ಇತ್ತೀಚಿನ ಸುದ್ದಿ
ಪಾಲಿಕೆ ಮಾಡಬೇಕಿದ್ದ ಕೆಲಸವನ್ನು ಪೊಲೀಸ್ ಇಲಾಖೆ ಮಾಡಿತು!: ಕೆಪಿಟಿ ವೃತ್ತದಲ್ಲಿ ರಸ್ತೆಗೆ ಅಡ್ಡವಾಗಿದ್ದ ಅಲಂಕಾರಿಕ ಗಿಡ ತೆರವು
17/06/2023, 15:03
ಅನುಷ್ ಪಂಡಿತ್ ಮಂಗಳೂರು
info.reporterkarnataka@gmail.com
ರಸ್ತೆಯ ಡಿವೈಡರ್ ಮತ್ತು ಸರ್ಕಲ್ ಗಳಲ್ಲಿ ನಿರ್ಮಿಸಿದ ಮಿನಿ ಗಾರ್ಡನ್ ಗಳು ನಗರದ ಸುಂದರವನ್ನು ವೃದ್ಧಿಸಿದರೆ, ಕೆಲವೊಮ್ಮೆ ನಗರದೊಳಗೆ ವಾಹನ ಅಪಘಾತಕ್ಕೂ ಕಾರಣವಾಗುತ್ತದೆ. ಡಿವೈಡರ್ ಮತ್ತು ಸರ್ಕಲ್ ನಲ್ಲಿ ನಿರ್ಮಿಸಿದ ಗಾರ್ಡ್ ನ ಎದುರುಗಡೆಯ ರಸ್ತೆಗೆ ಅಡ್ಡವಾಗಿ ಬೆಳೆದರೆ ಅದು ಅಪಾಯಕಾರಿಯಾಗಿ ಪರಿಣಮಿಸುತ್ತದೆ. ಅಂಥದೊಂದು ಸನ್ನಿವೇಶ ನಗರದ ಕೆಪಿಟಿ ಜಂಕ್ಷನ್ ನಲ್ಲಿ ನಡೆದಿದೆ.
ಕೆಪಿಟಿ ಜಂಕ್ಷನ್ ನಲ್ಲಿರುವ ಸಣ್ಣ ವೃತ್ತದಲ್ಲಿ ಗಾರ್ಡನ್ ಬೆಳೆಸಲಾಗಿದೆ.
ಗಿಡಗಳು ಸೊಂಪಾಗಿ ದಟ್ಟವಾಗಿ ಎತ್ತರಕ್ಕೆ ಬೆಳೆದಿದೆ. ವೃತ್ತವೇನೋ ಗಾರ್ಡನ್ ನಿಂದ ತುಂಬಾ ಸೊಗಸಾಗಿ ಕಾಣುತ್ತಿದೆ. ಆದರೆ ದಟ್ಟವಾಗಿ, ಎತ್ತರಕ್ಕೆ ಬೆಳೆದ ಅಲಂಕಾರಿಗಳ ಗಿಡಗಳು ರಸ್ತೆಗೆ ಪೂರ್ತಿ ಅಡ್ಡವಾಗಿದೆ. ಬಿಜೈ ಕಡೆಯಿಂದ ನಂತೂರು ಭಾಗಕ್ಕೆ ಸಂಚರಿಸುವ ವಾಹನ ಸವಾರರಿಗೆ ಎದುರುಗಡೆಯ ರಸ್ತೆ ಕಾಣದಷ್ಟು ಅಲಂಕಾರಿಕ ಗಿಡಗಳು ಬೆಳೆದಿವೆ. ಇದೇ ಪರಿಸ್ಥಿತಿ ಏರ್ ಪೊರ್ಟ್ ರೋಡಿನಿಂದ ಬಿಜೈ ಕಡೆಗೆ ಬರುವ ವಾಹನ ಸವಾರರದ್ದಾಗಿದೆ. ಏರ್ ಪೊರ್ಟ್ ಕಡೆಯಿಂದ ಬಿಜೈಯತ್ತ ಸಾಗುವ ವಾಹನ ಸವಾರರಿಗೂ ಇಲ್ಲಿ ರಸ್ತೆ ಕಾಣೊಲ್ಲ. ಈ ಕುರಿತು ಸಾರ್ವಜನಿಕರೊಬ್ಬರು ಎಸಿಪಿ ಗೀತಾ ಕುಲಕರ್ಣಿ ಅವರಿಗೆ ದೂರು ನೀಡಿದ್ದರು. ಸುಗಮ ಸಂಚಾರದ ಹಿನ್ನೆಲೆಯಲ್ಲಿ ಎಸಿಪಿ ಗೀತಾ ಕುಲಕರ್ಣಿ ಅವರ ಮಾರ್ಗದರ್ಶನದಲ್ಲಿ ಸಬ್ ಇನ್ಸ್ ಪೆಕ್ಟರ್ ಗೋಪಾಲಕೃಷ್ಣ ಅವರ ನೇತೃತ್ದಲ್ಲಿ ರಸ್ತೆಗೆ ತಡೆಯಾಗಿ ಬೆಳೆದು ನಿಂತಿದ್ದ ಅಲಂಕಾರಿಕ ಗಿಡಗಳನ್ನು ಸೋಮವಾರ ಟ್ರಿಮ್ ಮಾಡಲಾಯಿತು. ಪಾಲಿಕೆ ಮಾಡಬೇಕಾದ ಕೆಲಸವನ್ನು ಪೊಲೀಸ್ ಇಲಾಖೆಯೇ ಮಾಡಿತು. ಕಾನ್ ಸ್ಟೇಬಲ್ ಒಬ್ಬರು ಗಿಡಗಳನ್ನು ಟ್ರಿಮ್ ಮಾಡಿ ವಾಹನಗಳ ಸುಗಮ ಸಂಚಾರಕ್ಕೆ ಅನುಕೂಲ ಮಾಡಿಕೊಟ್ಟರು.