ಇತ್ತೀಚಿನ ಸುದ್ದಿ
ಪಾಲಿಕೆ ಸ್ವಾತಂತ್ರ್ಯೋತ್ಸವದಲ್ಲಿ ಸೀನಿಯರ್ ಚೇಂಬರ್ ಇಂಟರ್ ನ್ಯಾಷನಲ್ ಮಂಗಳೂರು ಲೀಜನ್ ಸಾಥ್
16/08/2022, 14:16

ಮಂಗಳೂರು(reporterkarnataka.com): ಮಂಗಳೂರು ಮಹಾನಗರ ಪಾಲಿಕೆಯೊಂದಿಗೆ ಸೀನಿಯರ್ ಚೇಂಬರ್ ಇಂಟರ್ ನ್ಯಾಷನಲ್ ಮಂಗಳೂರು ಲೀಜನ್ 75ನೇ ಸ್ವಾತಂತ್ರ್ಯೋತ್ಸದೊಂದಿಗೆ ಭಾಗವಹಿಸಿತು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಮೇಯರ್ಪ್ರೇಮಾನಂದ ಶೆಟ್ಟಿ ವಹಿಸಿ ಧ್ವಜಾರೋಹಣ ನೆರವೇರಿಸಿದರು. ಮುಖ್ಯ ಅತಿಥಿಯಾಗಿ ಉಪ ಮೇಯರ್ ಸುಮಂಗಲಾ ರಾವ್, ಮಂಗಳೂರು ಮಹಾನಗರಪಾಲಿಕೆಯ ಆಯುಕ್ತ ಅಕ್ಷಯ ಶ್ರೀಧರ್, ಮಾಜಿ ಮೇಯರ್ ದಿವಾಕರ್, ಮಂಗಳೂರು ಮಹಾನಗರ ಪಾಲಿಕೆ ಸದಸ್ಯರುಗಳಾದ ಕಿರಣ್ ಕುಮಾರ್, ಸುಧೀರ್ ಶೆಟ್ಟಿ, ರಂಜಿನಿ ಎಲ್ ಕೋಟ್ಯಾನ್, ಸಂಧ್ಯಾ, ಚಂದ್ರಾವತಿ, ಶೈಲೇಶ್, ಲೋಕೇಶ್ ಬೊಳ್ಳಾಜೆ, ಸುನಿತಾ, ಲೀಲಾವತಿ ಪ್ರಕಾಶ್, ಜಯನಂದ ಅಂಚನ್, ಸೀನಿಯರ್ ಚೇಂಬರ್ ಇಂಟರ್ ನ್ಯಾಷನಲ್ ಮಂಗಳೂರು ಲೀಜನ್ ಕಾರ್ಯದರ್ಶಿ ಪ್ಲೇವಿ ಡಿಮೆಲ್ಲೊ, ಜತೆ ಕಾರ್ಯದರ್ಶಿ ಲತಾ ಕಲ್ಲಡ್ಕ ಮುಂತಾದವರು ಉಪಸ್ಥಿತರಿದ್ದರು.