ಇತ್ತೀಚಿನ ಸುದ್ದಿ
ಮಂಗಳೂರಿನ ಪಾಲ್ದನೆ ಸಂತ ತೆರೆಸಾ ಚರ್ಚ್: ಪರಿಸರ ಸಂರಕ್ಷಣಾ ಸಂಡೇ ಆಚರಣೆ
08/09/2025, 17:08

ಮಂಗಳೂರು(reporterkarnataka.com): ಕ್ಯಾಥೋಲಿಕ್ ಕ್ರೈಸ್ತ ಸಮುದಾಯವು ಸಪ್ಟೆಂಬರ್ 7ರಂದು ಲಾವ್ದಾತೊ ಸಿ ಅಂದರೆ ಪರಿಸರ ಸಂರಕ್ಷಣಾ ಭಾನುವಾರವನ್ನಾಗಿ ಆಚರಿಸಿತು.
ಚರ್ಚ್ ಗಳಲ್ಲಿ ಧರ್ಮಗುರುಗಳ ಪ್ರವಚನಗಳು ಪರಿಸರ ಸಂರಕ್ಷಣೆಯ ವಿಷಯವನ್ನು ಆಧರಿಸಿದ್ದವು. ಪರಿಸರ ಸಂರಕ್ಷಣೆ ಬಗ್ಗೆ ಎಲ್ಲರೂ ಗಮನ ಹರಿಸುವ ಬಗ್ಗೆ ವಿಶೇಷ ಪ್ರಾರ್ಥನೆ ಸಲ್ಲಿಸಲಾಯಿತು.
ಮಂಗಳೂರಿನ ಪಾಲ್ದನೆ ಸಂತ ತೆರೆಸಾ ಚರ್ಚ್ ನ ವಠಾರದಲ್ಲಿ ಗಿಡಗಳನ್ನು ನೆಡಲಾಯಿತು ಚರ್ಚ್ ನ ಸದಸ್ಯರಾದ ಸಂತ ಜೋಸೆಫ್ ವಾರ್ಡಿನ ವಿನ್ಸೆಂಟ್ ಪಿಂಟೊ, ಸರ್ವ ಆಯೋಗಗಳ ಸಂಚಾಲಕ ಜೋಸ್ಲಿನ್ ಲೋಬೊ, ಶಿಕ್ಷಕಿ ಹಾಗೂ ಮದರ್ ತೆರೆಸಾ ವಾರ್ಡಿನ ಶಾಂತಿ ಮೊಂತೇರೊ ಅವರು ಗಿಡ ನೆಡುವ ಕಾರ್ಯಕ್ರಮದ ನೇತೃತ್ವ ವಹಿಸಿದ್ದರು.