ಇತ್ತೀಚಿನ ಸುದ್ದಿ
ಪಾಲಿಕೆ ಮತ್ತೆ ಕಾರ್ಯಾಚರಣೆ: ಮಂಗಳೂರು ಸೆಂಟ್ರಲ್ ಮಾರ್ಕೆಟ್ ಕಟ್ಟಡ ಸಂಪೂರ್ಣ ನೆಲಸಮ
15/04/2022, 18:18

ಮಂಗಳೂರು(reporterkarnataka.com): ಮಂಗಳೂರು ಮಹಾನಗರಪಾಲಿಕೆಯ ಕಾರ್ಯಾಚರಣೆಗೆ ಒಳಗಾಗಿ ಬಾಂಬ್ ದಾಳಿಗೆ ತುತ್ತಾದ ಕಟ್ಟಡದಂತೆ ಭಾಸವಾಗುತ್ತಿದ್ದ ನಗರದ ಹಳೆಯ ಸೆಂಟ್ರಲ್ ಮಾರ್ಕೆಟ್ ಕಟ್ಟಡವನ್ನು ಸಂಪೂರ್ಣ ನೆಲಸಮ ಮಾಡಲಾಗಿದೆ.
ಸೆಂಟ್ರಲ್ ಮಾರ್ಕೆಟ್ ಕಟ್ಟಡವನ್ನು ಮಂಗಳೂರುಮಹಾನಗರಪಾಲಿಕೆಯಿಂದ ಭಾಗಶಃ ಕೆಡಹಲಾಗಿತ್ತು . ಆದರೆ ಇಲ್ಲಿನ ವ್ಯಾಪಾರಿಗಳು ಹೈಕೋರ್ಟ್ ನಿಂದ ತಡೆ ತಂದಿದ್ದರು. ಇದೀಗ ಕೆಡಹಲು ಹೈಕೋರ್ಟ್ ನೀಡಿದ್ದ ತಡೆಯಾಜ್ಞೆ ತೆರವುಗೊಂಡ ಹಿನ್ನೆಲೆಯಲ್ಲಿ ಬಾಕಿ ಇರುವ ಕಟ್ಟಡವನ್ನು ಕೆಡಹುವ ಕಾರ್ಯಾಚರಣೆ ಮತ್ತೆ ಆರಂಭಿಸಲಾಗಿತ್ತು.
ಗುರುವಾರ ದಿನಪೂರ್ತಿ ಕಾರ್ಯಾಚರಣೆ ನಡೆಸಿ ನೆಲಸಮ ಮಾಡಲಾಗಿದೆ.