ ವಿವಿಧ ಅಭಿವೃದ್ಧಿ ಕಾರ್ಯಗಳ ಲೋಕಾರ್ಪಣೆಯನ್ನು ಶಾಸಕ ಡಾ.‌ ಭರತ್ ಶೆಟ್ಟಿ ವೈ. ನೆರವೇರಿಸಿದರು.


ಈ ಸಂದರ್ಭದಲ್ಲಿ ಶಾಸಕರು ಮಾತನಾಡಿ, ನಮ್ಮ ಶಕ್ತಿಯಾಗಿ ದೈವ ದೇವರು ತಮಗೆ ಬೇಕಾದ ಸೇವೆಯನ್ನು ಪಡೆದುಕೊಳ್ಳುತ್ತಾರೆ. ನಾವು ಎಂಬುದು ಏನಿಲ್ಲ. ಭಕ್ತಿಯಿಂದ ನಾವು ನಮ್ಮ ದೈವ ದೇವರನ್ನು ಪೂಜಿಸಿದರೆ ಎಲ್ಲರಿಗೂ ಒಳಿತಾಗುತ್ತದೆ .ಇದಕ್ಕೆ ಹಲವಾರು ನಿದರ್ಶನಗಳಿವೆ ಎಂದರು.

ಇದೇ ಸಂದರ್ಭ ನಮ್ಮ ನಂಬಿಕೆಗೆ ಧಕ್ಕೆ ತರುವವರ ವಿರುದ್ದ ಒಕ್ಕೊರಲಿನಿಂದ ಖಂಡಿಸಬೇಕೆಂದರು.
ಶ್ರೀ ಕೋಡ್ದಬ್ಬು ದೈವಸ್ಥಾನದ ಅಭಿವೃದ್ಧಿ ಸಮಿತಿ ಗೌರವಾಧ್ಯಕ್ಷರಾದ ಕೆ. ಸಿ. ನಾಗೇಂದ್ರ ಭಾರಧ್ವಾಜ್, ಮೇಯರ್ ಜಯಾನಂದ ಅಂಚನ್,
ಬಿಜೆಪಿ ಉತ್ತರ ಮಂಡಲ ಅಧ್ಯಕ್ಷ ತಿಲಕ್ ರಾಜ್ ಕೃಷ್ಣಾಪುರ,
ದೈವಸ್ಥಾನದ ಲೋಕೇಶ್ ಗುರಿಕಾರ,ವಿಶ್ವನಾಥ ದೇವಸ್ಥಾನ ಇದರ ವ್ಯವಸ್ಥಾಪಕ ಸಮಿತಿ ಅಧ್ಯಕ್ಷ ಲಕ್ಷ್ಮೀ ಶೇಖರ್ ದೇವಾಡಿಗ,
ಪ್ರಶಾಂತ್ ಮೂಡಾಯಿಕೋಡಿ,ಪಣಂಬೂರು ಮಂಜುಕಾವ ಕಾವರಮನೆ, ಸದಾಶಿವ ಐತಾಳ್ ,ಲಕ್ಷ್ಮೀಶ ದೇವಾಡಿಗ, ಉದ್ಯಮಿ ರಮಾನಾಥ ಶೆಟ್ಟಿ ,ಹಿರಿಯರಾದ ಮಹಾಬಲ ರೈ ಪಣಂಬೂರು ಕಾವರ ಮನೆ, ಜಯಂತಿ ಎಸ್. ಶೆಟ್ಟಿ, ಪಣಂಬೂರು ವಿಶ್ವಕರ್ಮ ಸಮಾಜ ಸೇವಾ ಸಂಘ ಆಚಾರ್ಯ , ಗುತ್ತಿಗೆದಾರರಾದ ನಾಗರಾಜ್ ನಾಯ್ಕ್ ಸುಶೀಲ ಕೆ.ಶೆಟ್ಟಿ, ಕೇಶವ ಸನಿಲ್, ಜತೆ ಗುರಿಕಾರರಾದ ಚಂದ್ರಹಾಸ ಗುರಿಕಾರ, ದುರ್ಗಾಪ್ರಸಾದ್ ಹೊಳ್ಳಅಧ್ಯಕ್ಷರಾದ ಸದಾನಂದ ಸನಿಲ್, ಅಣ್ಣಪ್ಪ ದೇವಾಡಿಗ, ಸುಧಾಕರ ಕಾಮತ್ , ಶ್ರೀನಿವಾಸ್, ಗುತ್ತಿಗೆದಾರರಾದ ಉಮಾಶಂಕರ್ ಉಪಸ್ಥಿತರಿದ್ದರು.

ಇತ್ತೀಚಿನ ಸುದ್ದಿ

ಜಾಹೀರಾತು