ಇತ್ತೀಚಿನ ಸುದ್ದಿ
Mangaluru | ಪಾಲ್ದನೆ ಸಂತ ತೆರೆಸಾ ಚರ್ಚಿನ ಲೀಜನ್ ಆಫ್ ಮೇರಿ ಸಂಘಟನೆ ಸದಸ್ಯರ ಧಾರ್ಮಿಕ ಯಾತ್ರೆ
26/04/2025, 17:24

ಮಂಗಳೂರು(reporterkarnataka.com): ಮಂಗಳೂರಿನ ಪಾಲ್ದನೆ ಸಂತ ತೆರೆಸಾ ಚರ್ಚಿನ ಲೀಜನ್ ಆಫ್ ಮೇರಿ ಸಂಘಟನೆಯ ಸದಸ್ಯರು ತಮ್ಮ ಧಾರ್ಮಿಕ ಯಾತ್ರೆಯ ಅಂಗವಾಗಿ ಹರಿಹರದ ಆರೋಗ್ಯ ಮಾತೆಗೆ ಸಮರ್ಪಿಸಿದ ದಿ ಬೆಸಿಲಿಕಾ ಆಫ್ ಅವರ್ ಲೇಡಿ ಆಫ್ ಹೆಲ್ತ್ ಇಲ್ಲಿಗೆ ಪ್ರಯಾಣ ಬೆಳೆಸಿದ್ದಾರೆ.
ಚರ್ಚಿನ ಧರ್ಮಗುರು ಫಾ. ಆಲ್ಬನ್ ಡಿ ಸೋಜಾ ಅವರು ಆಶೀರ್ವಚನ ನೀಡಿ ಚಾಲನೆ ನೀಡಿದರು. ಈ ಸಂದರ್ಭದಲ್ಲಿ ಲೀಜನ್ ಆಫ್ ಮೇರಿ ಸಂಘಟನೆಯ ಅಧ್ಯಕ್ಷೆ ಹೆಲೆನ್ ಲೋಬೊ, ಚರ್ಚಿನ ಉಪಾಧ್ಯಕ್ಷ ಎಲಿಯಾಸ್ ಫೆರ್ನಾಂಡಿಸ್ ಉಪಸ್ಥಿತರಿದ್ದರು.